ಕಿಚ್ಚ ಸುದೀಪ್ ಕಷ್ಟದಲ್ಲಿದ್ದವರಿಗೆ ಸದಾ ಸಹಾಯ ಹಸ್ತ ಚಾಚುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದಷ್ಟೇ ಅಲ್ಲದೆ ನಮ್ಮ ಜೊತೆಯಲ್ಲಿದ್ದವರನ್ನು ತಮ್ಮಂತೆ ಉತ್ತಮ ಸ್ಥಾನಕ್ಕೆ ತರುವಲ್ಲಿ ಸುದೀಪ್ ಅವರ ಪ್ರಯತ್ನ ಹೆಚ್ಚಾಗಿಯೇ ಇರುತ್ತದೆ.

ಕೆಲವೊಮ್ಮೆ ಕಿಚ್ಚ ತನಗೆ ಪರಿಚಯವಿಲ್ಲದೇ ಇರುವ ವ್ಯಕ್ತಿಗಳಿಗೂ ಸಹಾಯ ಮಾಡಲು ಹಿಂದು ಮುಂದು ಯೋಚನೆ ಮಾಡುವುದಿಲ್ಲ. ಯಾರಿಗೂ ಗೊತ್ತಾಗದಂತೆ ಅಗತ್ಯವಿರುವ ವ್ಯಕ್ತಿಗಳ ಜೀವನದಲ್ಲಿ ಬೆಳಕಾಗಿ ಬಿಡುತ್ತಾರೆ. ಅಂತದೊಂದು ಘಟನೆ ಇತ್ತೀಚಿಗಷ್ಟೇ ನಡೆದಿದೆ.

ಚುನಾವಣೆ ಪ್ರಚಾರಕ್ಕಾಗಿ ಹೋಗಿದ್ದಾಗ ರಸ್ತೆ ಬದಿಯಲ್ಲಿರುವ ಪುಟ್ಟ ಹೋಟೆಲ್ ನಲ್ಲಿ ಕಿಚ್ಚ ತಿಂಡಿ ತಿಂದು ಬಂದಿದ್ದಾರೆ. ಅಷ್ಟೇ ಅಲ್ಲದೆ ಹೋಟೆಲ್ ನಡೆಸುತ್ತಿದ್ದ ಮಾಲೀಕರಿಗೆ ನಿರೀಕ್ಷೆ ಮಾಡದ ಉಡುಗೊರೆ ನೀಡಿದ್ದಾರೆ. ಹಾಗಾದರೆ ಸುದೀಪ್ ಹೋಟೆಲ್ ನವರಿಗೆ ನೀಡಿದ ಹಣವೆಷ್ಟು? ಹೋಟೆಲ್ ನಲ್ಲಿ ನಡೆದ ಘಟನೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ರಸ್ತೆ ಬದಿಯ ಹೋಟೆಲ್ ನಲ್ಲಿ ಊಟ ಮಾಡಿದ ಕಿಚ್ಚ
ರಸ್ತೆ ಬದಿಯಲ್ಲಿ ಊಟ ಮಾಡಿದ ಸುದೀಪ್

ಕಿಚ್ಚ ಸುದೀಪ್ ಇತ್ತೀಚಿಗಷ್ಟೆ ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಪರ ಪ್ರಚಾರಕ್ಕೆ ಹೋದ ವೇಳೆ ಸುದೀಪ್ ಮತ್ತು ಸ್ನೇಹಿತರು ಮೊಳಕಾಲ್ಮೂರು ಗೆ ತೆರಳುವ ಮುನ್ನ ಆಂಧ್ರ ಗಡಿಭಾಗದ ಒಬಳಾಪುರಂ ಬಳಿಯ ರೋಡ್ ಬದಿಯಲ್ಲಿರುವ ಹೋಟೆಲ್ ನಲ್ಲಿ ತಿಂಡಿ ತಿಂದು ಟೀ ಕುಡಿದಿದ್ದಾರೆ.

ಚಿತ್ರನ್ನಕ್ಕೆ 10 ಸಾವಿರ ನೀಡಿದ ಕಿಚ್ಚ
ಹೆಣ್ಣು ಮಕ್ಕಳ ಕಾರ್ಯಕ್ಕೆ ಶ್ಲಾಘನೆ

ರಸ್ತೆ ಪಕ್ಕದಲ್ಲಿ ರಾಧಾ ಎನ್ನುವ ಬಡ ಮಹಿಳೆ ಚಪ್ಪರ ಹಾಕಿಕೊಂಡು ಹೋಟೆಲ್ ನಡೆಸುತ್ತಿದ್ದರು ಅದೇ ಹೋಟೆಲ್ ನಲ್ಲಿ ಸುದೀಪ್ ಚಿತ್ರಾನ್ನ ತಿಂದು ಟೀ ಕುಡಿದಿದ್ದಾರೆ.

ಬಳಿಕ 10 ಸಾವಿರ ರೂಪಾಯಿ ಹಣ ನೀಡಿದ್ದಾರೆ.

ಮಕ್ಕಳಿಗಾಗಿ ಹಣ
ಮಕ್ಕಳಿಗೆ ಉಡುಗೊರೆ ತೆಗೆದು ಕೊಡಲು ಹಣ

ಹತ್ತು ಸಾವಿರ ಹಣವನ್ನು ಪಡೆಯಲು ಹೋಟೆಲ್ ಮಾಲೀಕರಾದ ರಾಧಾ ನಿರಾಕರಿಸಿದ್ದಾರೆ.ಆದರೆ ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಮಕ್ಕಳಿಗೆ ಏನಾದರೂ ಕೊಡಿಸಿ ಎಂದು ಹತ್ತು ಸಾವಿರ ಹಣ ನೀಡಿದ್ದಾರೆ ಸುದೀಪ್.

ವೀಡಿಯೋ ನೋಡಿ

ಕೃಪೆ : ಮಾಯಾ ಬಜಾರ್ 

ಸ್ಟಾರ್ ಗಿರಿ ಲೆಕ್ಕಿಸದ ಕಿಚ್ಚ
ಕಿಚ್ಚನ ಪ್ರೀತಿಗೆ ಖುಷಿಯಾದ ಜನರು

ಕಿಚ್ಚ ಸುದೀಪ್ ಯಾವುದೇ ರೀತಿಯ ಬೇಸರವಿಲ್ಲದೆ ಹೋಟೆಲ್ ನಲ್ಲಿ ಊಟ ಮಾಡಿ ಬಂದಿದ್ದಾರೆ. ನಾನು ಒಬ್ಬ ಸ್ಟಾರ್ ಎನ್ನುವುದನ್ನ ಲೆಕ್ಕಿಸದೇ ಅಲ್ಲಿಯ ಜನರ ಜೊತೆ ಸಮಯ ಕಳೆದಿದ್ದಾರೆ. ಹೋಟೆಲ್ ನಲ್ಲಿದ್ದವರು ಕೂಡ ಇದರಿಂದ ಖುಷಿಯಾಗಿದ್ದಾರೆ.

ಕೃಪೆ ಡೈಲಿ ಹಂಟ್ 

LEAVE A REPLY

Please enter your comment!
Please enter your name here