ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51ನೇ ಸಿನಿಮಾ ಯಜಮಾನ.ಈ ಚಿತ್ರದ ಚಿತ್ರೀಕರಣ ಈಗಾಗಲೇ ಮೈಸೂರಿನಲ್ಲಿ ಆರಂಭಗೊಂಡಿದೆ.

ಯಜಮಾನ ನಾಗಿ ದರ್ಶನ್ ಬಿಳಿ ಶರ್ಟ್ ಹಾಗೂ ಬಿಳಿ ಪಂಚೆ ತೊಟ್ಟು ಕಂಗೊಳಿಸಿರುವ ಫೋಟೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹುಟ್ಟುಹಬ್ಬಕ್ಕಾಗಿ ಬ್ರೇಕ್ ತೆಗೆದುಕೊಂಡಿದ್ದ ಡಿ ಬಾಸ್ ಹುಟ್ಟು ಹಬ್ಬ ಮುಗಿದ ತಕ್ಷಣವೇ ಯಜಮಾನನಾಗಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ಸಿನಿಮಾದ ಟೈಟಲ್ ಕೇಳಿದರೇ ಸಾಕಷ್ಟು ನಿರೀಕ್ಷೆಗಳು ಮೂಡುವಂತಹ ಸಿನಿಮಾದಲ್ಲಿ ಡಿ ಬಾಸ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.

ಸದ್ಯ ದರ್ಶನ್ ಯಜಮಾನನ ಗೆಟಪ್ ತುಂಬಾ ವಿಭಿನ್ನವಾಗಿಯೇ ಇದೆ ಅನ್ನುವುದು ತಿಳಿದು ಬಂದಿದೆ.ಮೈಸೂರಿನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ.ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ ಹಾಗೂ ಧನಂಜಯ್ ಅಭಿನಯಿಸುತ್ತಿರುವುದು ಈ ಚಿತ್ರದ ವಿಶೇಷಗಳಲ್ಲೊಂದು.

ದರ್ಶನ್ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಈಗಾಗಲೇ ಫಿದಾ ಆಗಿದ್ದಾರೆ. ಹಾಗಾದರೇ ದರ್ಶನ್ ಹೊಸ ಗೆಟಪ್ ಹೇಗಿದೆ? ಯಜಮಾನ ಸಿನಿಮಾದ ಚಿತ್ರೀಕರಣ ಎಲ್ಲಿ ನಡೆಯುತ್ತಿದೆ ಗೊತ್ತೇ?

ದರ್ಶನ್ ಅಭಿನಯದ 51 ನೇ ಸಿನಿಮಾ ಯಜಮಾನ ಚಿತ್ರೀಕರಣ ಶುರು ಆಗಿದೆ.ಡಿ ಬಾಸ್ ಈ ಚಿತ್ರದಲ್ಲಿ ಪಕ್ಕ ಕನ್ನಡದ ಮಣ್ಣಿನ ಮಗನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಹಾಕಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ಯಜಮಾನ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವವರು ಇವರೇ.ಹೆಸರು ಅನೂಪ್ ಸಿಂಗ್ ಠಾಕೂರ್.ಅನೂಪ್ ಸಿಂಗ್ ಠಾಕೂರ್ ಜೊತೆಗೆ ರವಿಶಂಕರ್ ಹಾಗೂ ಧನಂಜಯ್ ಕೂಡ ದರ್ಶನ್ ಗೆ ಸವಾಲು ಹಾಕಲಿದ್ದಾರೆ.

ಕೃಪೆ : ಫಿಲ್ಮಿಬೀಟ್ 

LEAVE A REPLY

Please enter your comment!
Please enter your name here