ಮಾಜಿ ಮುಖ್ಯಮಂತ್ರಿ ಎಚ್ಡಿ ದೇವೇಗೌಡ ಅವರ ಪುತ್ರ ಎಚ್ ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ರಾಧಿಕಾ ಸುದ್ದಿಯಲ್ಲಿದ್ದಾರೆ.

ಚುನಾವಣೆಯೊಂದರಲ್ಲಿ ಹೆಚ್ಚು ಪ್ರಚಾರ ಮಾಡಿದ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳದ್ದೇ ಗೂಗಲ್ ನಲ್ಲೂ ಕಾರುಬಾರು. ಆದರೆ ನಟಿ ಮತ್ತು ನಿರ್ಮಾಪಕಿ ರಾಧಿಕಾ ಕನ್ನಡ ಚಲನಚಿತ್ರೋದ್ಯಮದ ಜನಪ್ರಿಯ ನಟಿ.

ಈಗ ಗೂಗಲ್ ನಲ್ಲಿ ಜನರು ಅತೀ ಹೆಚ್ಚು ಹುಡುಕಾಟವನ್ನು ಜನರು ನಡೆಸಿದ್ದು ರಾಧಿಕಾ ಅವರನ್ನೇ ಅಂತೆ.ರಾಧಿಕಾ ಚಲನಚಿತ್ರ ನಟಿ ಮತ್ತು ನಿರ್ಮಾಪಕಿ. ಅವರು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 2000 ರ ದಶಕದ ಆರಂಭದಲ್ಲಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟಿಯಾಗಿದ್ದರು.

ನೀಲಾ ಮೇಘಾ ಶಾಮಾ ಎಂಬ ಸಿನಿಮಾದಲ್ಲಿ ಅಭಿನಯಿಸುವ ಮೂಲಕ 14 ನೇ ವರ್ಷಕ್ಕೆ ಅಂದರೆ ಕಿರಿಯ ವಯಸ್ಸಿನಲ್ಲಿ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಮೊದಲು 2002 ರಲ್ಲಿ ನಿನಗಗಿ ವಿಜಯ್ ರಾಘವೇಂದ್ರ ಅವರ ಜೊತೆ ನಿನಗಾಗಿ ಚಿತ್ರದ ಮೂಲಕ ನಾಯಕಿಯಾಗಿ ಕಾಣಿಸಿಕೊಂಡರು.

ಬಾಕ್ಸ್ ಆಫಿಸ್ ನಲ್ಲಿ ಕೊಳ್ಳೆಹೊಡೆಯುವ ಮೂಲಕ ಉತ್ತಮ ಸಿನಿಮಾವಾಗಿ ಹೊರಹೊಮ್ಮಿತು. 2003 ರಲ್ಲಿ ಐದು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ ರಾಧಿಕಾ ಪ್ರೇಕ್ಷಕರ ಮತ್ತು ವಿಮರ್ಶಕರನ್ನು ಆಕರ್ಷಿಸುವಲ್ಲಿ ವಿಫಲವಾದ ನಂತರ ಅವರ ವೃತ್ತಿಜೀವನವು ಇಳಿಯಿತು.

ಮುಂದೆ ಜೆಡಿಎಸ್ ನ ರಾಜ್ಯಾಧ್ಯಾಕ್ಷ ಕುಮಾರಸ್ವಾಮಿಯನ್ನು ವಿವಾಹವಾದರು. ಆದರೆ ಕುಮಾರಸ್ವಾಮಿಗೆ ಇವರು ಎರಡನೇ ಪತ್ನಿ. ಈಗಾಗಲೇ ಶಮಿಕಾ ಕುಮಾರಸ್ವಾಮಿ ಎನ್ನುವ ಪುಟ್ಟ ಮಗಳು ಕೂಡ ಇದ್ದಾಳೆ.2018 ರ ವಿಧಾನಸಭೆ ಚುನಾವಣೆಯ ನಂತರ ಕುಮಾರಸ್ವಾಮಿ ಈಗ ಅಂತಿಮವಾಗಿ ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್ ಒಕ್ಕೂಟದ ಸರ್ಕಾರದ ಮುಖ್ಯಮಂತ್ರಿಯಾಗಲು ನಿರ್ಧರಿಸಿದ್ದಾರೆ.

ಹೀಗಿರುವಾಗಲೇ ರಾಧಿಕಾ ಕುಮಾರ ಸ್ವಾಮಿಯವರನ್ನು ರಾಧಿಕಾ ಕ್ಯಾಂಟೀನ್, ಚಮ್ಮಕ್ ಚಲೋ ಹಾಡಿನ ತುಣುಕನ್ನು ರಾಧಿಕಾ ಕುಣಿದ ಡ್ಯಾನ್ಸ್ ಗೆ ಸೇರಿಸಿ ಸಿಕ್ಕಾ ಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ, ಹಾಗೂ ಇದು ಜಾಲಾತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿ ಬಿಟ್ಟಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ 2018 ರ ಫಲಿತಾಂಶ ಬಂದಿದ್ದಾಯ್ತು. ಸ್ಪಷ್ಟ ಬಹುಮತ ಸಿಗದೇ ಇದ್ದರೂ, ಮುಖ್ಯಮಂತ್ರಿ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ, ರಾಜೀನಾಮೆ ನೀಡಿದ್ದೂ ಆಯ್ತು. ಈಗ ಎಚ್.ಡಿ.ಕುಮಾರಸ್ವಾಮಿ ಸರದಿ.

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೀಗಿರುವಾಗ ಗೂಗಲ್ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಬೇಕಾದವರು ಕುಮಾರಸ್ವಾಮಿ. ಆದ್ರೆ ಅದಾಗಿಲ್ಲ.

ಆನ್ ಲೈನ್ ಲೋಕದಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿ ಇರುವವರು ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ. ಕಳೆದ ಒಂದು ವಾರದಿಂದ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವ ಸೆಲೆಬ್ರಿಟಿಗಳ ಪೈಕಿ ರಾಧಿಕಾ ಕುಮಾರಸ್ವಾಮಿ ಕೂಡ ಒಬ್ಬರು.

ಗೂಗಲ್ ಟ್ರೆಂಡ್ ನೋಡಿ:

ಮೇ 15 ರ ಬಳಿಕ ಗೂಗಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ ರುದ್ರತಾಂಡವ ಹೇಗಿದೆ ಅನ್ನೋದಕ್ಕೆ ಸ್ಪಷ್ಟ ಸಾಕ್ಷಿ ಇಲ್ಲಿದೆ ನೋಡಿ. ಕಳೆದ ಒಂದು ವಾರದಲ್ಲಿ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಮೊರೆ ಹೋಗಿರುವವರ ಸಂಖ್ಯೆ ಸಿಕ್ಕಾಪಟ್ಟೆ.

ಒಳ್ಳೆಯ ಕಾರಣಕ್ಕಾಗಿ ಅಲ್ಲ:

ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಕುಮಾರಸ್ವಾಮಿ ಒಳ್ಳೆಯ ಕಾರಣಕ್ಕಾಗಿ ಟ್ರೆಂಡ್ ಆಗಿಲ್ಲ. ಬದಲಾಗಿ, ಟ್ರೋಲ್ ಆಗುತ್ತಿದ್ದಾರೆ. ವೈಯುಕ್ತಿಕ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಯನ್ನ ಲೇವಡಿ ಮಾಡುವವರ ಸಂಖ್ಯೆ ಕಳೆದ ಒಂದು ವಾರದಲ್ಲಿ ಹೆಚ್ಚಾಗಿದೆ.

ರಾಧಿಕಾ ಬಗ್ಗೆ ಅಪಹಾಸ್ಯ:

ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ಮೊದಲ ಮದುವೆ ಆದ ವರ್ಷದಲ್ಲಿ ಜನಿಸಿದ್ದ ರಾಧಿಕಾ ಕುಮಾರಸ್ವಾಮಿ, ಇದೀಗ ಈಗ ಅದೇ ಮುಖ್ಯಮಂತ್ರಿಗೆ ಎರಡನೇ ಪತ್ನಿ ಆಗಿದ್ದಾರೆ ಅಂತೆಲ್ಲ ನೆಟ್ಟಿಗರು ಅಪಹಾಸ್ಯ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಹೆಸರಿಗೆ ಮಸಿ:

ರಾಧಿಕಾ ಅವರ ವಿಚಾರವನ್ನಿಟ್ಟುಕೊಂಡು ಕೆಲ ಕಿಡಿಗೇಡಿಗಳು ಆನ್ ಲೈನ್ ನಲ್ಲಿ ಮುಖ್ಯಮಂತ್ರಿಗಳ ಹೆಸರಿಗೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತು.

ರಾಧಿಕಾ ಯಾರು:

ಮಂಗಳೂರು ಮೂಲದ ರಾಧಿಕಾ ಕುಮಾರಸ್ವಾಮಿ 2002 ರಲ್ಲಿ ಬಿಡುಗಡೆ ಆದ ನೀಲ ಮೇಘ ಶ್ಯಾಮ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಪದಾರ್ಪಣೆ ಮಾಡಿದರು. ನಿನಗಾಗಿ ತವರಿಗೆ ಬಾ ತಂಗಿ ಆಟೋ ಶಂಕರ್ ಮಂಡ್ಯ ಹಠವಾದಿ ಸ್ವೀಟಿ ನನ್ ಜೋಡಿ ರುದ್ರತಾಂಡವ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಧಿಕಾ ಕುಮಾರಸ್ವಾಮಿ ನಾಯಕಿ ಆಗಿ ಅಭಿನಯಿಸಿದ್ದಾರೆ.

ಹೆಣ್ಮಗುವಿನ ತಾಯಿ:

ಸ್ವತಃ ನಟಿ ರಾಧಿಕಾ ಹೇಳಿಕೊಂಡಿರುವ ಪ್ರಕಾರ, 2006 ರಲ್ಲಿ ಅವರು ಮುಖ್ಯಮಂತ್ರಿಯೊಬ್ಬರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರ ದಾಂಪತ್ಯದ ಫಲವಾಗಿ ಅವರಿಗೆ ಶಮಿಕಾ ಎಂಬ ಮುದ್ದಾದ ಮಗಳು ಇದ್ದಾಳೆ.

ಸುದ್ದಿಕೃಪೆ ಫಿಲ್ಮಿಬೀಟ್ ಕನ್ನಡ

LEAVE A REPLY

Please enter your comment!
Please enter your name here