ನಾಳೆ ಕರ್ನಾಟಕ ರಾಜಕಾರಣದಲ್ಲಿ ಹೊಸ ಬೆಳಕೊಂದು ಬೀಳಲಿದೆ…ಏನದು ಅಂತ ಯೋಚನೆಯೇ? ಓದಿ ಮುಂದೆ

ನಾಳೆ ರಾಜಕೀಯ ರಂಗಕ್ಕೆ ಮತ್ತೊಂದು ಪಕ್ಷ ಸೇರ್ಪಡೆಯಾಗಲಿದ್ದು,ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಹೊಸ ಪಕ್ಷದ ಹೆಸರನ್ನುಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ನಾಳೆ ಬೆಂಗಳೂರಿನಲ್ಲಿರುವ ಶಿವಾನಂದ ವೃತ್ತದ ಬಳಿ ಇರುವ ಗಾಂಧಿ ಭವನದಲ್ಲಿ ಅವರು ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ ತಮ್ಮ ರಾಜಕೀಯಕ್ಕೆ ಬರುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದ ನಟ ಉಪೇಂದ್ರ ಸದ್ಯಕ್ಕೆ ನಮ್ಮ ವೇದಿಕೆಯನ್ನು ಪ್ರಜಾಕೀಯ,ಪ್ರಜಾಕಾರಣ ಎಂಬ ಹೆಸರಿನಿಂದ ಕರೆಯಲಾಗುವುದು ಎಂದು ಹೇಳಿದ್ದರು. ಈಗ ಎಲ್ಲಾ ಕೂತೂಹಲಗಳಿಗೆ ನಾಳೆ ತೆರೆ ಬೀಳಲಿದೆ,ರಾಜ್ಯದಲ್ಲಿ ಹೊಸ ಪಕ್ಷವೊಂದು ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸುತ್ತದೆ.

ಎಷ್ಟರ ಮಟ್ಟಿಗೆ ಉಪೇಂದ್ರ ಅವರು ರಾಜಕೀಯ ಕ್ಷೇತ್ರದಲ್ಲಿ ಜಯ ಸಾಧಿಸಬಹುದು ಎನ್ನುವುದು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here