ಸಿನಿಮಾ ನಟರು ಅಂದ ಮೇಲೆ ಅವರಿಗೆ ಯಂಗ್ ಸ್ಟಾರ್ಸ್ ಜಾಸ್ತಿ ಅಭಿಮಾನಿಗಳು ಇರ್ತಾರೆ.ವಯಸ್ಸಾದವರು ಇತ್ತೀಚಿನ ಸಿನಿಮಾಗಳನ್ನು ನೋಡುವುದೇ ಕಡಿಮೆ ಅಂದರೆ ತಪ್ಪಲ್ಲ ಅವರಿಗೆಲ್ಲ ರಾಜ್ ಕುಮಾರ್ ಉದಯ್ ಕುಮಾರ್ ವಿಷ್ಣುವರ್ಧನ್, ಆರತಿ, ಜಯಂತಿ ಸಿನಿಮಾಗಳೇ ಇಷ್ಟವಾಗುತ್ತದೆ. ಆದರೆ ಅ 82 ವರ್ಷ ವಯಸ್ಸಿನ ಈ ಅಜ್ಜಿಗೆ ನಟ ಕಿಚ್ಚ ಸುದೀಪ್ ಎಂದರೆ ಬಹಳ ಇಷ್ಟವಂತೆ.

ಹೌದು, ಅಂದ ಹಾಗೇ ಅಜ್ಜಿಯ ಹೆಸರು ಪದ್ಮ ತಾತಾಚಾರ್.ಮೈಸೂರಿನಲ್ಲಿ ವಾಸವಾಗಿರುವ ಪದ್ಮ ಇವರು ಮಾತನಾಡಿರುವುದನ್ನು ಕುಟುಂಬದ ಸದಸ್ಯರೊಬ್ಬರು ವಿಡಿಯೋ ಮಾಡಿ ಯೂಟೂಬ್ನಲ್ಲಿ ಅಪ್ಲೋಡ್ ಮಾಡಿದ್ದು ಇದು ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಪದ್ಮ ಅವರು ‘ ಹಲೋ ಸುದೀಪ್ ನಮಸ್ಕಾರ’ ಎಂದು ಮಾತು ಆರಂಭಿಸಿದ್ದಾರೆ.ಇದೇ ವೇಳೇ ಇವರು ಸುದೀಪ್ ಸಿನಿ ಇಂಡಸ್ಟ್ರಿಗೆ ಬಂದು 22 ವರ್ಷ ಆಗಿದೆ ಎಂದು ಕೇಳಿ ಬಹಳ ಖುಷಿಪಟ್ಟಿದ್ದಾರೆ.

ನೀವು ನಿಮ್ಮ ಸ್ವಂತ ಪರಿಶ್ರಮದಿಂದ ಉನ್ನತ ಸ್ಥಾನಕ್ಕೇರಿದ್ದೀರಿ.ಜನರಿಗೆ ಸಹಾಯ ಮಾಡುವ ನಿಮ್ಮ ಗುಣ ನನಗೆ ಇಷ್ಟ.ದೇವರು ನಿಮ್ಮನ್ನೂ ನಿಮ್ಮ ಕುಟುಂಬದವರನ್ನೂ ಚೆನ್ನಾಗಿಟ್ಟಿರಲಿ.

ಒಂದು ಬಾರಿ ನಮ್ಮ ಮನೆಗೆ ಬನ್ನಿ ಎಂದು ಹೇಳಿದ್ದಾರೆ.ಇದೇ ವೇಳೇ ಪದ್ಮ ಅವರ ವಿಡಿಯೋಗೆ ಪ್ರತಿಕ್ರಿಯಿಸಿರುವ ಸುದೀಪ್,ಖಂಡಿತವಾಗಿಯೂ ನಿಮ್ಮ ಮನೆಗೆ ಬರುತ್ತೇನೆ ಅಮ್ಮ,ನಿಮ್ಮ ಆಶಿರ್ವಾದವೇ ನನ್ನ ಸಂಪಾದನೆ ಎಂದು ಟ್ವೀಟ್ ಮಾಡಿದ್ದಾರೆ

ಕೃಪೆ : dailyhunt

LEAVE A REPLY

Please enter your comment!
Please enter your name here