ಕಳೆದ ವರ್ಷದಿಂದಲೂ ಕನ್ನಡ ಸಿನಿಮಾ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿರುವ ಟಗರು ಚಿತ್ರದ ಇದೇ ವಾರ (ಫೆ 23) ತೆರೆಗೆ ಬರ್ತಿದೆ.ಶಿವರಾಜ್ ಕುಮಾರ್, ಧನಂಜಯ, ವಸಿಷ್ಠ,ಭಾವನಾ,ಮಾನ್ವಿತಾ ಹರೀಶ್ ಹೀಗೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಟಗರು ಪ್ರೇಕ್ಷಕರು ಊಹೆ ಮಾಡಿಕೊಳ್ಳಲು ಆಗದಂತ ಇರುವ ಕಥೆಯಂತೆ. ಈಗಿನ ಪ್ರೇಕ್ಷಕರು ತುಂಬಾ ಬುದ್ದಿವಂತರಾಗಿದ್ದಾರೆ. ಯಾವುದೇ ಸಣ್ಣ ಸೀನ್ ನೋಡಿದರು ಮುಂದೆ ಏನಾಗುತ್ತದೆ ಎನ್ನುವುದನ್ನ ಯೋಚನೆ ಮಾಡಿರುತ್ತಾರೆ ಅದೇ ನಿಟ್ಟಿನಲ್ಲಿ ಚಿತ್ರಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ ಅಂತೆ.

ಟಗರು ಸಿನಿಮಾವನ್ನ ಟೈಟಲ್ ಕಾರ್ಡ್ ನಿಂದಲೇ ನೋಡಬೇಕಂತೆ. ನೀವು ಟೈಟಲ್ ಕಾರ್ಡ್ ಮಿಸ್ ಮಾಡಿಕೊಂಡರೆ ಸಿನಿಮಾದ ಕಥೆಯನ್ನೇ ಮಿಸ್ ಮಾಡಿಕೊಂಡಂತೆ ಎಂದು ನಿರ್ದೇಶಕ ಸೂರಿ ಹೇಳಿದ್ದಾರೆ.

ಟೀಸರ್ ಮತ್ತು ಮೇಕಿಂಗ್ ನಿಂದ ತೀರ ಕುತೂಹಲ ಮೂಡಿಸಿರುವ ಟಗರು ಚಿತ್ರವನ್ನ ನೊಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ಸಿನಿಮಾ ಶುರು ಆಗಿ ಹತ್ತು ಹದಿನೈದು ನಿಮಿಷಗಳ ನಂತರ ಥಿಯೇಟರ್ ಗೆ ಬರುವ ಪ್ರೇಕ್ಷಕರಿಗೆ ಈಗಾಗಲೇ ಈ ಮೂಲಕ ಸೂಚನೆ ಸಿಕ್ಕಿದೆ.

ಕೃಪೆ : ಫಿಲ್ಮಿ ಬೀಟ್

LEAVE A REPLY

Please enter your comment!
Please enter your name here