ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹೊಸ ರಾಜಕೀಯ ಪಕ್ಷದ ಮೂಲಕ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಪ್ರಬಲ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ತಯಾರಿ ಮಾಡುತ್ತಿರುವ ಉಪ್ಪಿ ಚೊಚ್ಚಲ ಬಾರಿಗೆ ವಿಧಾನ ಸೌಧ ಪ್ರವೇಶ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ಉಪ್ಪಿ ಪಾರ್ಟಿಯ ಪ್ರಣಾಳಿಕೆ ಬಿಡುಗಡೆಯಾಗಿದ್ದು ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡಿದೆ. ಒಂದು ವೇಳೆ ಉಪೇಂದ್ರ ಗೆದ್ದು ಮುಖ್ಯಮಂತ್ರಿಯಾದ್ರೆ? ಎಂಬ ಪ್ರಶ್ನೆಗಳು ಅಭಿಮಾನಿಗಳನ್ನ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಯಾಗ್ತಿದೆ.

ಈ ಪ್ರಶ್ನೆ ಸ್ವತಃ ಉಪೇಂದ್ರ ಅವರೇ ಉತ್ತರಿಸಿದ್ದಾರೆ, ಉಪೇಂದ್ರ ಏನಾದರೂ ಮುಖ್ಯಮಂತ್ರಿಯಾದರೇ, ಮೊದಲು ಮಾಡುವ ಕೆಲಸ ಏನು ಎಂದು ಬಹಿರಂಗಪಡಿಸಿದ್ದಾರೆ. ಏನದು ನೋಡಿ

ಮುಖ್ಯಮಂತ್ರಿ ಆದ್ರೆ
ಉಪ್ಪಿಯ ಮೊದಲ ಕೆಲಸ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉಪ್ಪಿ ಪಕ್ಷ ಬಹುಮತದಿಂದ ಗೆದ್ದು ಮುಖ್ಯಮಂತ್ರಿ ಆದರೇ, ಮೊದಲ ವಿಧಾನಸೌದಕ್ಕೆ ಬಾಗಿಲು ಹಾಕ್ತಾರಂತೆ. ಹೌದು, ಅಚ್ಚರಿಯಾದ್ರು ಈ ತ್ಯವನ್ನ ನಂಬಲೇಬೇಕು.

ವಿಧಾನಸೌದಕ್ಕೆ ಬೀಗ ಹಾಕ್ತೀನಿ
ಯಾರಿ ನಂ.1 ಶೋನಲ್ಲಿ ಉಪ್ಪಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಟಾಕ್ ಶೋ ಯಾರೀ ನಂ1 ಕಾರ್ಯಕ್ರಮದಲ್ಲಿ ಉಪೇಂದ್ರ ಅತಿಥಿಯಾಗಿದ್ದರು. ಈ ವೇಳೆ ಶಿವಣ್ಣ ನೀವು ಮುಖ್ಯಮಂತ್ರಿಯಾದ್ರೆ ಮಾಡುವ ಮೊದಲ ಕೆಲಸವೇನು ಎಂದು ಪ್ರಶ್ನಿಸಿದ್ದರು. ಅದಕ್ಕೆ ಉಪ್ಪಿ ”ವಿಧಾನಸೌದಕ್ಕೆ ಬಾಗಿಲು ಹಾಕ್ತೀನಿ” ಎಂದಿದ್ದಾರೆ.

ಇದರ ಅರ್ಥ ಬೀಗ ಹಾಕಿ ಮುಂದೇನು ಮಾಡಲ್ಲ ಅಂತ ಅಲ್ಲ ಬದಲಾಗಿ ಉಪ್ಪಿ ಏನೋ ದೊಡ್ಡ ಪ್ಲಾನ್ ಹೊಂದಿದ್ದಾರೆ, ಅವರ ಆಡಳಿತದ ವೈಖರಿಯೇ ತುಂಬಾ ಡಿಫರೆಂಟ್.

ಉಪೇಂದ್ರ ಹೊಸ ಚಿತ್ರದ ಶೀರ್ಷಿಕೆ
ಉಪ್ಪಿ ಹೊಸ ಚಿತ್ರದ ಟೈಟಲ್ ಏನು ಗೊತ್ತಾ?

ಉಪ್ಪಿ ಹೊಸ ಸಿನಿಮಾದಲ್ಲಿ ಅಭಿನಯಿಸಿದ್ರೆ ಆ ಚಿತ್ರದ ಟೈಟಲ್ ಗೆ ಯಾವ ಚಿಹ್ನೆ ಇಡುತ್ತೀರಾ ಎಂದು ಶಿವಣ್ಣ ಕೇಳಿದರು, ಅದಕ್ಕೆ ಪ್ರತಿಕ್ರಿಯಿಸಿದ ಉಪ್ಪಿ ಎರಡು ಬೆರಳಗಳನ್ನ ಮೇಲತ್ತಿ ರಾಜಕೀಯ ವ್ಯಕ್ತಿಗಳಂತೆ ಸಹ್ನೆ ಮಾಡಿ ತೋರಿಸಿದರು.

ಭಾನುವಾರ ಮಾತ್ರ
ಫೆಬ್ರವರಿ 25 ರಿಂದ ಆರಂಭ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾರಥ್ಯದಲ್ಲಿ ಆರಂಭವಾಗಲಿರುವ ಯಾರಿ ನಂ . 1 ಕಾರ್ಯಕ್ರಮ ಇದೇ ಫೆಬ್ರವರಿ 25 ರಿಂದ ಪ್ರತಿ ಭಾನುವಾರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.

ಓಂ 2 ಬರುತ್ತಾ?

ಓಂ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಸಿನಿಮಾ, ಉಪೇಂದ್ರ ಅವರ ತಲೆಗೆ ಶಿವಣ್ಣನ ಕಲೆಗೆ ಒಳ್ಳೆಯ ಬೆಲೆ ಸಿಕ್ಕಿದ್ದು ‘ಓಂ’ ಸಿನಿಮಾದಿಂದ. ಆದರೆ ಈಗ ‘ಓಂ 2’ ಬರುತ್ತಾ ಎಂಬ ಕುತೂಹಲ ಹುಟ್ಟಿದೆ.

‘ಓಂ 2’ ಸಿನಿಮಾದ ಬಗ್ಗೆ ಫೇಸ್ ಬುಕ್ ನಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ನಟ ಉಪೇಂದ್ರ. ಉಪೇಂದ್ರ ನಿನ್ನೆ ಶಿವಣ್ಣನೊಂದಿಗೆ ತೆಗೆದ ಒಂದು ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದರು. ಅದರ ಜೊತೆಗೆ ‘Om 2 coming ?’ ಎಂದು ಬರೆದು ಎಲ್ಲರ ತಲೆಗೆ ಹುಳ ಬಿಟ್ಟಿದ್ದರು.

ಹಾಗಾದ್ರೆ, ಉಪೇಂದ್ರ ಈಗ ಮತ್ತೆ ಶಿವರಾಜ್ ಕುಮಾರ್ ಜೊತೆ ಸೇರಿ ‘ಓಂ 2’ ಸಿನಿಮಾ ಮಾಡುತ್ತಾರಾ? ನೋಡಿ,ನಟ ಶಿವರಾಜ್ ಕುಮಾರ್ ಸ್ಟಾರ್ ಸುವರ್ಣ ವಾಹಿನಿಗೆ ಒಂದು ಹೊಸ ಟಾಕ್ ಶೋ ಮಾಡುತ್ತಿದ್ದಾರೆ. ವಿಶೇಷ ಅಂದರೆ ಈ ಕಾರ್ಯಕ್ರಮದ ಮೊದಲ ಅತಿಥಿ ಆಗಿ ನಟ ಉಪೇಂದ್ರ ಭಾಗಿಯಾಗಿದ್ದಾರೆ.

ನಂ 1 ಯಾರಿ ವಿತ್ ಶಿವಣ್ಣ ? ಸ್ಟಾರ್ ಸುವರ್ಣ ವಾಹಿನಿಯ ಹೊಸ ಟಾಕ್ ಶೋ. ತೆಲುಗಿನಲ್ಲಿ ಇದೇ ಕಾರ್ಯಕ್ರಮವನ್ನು ನಟ ರಾಣಾ ದಗ್ಗುಬಾಟಿ ನಡೆಸಿಕೊಂಡುತ್ತಿದ್ದಾರೆ. ಕನ್ನಡದ ಈ ಹೊಸ ಕಾರ್ಯಕ್ರಮದ ಮೂಲಕ ಮತ್ತೆ ಶಿವಣ್ಣ ಕಿರುತೆರೆಗೆ ಮರಳಿದ್ದಾರೆ.

ಈ ಕಾರ್ಯಕ್ರಮದ ಶೂಟಿಂಗ್ ವೇಳೆ ಉಪೇಂದ್ರ, ಶಿವಣ್ಣನ ಜೊತೆಗೆ ಒಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ‘Om 2 coming ?’ ಎಂದು ಉಪ್ಪಿ ಬರೆದಿದ್ದಾರೆ. ಇದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತೆ ಆಗಿದೆ.

ಉಪೇಂದ್ರ ಅವರ ಈ ಫೋಟೋ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ”ಮತ್ತೆ ಶಿವಣ್ಣನಿಗೆ ಉಪೇಂದ್ರ ನಿರ್ದೇಶನ ಮಾಡಲಿ.. ‘ಓಂ 2’ ಸಿನಿಮಾ ಬರಲಿ” ಎಂದು ಸಾಕಷ್ಟು ಜನರು ಕಮೆಂಟ್ಸ್ ಮಾಡುತ್ತಿದ್ದಾರೆ.

Om 2 coming ?’ ಎಂದು ಬರೆದಿರುವ ಉಪ್ಪಿ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದ್ದಾರೆ. ಆದರೆ ‘ಓಂ 2’ ಸಿನಿಮಾ ಬರುವ ಸಾಧ್ಯತೆ ತುಂಬ ಕಡಿಮೆ ಇದೆ. ಯಾಕೆಂದರೆ ಉಪೇಂದ್ರ ಸದ್ಯ ಸಿನಿಮಾ ಬಿಟ್ಟು ಪ್ರಜಾಕೀಯದ ಕೆಲಸದಲ್ಲಿ ಬಿಜಿ ಇದ್ದಾರೆ.

ಇತ್ತ ಶಿವಣ್ಣನ ಸಿನಿಮಾಗಳ ದೊಡ್ಡ ಲಿಸ್ಟ್ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ‘ಓಂ 2’ ಎಂಬ ಹೆಸರಿಗೆ ಅಷ್ಟೇ ಒಳ್ಳೆಯ ಕಥೆ ಬೇಕಾಗಿದೆ.

ಸುದ್ದಿ ಕೃಪೆ ಫಿಲ್ಮಿ ಬೀಟ್ ಕನ್ನಡ

1 COMMENT

LEAVE A REPLY

Please enter your comment!
Please enter your name here