ಕನ್ನಡದ ಕೋಟ್ಯಾಧಿಪತಿ.ಕನ್ನಡ ಕಿರುತೆರೆಯಲ್ಲಿ ಒಂದು ಕಾಲದಲ್ಲಿ ದೊಡ್ಡದೊಂದು   ರೋಮಾಂಚನ ಕೊಟ್ಟಂತ ಕಾರ್ಯಕ್ರಮವಾಗಿತ್ತು.ಕೆಲವು ವರ್ಷಗಳ ಹಿಂದೆ ಪ್ರತಿ ರಾತ್ರಿ 8 ಕ್ಕೆ ಸಹಜ ನಗುವಿನೊಂದಿಗೆ ನಮ್ಮ ಪವರ್ ಸ್ಟಾರ್ ಅಪ್ಪು ತೆರೆಯ ಮೇಲೆ ಬಂದರೆಂದರೆ ಎಲ್ಲರಿಗೂ ಸಂತೋಷವಾಗುತ್ತಿತ್ತು.

ಪ್ರೇಕ್ಷಕರು ಮಾಹಿತಿ ಮನೋರಂಜನೆ ಹಾಗೂ ಅಪ್ಪು ಮಾತುಗಳನ್ನು ಕೇಳೋಕೆ ಅಂತಾನೆ ಕನ್ನಡದ ಕೋಟ್ಯಾಧಿಪತಿ ನೋಡುತ್ತಿದ್ದರು ಆ ಕಾರ್ಯಕ್ರಮ ಅಷ್ಟೊಂದು ಖ್ಯಾತಿ ಗಳಿಸಿತ್ತು.ಈಗ ಕನ್ನಡದ ಕೋಟ್ಯಾಧಿಪತಿ ಮತ್ತೆ ಶುರು ಆಗೋ ಸುದ್ದಿ ಗುಸುಗುಸು ಪ್ರಾರಂಭವಾಗಿದೆ.

ಆದರೆ ಪವರ್ ಪುನೀತ್ ಬೇರೊಂದು ವಾಹಿನಿಯಲ್ಲಿ ಮತ್ತೊಂದು ಕಾರ್ಯಕ್ರಮ ಮಾಡ್ತಿದ್ದಾರೆ.ಆ ಸುದ್ದಿ ಈಗಾಗಲೇ ಖಚಿತಗೊಂಡಿದೆ.ಹಾಗಾಗಿ ಅಪ್ಪು ನಿರೂಪಣೆ ಮಾಡೋದು ಗ್ಯಾರಂಟಿ ಇಲ್ಲ,ಆದರೆ ಕನ್ನಡದ ಕೋಟ್ಯಾಧಿಪತಿಗೆ ಮತ್ತೊಬ್ಬ ನಾಯಕ ನಟನ ಹೆಸರು ಕೇಳಿ ಬರ್ತಿದೆ.

ಆ ನಟ ಯಾರು ಗೊತ್ತೇ?

ರಾಕಿಂಗ್ ಸ್ಟಾರ್ ಯಶ್ ನಿರೂಪಕರಾಗಬಹುದು ಎಂಬ ಮಾತುಗಳು ಹೆಚ್ಚಾಗಿ ಹರಿದಾಡುತ್ತಿವೆ. ಯಾವುದು ಇನ್ನೂ ಫೈನಲ್ ಆಗಿಲ್ಲ.ಉಪ್ಪಿ ಹೆಸರು ಕೇಳಿ ಬಂದಿದ್ದೂ ಇದೆ. ಅಧಿಕೃತವಾದ ಯಾವುದೇ ಮಾಹಿತಿ ಇನೂ ಹೊರ ಬಿದ್ದಿಲ್ಲ.ಉತ್ತರ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

LEAVE A REPLY

Please enter your comment!
Please enter your name here