ಈ ಬಾರಿಯ ಬಿಗ್ ಬಾಸ್ ನಲ್ಲಿ ಹೊಸತೇನಿದೆ?

0
155

ಕಲರ್ಸ್ ಸೂಪರ್ ಚಾನೆಲ್‌’ ನಲ್ಲಿ ಇದೇ ಭಾನುವಾರದಿಂದ (ಅ.15) ಬಿಗ್ ಬಾಸ್ ಕನ್ನಡ ಸೀಸನ್ 5  ಅದ್ದೂರಿ ಪ್ರಾರಂಭ ಕಾಣಲಿದೆ.ಈ ಬಾರಿಯೂ ನಿರೂಪಕರಾಗಿ ಕಿಚ್ಚ ಸುದೀಪ್ ಅವರೇ ಕಾಣಿಸಿಕೊಳ್ಳಲಿದ್ದಾರೆ.ಬಿಗ್ ಬಾಸ್ ಗಾಗಿ ಈ ಬಾರಿ ಸಹ ಹೊಸ ಮನೆ ನಿರ್ಮಾಣ ಮಾದಲಾಗಿದ್ದು ಸುದೀಪ್ ಭಾನುವಾರ ಈ ಮನೆಯನ್ನು ವೀಕ್ಷಕರಿಗೆ ಪರಿಚಯಿಸಲಿದ್ದಾರೆ. ಈ ಬಾರಿ ಒಟ್ಟು 17  ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಲಿದ್ದಾರೆ.

ಸಾಮಾನ್ಯ ನಾಗರೀಕರಿಗೆ ಅವಕಾಶ?

ಈ ಬಾರಿ ಬಿಗ್ ಬಾಸ್ ನ ಅತೀ ವಿಶೇಷ ಏನೆಂದರೆ ಆರು ಜನ ಸಾಮಾನ್ಯ ನಾಗರೀಕರು ಬಿಗ್ ಬಾಸ್ ಮನೆಯೊಳಗೇ ಸ್ಪರ್ದಿಗಳಾಗಿ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.ವೂಟ್ ಯಾಪ್ ನ ಮೂಲಕ 35-40 ಸಾವಿರ ವಿಡಿಯೋಗಳು ಬಂದಿದ್ದು  ಅದರಲ್ಲಿ ಅಂತಿಮವಾಗಿ ಆರು ಜನರನ್ನು ಆರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿರಿ…

ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಸ್ಪರ್ಧಿಗಳ ಪಟ್ಟಿ ಹೀಗಿದೆ ನೋಡಿ..

ಬಿಗ್ ಬಾಸ್ ಮನೆಯನ್ನು ಹೊಸದಾಗಿ ನಿರ್ಮಿಸಲಾಗಿದ್ದು,ಇದೇ ಭಾನುವಾರ ಕಿಚ್ಚ ಸುದೀಪ್ ಸ್ಪರ್ದಿಗಳನ್ನು ಪರಿಚಯಿಸಿ ಬಿಗ್ ಬಾಸ್ ಮನೆಯೊಳಗೇ ಕಳುಹಿಸಿಕೊಡಲಿದ್ದಾರೆ.

LEAVE A REPLY

Please enter your comment!
Please enter your name here