ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಚಿತ್ರ ಶೀಘ್ರದಲ್ಲಿಯೇ ಸೆಟ್ಟೇರುವ ಸಾಧ್ಯತೆಯಿದೆ. ಕೆಲವು ದಿನಗಳಿಂದ ದೂರವಾಗಿದ್ದ ತಮ್ಮ ಆಪ್ತ ಸ್ನೇಹಿತನ ಬಗ್ಗೆ ಸುದೀಪ್ ಒಳ್ಳೆಯ ಮಾತನಾಡಿದ್ದಾರೆ.

ಮಲೇಷ್ಯದಲ್ಲಿರುವ ಕಿಚ್ಚ  ಅಭಿಮಾನಿಯೊಬ್ಬ ನೀವಿಬ್ಬರು ಒಂದಾಗಿ ಜೊತೆಯಾಗಿ ಸಿನಿಮಾ ಮಾಡಿ ಎಂದು ಮನವಿ ಮಾಡಿದ ಪ್ರಶ್ನೆಗೆ ಉತ್ತರಿಸುತ್ತಾ ತಮ್ಮ ಸ್ನೇಹ ಎಂದಿಗೂ ದೂರವಾಗಿಲ್ಲ ಇಬ್ಬರಿಗೂ ಒಂದಿಕೆಯಾಗುವ ಒಂದೊಳ್ಳೆಯ ಕಥೆ ಸಿಕ್ಕರೆ ಇಬ್ಬರು ಒಟ್ಟಾಗಿಯೇ ಸಿನಿಮಾ ಮಾಡುತ್ತೇವೆ ಎಂದು ಸ್ನೇಹಹಸ್ತವನ್ನು ಚಾಚಿದ್ದಾರೆ. ಈ ಮಾತುಗಳನ್ನು ಕೇಳಿದರೆ ಇನ್ನು ಕೆಲವೇ ದಿನಗಳಲ್ಲಿ ಇಬ್ಬರು ಒಟ್ಟಾಗಿ ನಟಿಸುವುದು ಯಾವುದೇ ಸಂದೇಹವಿಲ್ಲ.

ಗಾಂಧಿನಗರ ಮಾತ್ರವಲ್ಲದೆ ಲಕ್ಷಾಂತರ ಅಭಿಮಾನಿಗಳು ಕೂಡ ಇಬ್ಬರು ಒಂದಾಗುವುದನ್ನು ಬಯಸುತ್ತಿದ್ದಾರೆ. ಸದ್ಯ ಸುದೀಪ್ ಅಂಬಿ ನಿಂಗೆ ವಯಸಾಯ್ತೋ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೆ, ದರ್ಶನ್ ಕುರುಕ್ಷೇತ್ರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತಲ್ಲಿನರಾಗಿದ್ದಾರೆ.

ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ಬೇಕು ಒಟ್ಟಿಗೆ ವೇದಿಕೆ ಹಂಚ್ಕೊಬೇಕು ಒಟ್ಟಿಗೆ ಕಾಣಿಸಿಕೊಳ್ಳಬೇಕು ಎಂಬುದು ಇಬ್ಬರು ಅಭಿಮಾನಿಗಳ ಆಸೆ ಮತ್ತು ಕೋರಿಕೆ.

ಇದು ಯಾವಾಗ ನೆರವೇರುತ್ತೆ ಎಂದು ಡಿ ಬಾಸ್ ಮತ್ತು ಕಿಚ್ಚ ಅಭಿಮಾನಿಗಳು ಕಾಯ್ತಿದ್ದಾರೆ. ಈ ಇಬ್ಬರು ನಟರು ಸಿಕ್ಕಾಗೆಲ್ಲ ಯಾವಾಗ ಸಿನಿಮಾ ಮಾಡ್ತೀರಾ, ಯಾವಾಗ ಇಬ್ಬರು ಸಿನಿಮಾ ಮಾಡ್ತೀರಾ ಎಂದು ಕೇಳುತ್ತಲೇ ಇರ್ತಾರೆ.

ಇನ್ನು ದರ್ಶನ್ ಮತ್ತು ಸುದೀಪ್ ಕೂಡ ಇಂತಹ ಪ್ರಶ್ನೆಗಳಿಗೆ ಪರೋಕ್ಷವಾಗಿ ಉತ್ತರ ಕೊಡುತ್ತಾ ಬರುತ್ತಿದ್ದಾರೆ. ಇದೀಗ ಡಿಬಾಸ್ ಅಭಿಮಾನಿಯೊಬ್ಬರು ಸುದೀಪ್ ಅವರಿಗೆ ಟ್ವಿಟ್ಟರ್ ಮೂಲಕ ಇಂತಹದ್ದೇ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಅದಕ್ಕೆ ಸುದೀಪ್ ಕೂಡ ಕೂಲ್ ಆಗಿ ರೆಸ್ಪಾನ್ಸ್ ನೀಡಿದ್ದಾರೆ.

ಒಟ್ಟಿಗೆ ಸಿನಿಮಾ ಮಾಡಿ
ಅಭಿಮಾನಿ ಕೇಳಿದ ಪ್ರಶ್ನೆ

ನಮ್ಮ ದರ್ಶನ್ ಬಾಸ್ ಜೊತೆ ನೀವು ಯಾವಾಗ ಸಿನಿಮಾ ಮಾಡ್ತೀರಾ ಸುದೀಪ್ ಸರ್. ನಿಮ್ಮರನ್ನ ಒಂದೇ ಸಿನಿಮಾದಲ್ಲಿ ನೋಡಲು ಕಾಯ್ತಿದ್ದೀವಿ. ಈ ಸಿನಿಮಾ ಬಂದ್ರೆ ಖಂಡಿತಾ ಬಾಕ್ಸ್ ಆಫೀಸ್ ಚಿಂದಿ ಆಗುತ್ತೆ” ಎಂದು ದರ್ಶನ್ ಅಭಿಮಾನಿಯೊಬ್ಬ ಸುದೀಪ್ ಅವರನ್ನ ಪ್ರಶ್ನಿಸಿದ್ದಾರೆ.

ಯಾವಾಗಬೇಕಾದರೂ ಆಗಬಹುದು
ಸುದೀಪ್ ಕೊಟ್ಟ ಕೂಲ್ ಉತ್ತರ

ದರ್ಶನ್ ಜೊತೆ ಸಿನಿಮಾವನ್ನ ಯಾವಾಗ ಬೇಕಾದರೂ ಮಾಡಬಹುದು ಎಂದು ಹೇಳುವ ಮೂಲಕ ಅಭಿಮಾನಿಗಳ ಆಸೆಯನ್ನ ಜೀವಂತವಾಗಿರಿಸಿದ್ದಾರೆ. ಬಹುಶ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡೋದು ಅನುಮಾನ, ಇನ್ನು ಮುಂದೆ ಇದು ನಡೆಯದ ಕೆಲಸ ಎಂದು ಅನೇಕರು ಅಂದುಕೊಂಡಿದ್ದಾರೆ. ಆದ್ರೆ ಸುದೀಪ್ ಅವರ ಮಾತು ಕೇಳಿದ ಮೇಲೆ ಈ ಆಸೆ ಮತ್ತಷ್ಟು ಹೆಚ್ಚಾಗಿದೆ.

ಕಥೆ ಬೇಕು ಸಿನಿಮಾ ಆಗುತ್ತೆ
ಒಟ್ಟಿಗೆ ಸಿನಿಮಾ ಮಾಡಲು ಸ್ಕ್ರಿಪ್ಟ್ ಬೇಕು

ಹೌದು ಸುದೀಪ್ ಅವರು ಹೇಳುವ ಪ್ರಕಾರ ದರ್ಶನ್ ಜೊತೆ ಯಾವಾಗ ಬೇಕಾದರು ಮಾಡುತ್ತೇನೆ ಆದ್ರೆ ಅದಕ್ಕೆ ಒಳ್ಳೆಯ ಸ್ಕ್ರಿಪ್ಟ್ ಬೇಕು ಅಲ್ವಾ? ಇಬ್ಬರು ದೊಡ್ಡ ಹೀರೋಗಳು ಒಟ್ಟಿಗೆ ಸಿನಿಮಾ ಮಾಡ್ತಾರೆ ಅಂದ್ರೆ ಎರಡು ಪಾತ್ರಗಳಿಗೂ ಸಮಾನ ಮಹತ್ವವಿರಬೇಕು. ಅಂತಹ ಕಥೆ ಬೇಕು ಅದಕ್ಕೆ ದೊಡ್ಡ ಬಂಡವಾಳ ಬೇಕು ಮತ್ತು ನಿರ್ಮಾಪಕರು ಮುಂದೆ ಬರಬೇಕು.

ನವರಸ ನಾಯಕ
ಜಗ್ಗೇಶ್ ಕೂಡ ಹಿಂದೊಮ್ಮೆ ಹೇಳಿದ್ದರು

ದರ್ಶನ್ ಮತ್ತು ಸುದೀಪ್ ಯಾವಾಗ ಒಂದಾಗ್ತಾರೆ ಎಂದು ಅಭಿಮಾನಿಯೊಬ್ಬ ಕೇಳಿದ್ದಕ್ಕೆ ನಟ ಜಗ್ಗೇಶ್ ಅವರು ಉತ್ತರಿಸಿದ್ದರು. ನಿಮ್ಮ ಪ್ರೀತಿ ಹಾರೈಕೆಯಿಂದ ಅವರಿಬ್ಬರು ಒಟ್ಟಿಗೆ ಇರುತ್ತಾರೆ ಅನುಮಾನ ಬೇಡ ಎಷ್ಟೋ ಬಾರಿ ಅಣ್ಣ-ತಮ್ಮ ಗಂಡ-ಹೆಂಡತಿ ಬಂಧು-ಬಳಗ ದೇಶ-ದೇಶಗಳ ಸ್ನೇಹದ ಮುನಿಸು ಮಳೆ ಬಂದ ಮೇಲೆ ಕರಗೋ ಮೋಡದಂತೆ ಕರಗುತ್ತದೆ,ಮುನಿಸು ಕ್ಷಣಿಕ ಸ್ನೇಹ ನಿರಂತರ. ಅವರ ಸ್ನೇಹ ಚಿಗುರಲಿ ಎಂದು ಆಶಾಭಾವದೊಂದಿಗೆ ನಿಮ್ಮಂತೆ ನಾನು ಒಬ್ಬ ಕಾಯುತ್ತಿರುವೆ ಎಂದಿದ್ದಾರೆ.

ಬಹುಶಃ ಒಂದಾಗಬಹುದು
ದರ್ಶನ್-ಸುದೀಪ್ ಒಂದಾಗೋ ಕಾಲ ಬಂದಿದೆ

ಇದೆನ್ನಲ್ಲ ಗಮನಿಸಿದಾಗ ದರ್ಶನ್ ಮತ್ತು ಸುದೀಪ್ ಅವರು ಒಂದಾಗುತ್ತಿದ್ದಾರೆ ಎಂಬುದು ಸತ್ಯವಾದಂತೆ ಕಾಣುತ್ತಿದೆ. ಯಾಕಂದ್ರೆ ಕೇಳೋರು ನೂರು ಜನ ಕೇಳೋರು ಕೇಳ್ಕೊಳ್ಳಿ ಎಂದು ಬಿಡದೇ ಅದೇ ಪ್ರಶ್ನೆಗೆ ಸುದೀಪ್ ಆಯ್ಕೆ ಮಾಡಿಕೊಂಡು ಉತ್ತರ ಕೊಟ್ಟಿದ್ದಾರೆ ಅಂದ್ರೆ ಇದು ಪಾಸಿಟೀವ್ ಆಗಿ ನೋಡಬೇಕಿದೆ.

ಸುದ್ದಿಕೃಪೆ ಫಿಲ್ಮಿಬೀಟ್ ಕನ್ನಡ

LEAVE A REPLY

Please enter your comment!
Please enter your name here