ಈ ವಾರ ಮಜಾ ಟಾಕೀಸ್ ತಂಡದಿಂದ ಬೇಸರದ ಸುದ್ದಿ ಇದೆ…ಏನದು..?

0
221

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋ ಗಳಲ್ಲಿ ಒಂದಾಗಿದ್ದ ‘ಮಜಾ ಟಾಕೀಸ್’ ನೋಡುಗರಿಗೆ ಬೇಸರದ ಸುದ್ದಿ ಇಲ್ಲಿದೆ.’ಮಜಾ ವಿತ್ ಸುಜಾ’ ಬಳಿಕ ‘ಮಜಾ ಟಾಕೀಸ್’ ಮೂಲಕ ಅಪಾರ ವೀಕ್ಷಕರನ್ನು ಸೆಳೆದಿದ್ದ ನಟ ಸೃಜನ್ ಲೋಕೇಶ್ ಕಾರ್ಯಕ್ರಮವನ್ನು ಮುಗಿಸುವ ಬಗ್ಗೆ ತಯಾರಿ ನಡೆಸಿದ್ದಾರೆ.2015 ರ ಫೆಬ್ರವರಿ 7 ರಂದು ಆರಂಭವಾಗಿದ್ದ ‘ಮಜಾ ಟಾಕೀಸ್’ ಕಲರ್ಸ್ ಕನ್ನಡ ವಾಹಿನಿಯಲ್ಲಿ ವೀಕ್ಷಕರನ್ನು ಸೆಳೆದಿತ್ತು.

 

ಸೃಜನ್ ಲೋಕೇಶ್, ಮಂಡ್ಯ ರಮೇಶ್, ವಿ. ಮನೋಹರ್,ಮಿಮಿಕ್ರಿ ದಯಾನಂದ್ ಅಪರ್ಣಾ,ಶ್ವೇತಾಚೆಂಗಪ್ಪ,ಇಂದ್ರಜಿತ್ ಲಂಕೇಶ್, ಪವನ್, ರೆಮೊ, ಕುರಿ ಪ್ರತಾಪ್ ಮೊದಲಾದವರು ‘ಮಜಾ ಟಾಕೀಸ್’ನಲ್ಲಿ ಮಿಂಚಿ ಜನರನ್ನು ನಕ್ಕು ನಗಿಸಿದ್ದಾರೆ.

ಕಳೆದ ಶನಿವಾರ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ‘ಮಜಾ ಟಾಕೀಸ್’ ಅಂತಿಮ ಸಂಚಿಕೆ ಚಿತ್ರೀಕರಣ ನಡೆದಿದ್ದು, ದೀಪಾವಳಿ ಹಬ್ಬದಂದು ಪ್ರಸಾರವಾಗಲಿದೆ ಎನ್ನಲಾಗಿದೆ.

ಮಜಾ ಟಾಕೀಸ್ ಕಾರ್ಯಕ್ರಮದ ಸಂತೋಷದ ಪಯಣ ಕೊನೆಯ ಹಂತಕ್ಕೆ ಬಂದಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here