ಸಾಹಸಿಂಹ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಸಂಬಂಧಪಟ್ಟಂತೆ ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ ,ಈ ನಡುವೆ ನಟ ಯಶ್ ವಿಷ್ಣು ಅವರ ಸ್ಮಾರಕದ ಪರ ಮಾತನಾಡಿದ್ದಾರೆ.

ನಟ ಯಶ್ ಅವರು ಈ ಬಗ್ಗೆ ಮಾತನಾಡಿ ಆದಷ್ಟು ಬೇಗ ವಿಷ್ಣು ಸರ್​ ಅವರಿಗೆ ಸಿಗಬೇಕಾದ ಗೌರವ ಸಿಗಬೇಕು.ವಿಷ್ಣು ಕರ್ನಾಟಕದ ಆಸ್ತಿ ಅವರಿಗೆ ಸಿಗಬೇಕಾದ ಗೌರವ ಸಲ್ಲಿಸಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು

ಒಂದು ವೇಳೆ ವಿಷ್ಣು ಸ್ಮಾರಕದ ಬಗ್ಗೆ ಗಮನ ಕೊಡದಿದ್ದರೆ ನಾವೇ ಅಭಿಮಾನಿಗಳೆಲ್ಲ ಸೇರಿ ಮಾಡ್ತೀವಿ.ಅವರ ಮನೆಯವರು ಒಪ್ಪಿಕೊಂಡ್ರೆ ನಾವೇ ಮಾಡ್ತೀವಿ ಎಂದು ಹೇಳಿದರು.

ಅವರು ನಿನ್ನೆ ಬೆಂಗಳೂರಿನಲ್ಲಿ ನಡೆದ ಅನಿರುದ್ಧ್​ ನಟನೆಯ ರಾಜಸಿಂಹ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದರು

ಇದೇ ವೇಳೆ ನಾನೂ ಕೂಡ ವಿಷ್ಣು ಸಾರ್​ ಅವರ ದೊಡ್ಡ ಅಭಿಮಾನಿ. ಅವರೇ ನಿಜವಾದ ರಾಮಚಾರಿ,ನಾನಲ್ಲ ಎಂದು ವಿಷ್ಣುವರ್ಧನ್​ ಮೇಲಿನ ಅಭಿಮಾನವನ್ನು ಮೆರೆದರು.

LEAVE A REPLY

Please enter your comment!
Please enter your name here