ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೊಂದು ಶುಭಸುದ್ದಿ.. ಏನದು?

0
109

ದಕ್ಷಿಣ ಭಾರತದ ನಮ್ಮ ಚಿತ್ರರಂಗ ಸಂತೋಷ ಪಡುವಂತಹ ಸುದ್ದಿ ದೂರದ ದೇಶದಿಂದ ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಬ್ರಿಟಿಷ್ ಪಾರ್ಲಿಮೆಂಟ್ ನಿಂದ ವಿಶೇಷ ಗೌರವ ಒದಗಿ ಬಂದಿದೆ. ನಮ್ಮೆಲ್ಲರ ಪ್ರೀತಿಯ ದಾಸ ದರ್ಶನ್ ಬ್ರಿಟಿಷ್ ಪಾರ್ಲಿಮೆಂಟ್ ನಿಂದ ಗೌರವಿಸಲ್ಪಡುತ್ತಿರುವ ದಕ್ಷಿಣ ಭಾರತದ ಮೊದಲ ನಟರಾಗಿದ್ದಾರೆ,ಹಾಗೂ ಭಾರತದ ಐದನೇ ನಟರಾಗಿದ್ದಾರೆ ದರ್ಶನ್.

ಇದನ್ನೂ ಓದಿರಿ..

ಶೂಟಿಂಗ್ ಮುಗಿಯುವ ಮೊದಲೇ ಕುರುಕ್ಷೇತ್ರ ಸಿನಿಮಾ ಮಾಡಿದ ದಾಖಲೆ ಏನು ಗೊತ್ತೇ?

ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಗೆ ಬ್ರಿಟಿಷ್ ಪಾರ್ಲಿಮೆಂಟ್ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಈಗ ದರ್ಶನ್ ಸರದಿ.ಸದ್ಯ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ.ಈ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡಿದೆ. ಡಬ್ಬಿಂಗ್ ರೈಟ್ಸ್ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿ ದಾಖಲೆ ಬರೆದಿದೆ.

ಇದನ್ನೂ ಓದಿರಿ…

50 ಕೋಟಿ ಕ್ಲಬ್ ಸೇರಬಹುದೇ ದರ್ಶನ್ ಅಭಿನಯದ ತಾರಕ್..?

ಅಕ್ಟೋಬರ್ 19ಕ್ಕೆ ಗೌರವ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 18ರಂದು ದರ್ಶನ್ ಲಂಡನ್ ಗೆ ತೆರಳಲಿದ್ದಾರೆ ಎನ್ನಲಾಗ್ತಿದೆ.ಕನ್ನಡ ಸಿನಿಮಾ ರಂಗಕ್ಕೆ ದರ್ಶನ್ ಸಲ್ಲಿಸಿದ ವಿಶೇಷ ಸೇವೆಗಾಗಿ ಈ ಪ್ರಶಸ್ತಿ ಕೊಡಲಾಗುತ್ತಿದೆ.

LEAVE A REPLY

Please enter your comment!
Please enter your name here