ಈ ಥಿಯೇಟರ್ ನಲ್ಲಿ ಇಂದಿಗೆ ಸಿನಿಮಾ ಶೋ ಮುಗಿಯಿತು…!!! ಯಾವುದು ಆ ಥಿಯೇಟರ್ ?

0
166

ಗಾಂಧಿನಗರದಳ್ಳಿ ಒಂದು ಕಾಲದಲ್ಲಿ ಹೆಜ್ಜೆಗೊಂದು ಚಲನಚಿತ್ರ  ಮಂದಿರಗಳು ಕಾಣಸಿಗುತ್ತಿದ್ದವು.ಮಾಲುಗಳು ಬಂದು ಒಂದಾದ ಮೇಲಂತೆ ಒಂದು ಚಿತ್ರಮಂದಿರಗಳು ನೆಲಕುರುಳುತ್ತಿವೆ,ಕೆಲವೊಂದು ಶಾಪಿಂಗ್  ಕಾಂಪ್ಲೆಸ್ ಗಳಾಗಿ ಬದಲಾಗುತ್ತಿವೆ.ಈಗ ಮತ್ತೊಂದು ಚಿತ್ರಮಂದಿರ ನೆಲಕ್ಕುರುಳಲಿದೆ. ಯಾವುದು ಆ ಚಿತ್ರಮಂದಿರ ಅಂತೀರಾ?

ಅದೇ “ಕಪಾಲಿ'” ಚಿತ್ರಮಂದಿರವನ್ನು ನೆಲಕ್ಕುರುಳಿಸಲು  ಚಿತ್ರಮಂದಿರದ ಮಾಲೀಕರು ನಿರ್ಧಾರಿಸಿದ್ದಾರೆ.

1968ರಲ್ಲಿ ಡಾ.ರಾಜ್ ಕುಮಾರ್ ಅವರ ‘ಮಣ್ಣಿನ ಮಗ’ ಸಿನಿಮಾದ ಮೂಲಕ ಆರಂಭವಾದ ಕಪಾಲಿಯ  ಚಿತ್ರ ಪಯಣ ಈಗ ಹುಲಿರಾಯ ಸಿನಿಮಾದ ಮೂಲಕ ಅಂತ್ಯಗೊಳಿಸಲಿದೆ. 1500 ಸೀಟ್ ಹೊಂದಿದ್ದ ಈ ಚಿತ್ರಮಂದಿರ ಒಂದು ಕಾಲದಲ್ಲಿ ಏಷ್ಯದಲ್ಲಿಯೇ ಅತ್ಯಂತ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆ ಹೊಂದಿತ್ತು.

ಆರ್ಥಿಕ ಮುಗ್ಗಟ್ಟಿನಿಂದಾಗಿ ಕಪಾಲಿ ಈ ಚಿತ್ರಮಂದಿರವನ್ನು ಕೆಡವಲಾಗುತ್ತಿದೆಯಂತೆ.

ಅಣ್ಣಾವ್ರು ಅಭಿನಯದ ಭಕ್ತ ಪ್ರಹ್ಲಾದ,  ಶಿವಣ್ಣ ಅಭಿನಯದ ಓಂ ಸಿನಿಮಾಗಳಿಂದ ಪ್ರಾರಂಭಗೊಂಡು ಜೋಗಯ್ಯ, ನವಗ್ರಹ, ‘ರಾಜಾಹುಲಿ’, ‘ಮುಂಗಾರು ಮಳೆ2’ ಸೇರಿದಂತೆ ಕನ್ನಡದ ನೂರಾರೂ ಸಿನಿಮಾಗಳು ಇಲ್ಲಿ ದಾಖಲೆಯ ಪ್ರದರ್ಶನ ಕಂಡಿದ್ದವು .ಹೀಗೆ ಕಪಾಲಿ ಗಾಂಧಿನಗರದ ಪ್ರಮುಖ ಚಿತ್ರಮಂದಿರದಲ್ಲಿ ಒಂದಾಗಿತ್ತು.

ಸದ್ಯ ‘ಕಪಾಲಿ’ ಚಿತ್ರಮಂದಿರದಲ್ಲಿ ‘ಹುಲಿರಾಯ’ ಸಿನಿಮಾ ಇದ್ದು, ಇಂದು ಅದರ ಕೊನೆಯ ಪ್ರದರ್ಶನವಾಗಲಿದೆ.ಏಷ್ಯಾದ ಅತೀ ದೊಡ್ಡ ಚಿತ್ರಮಂದಿರ ಆಗಿದ್ದ ಕಪಾಲಿಯನ್ನು ಕೆಡವುತ್ತಿರುವುದು ಚಿತ್ರ ಪ್ರೇಮಿಗಳಲ್ಲಿ ಬೇಸರ ತರಿಸಿದೆ…

LEAVE A REPLY

Please enter your comment!
Please enter your name here