“ದಯವಿಟ್ಟು ಗಮನಿಸಿ” ವರ್ಲ್ಡ್ ಪ್ರಿಮಿಯರ್ ಶೋ ಅಕ್ಟೋಬರ್ 15ಕ್ಕೆ…

0
96

ರೋಹಿತ್ ಪದಕಿ ನಿರ್ದೇಶನದ ದಯವಿಟ್ಟು ಗಮನಿಸಿ ಚಿತ್ರ ವರ್ಲ್ಡ್ ಪ್ರಿಮಿಯರ್ ಶೋವನ್ನು ಆಸ್ಟ್ರೇಲಿಯಾದಲ್ಲಿ ಮಾಡುವ ಯೋಚನೆ ಮಾಡಿದ್ದಾರೆ ನಿರ್ದೇಶಕರು.

ಹಾಡುಗಳಿಂದಲೇ ಮನೆಮಾತಾಗಿರುವ ದಯವಿಟ್ಟು ಗಮನಿಸಿ ಎಂಬ ವಿಚಿತ್ರ ಶೀರ್ಷಿಕೆ ಇರುವ ಚಿತ್ರ ಅಕ್ಟೋಬರ್ 15 ರಂದು ಸಿಡ್ನಿ, ಮೆಲ್ಬೋರ್ನ್ ಸೇರಿದಂತೆ ಹಲವು ಕಡೆ ಪ್ರದರ್ಶನ ಕಾಣಲಿದೆ. ಅದಕ್ಕಾಗಿ ಭರದಿಂದ ಸಿದ್ದತೆ ಕೂಡ ಮಾಡಿಕೊಂಡಿದ್ದಾರೆ. ನಿರ್ದೇಶಕರು ತಮ್ಮದೇ ಜೀವನದಲ್ಲಿ ನಡೆದ ಘಟನೆಯನ್ನು ಪ್ರೇರಣೆಯಾಗಿಟ್ಟುಕೊಂಡು ಚಿತ್ರಕತೆ ಹೆಣೆದಿದ್ದಾರಂತೆ .

ಈ ಸಿನಿಮಾದ ಇನ್ನೊಂದು ವಿಶೇಷತೆ ಅಂದರೆ ತಾರಾ ಬಳಗ, ಈ ಸಿನಿಮಾದಲ್ಲಿ ಒಟ್ಟು ನಾಲ್ಕು ಕತೆಗಳಿವೆ. ವಸಿಷ್ಠ ಸಿಂಹ ಮತ್ತು ಸಂಗೀತಾ ಭಟ್, ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ, ಅವಿನಾಶ್ ಷಟಮರ್ಷನ್, ಸುಕೃತಾ ವಾಗ್ಲೆ, ಭಾವನಾ ರಾವ್, ಸಂಯುಕ್ತ ಹೊರನಾಡು ಸೇರಿದಂತೆ ಅನುಭವಿ ಕಲಾವಿದರ ದಂಡೇ ಸಿನಿಮಾದಲ್ಲಿದೆ.

#Dayavittugamanisi #Rohithpadaki #vasistasimha #Sangeethabhat

LEAVE A REPLY

Please enter your comment!
Please enter your name here