ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಬ್ರೇಕ್ ಕೊಟ್ಟಿದ್ದ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪಿ.ಎನ್.ಸತ್ಯ ಇಂದು ವಿಧಿವಶರಾಗಿದ್ದಾರೆ.

ಕಳೆದ ಒಂದು ವರ್ಷದಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸತ್ಯ ಅವರಿಗೆ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಶುಕ್ರವಾರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮನೆಗೆ ಕರೆದುಕೊಂಡು ಬರಲಾಗಿತ್ತು.ಆದ್ರೆ ಇಂದು ಸಂಜೆ ಲೋ ಬಿಪಿ ಆದ ಕಾರಣ ಕೊನೆ ಉಸಿರೆಳೆದಿದ್ದಾರೆ.ಬಸವೇಶ್ವರನಗರದ ಸತ್ಯವರ ಸೋದರಿ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗ್ತಿದೆ.

ಮೆಜೆಸ್ಟಿಕ್, ಡಾನ್, ದಾಸ, ಸರ್ದಾರ, ಉಡೀಸ್, ಶಾಸ್ತ್ರೀ, ತಂಗಿಗಾಗಿ, ಗೂಳಿ, ಕೆಂಚ, ಹ್ಯಾಟ್ರಿಕ್ ಹೊಡಿ ಮಗ, ಸುಗ್ರೀವ, ಪಾಗಲ್, ಜೇಡರಹಳ್ಳಿ, ಶಿವಾಜಿನಗರ ಬೆಂಗಳುರು ಅಂಡರ್‍ವಲ್ಡ್ ಮತ್ತು ಮರಿ ಟೈಗರ್ ಸೇರಿದಂತೆ 16 ಚಿತ್ರಗಳನ್ನು ಪಿ.ಎನ್.ಸತ್ಯ ನಿರ್ದೇಶಿಸಿದ್ದರು.

ನಿರ್ದೇಶನ ಮಾತ್ರವಲ್ಲದೇ 21 ಚಿತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಮರಿ ಟೈಗರ್ ಸತ್ಯ ನಿರ್ದೇಶನದ ಕೊನೆಯ ಚಿತ್ರ.

ಕೃಪೆ : ಪಬ್ಲಿಕ್ ಟಿವಿ 

LEAVE A REPLY

Please enter your comment!
Please enter your name here