ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೊಸ ಶೋ ಬಗ್ಗೆ ಏನ್ ಅಂತಾರೆ? ಜೊತೆಗೆ ವೀಡಿಯೋ ನೋಡಿ…

0
211

ಮತ್ತೊಮ್ಮೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಿರಿತೆರೆಗೆ ಬರಲಿದ್ದಾರೆ. ಆದ್ರೆ, ಈ ಬಾರಿ ಕನ್ನಡದ ಕೋಟ್ಯಾಧಿಪತಿ ಅಲ್ಲ, ಹೊಸದೊಂದು ಟಾಕ್ ಶೋ.

ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಿರುತೆರೆಯಲ್ಲಿ ಕನ್ನಡ ಕೋಟ್ಯಾಧಿಪತಿ ಎಂಬ ಗೇಮ್ ಶೋ ನಡೆಸಿಕೊಡುತ್ತಿದ್ದರು. ಈ ಕಾರ್ಯಕ್ರಮದ ಮೂಲಕ ಪುನೀತ್ ಚೊಚ್ಚಲ ಬಾರಿಗೆ ಕಿರುತೆರೆಗೆ ಬಂದಿದ್ದರು . ಈ ಶೋ ಎರಡು ವರ್ಷ ಯಶಸ್ವಿಯಾಗಿ ನಡೆಯಿತು.ಆದರೆ ಈಗ ಕಲರ್ಸ್ ಕನ್ನಡ ವಾಹಿನಿಗಾಗಿ ಶೋ ಒಂದನ್ನು ನಡೆಸಿಕೊಡೋ ಪ್ರೊಮೊ ನೀವು ನೋಡೇ ಇರುತ್ತೀರಾ..

ಆ ಶೋ ಹೇಗಿರಬಹುದು ಎಂಬುದರ ಬಗ್ಗೆ ಪವಾರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಏನು ಹೇಳಿದ್ದಾರೆ ಎಂಬ ಕುತೂಹಲವೇ? ಓದಿ ಮುಂದೆ…

ಈ ಹೊಸ ಶೋ ಬಗ್ಗೆ ಸ್ವತಃ ಪುನೀತ್ ಅವರೇ ಮನಬಿಚ್ಚಿ ಮಾತನಾಡಿದ್ದು, ಈ ಕಾರ್ಯಕ್ರಮದ ಬಗ್ಗೆ ತಮ್ಮ ನಿರೀಕ್ಷೆ, ಕುತೂಹಲ ಹಾಗೂ ಅನುಭವ ಹೇಗಿರುತ್ತೆ ಎಂಬುದನ್ನ ಹಂಚಿಕೊಂಡಿದ್ದಾರೆ.ನಾಲ್ಕು ವರ್ಷದ ನಂತರ ಕಿರುತೆರೆಗೆ ಮತ್ತೆ ಬರುತ್ತಿರುವುದು ಅತ್ಯಂತ ಖುಷಿ ನನಗಿದೆ.ಪ್ರತಿ ಸಲ ಬಂದಾಗಲೂ ಸ್ಪರ್ದಿಗಳು ಹೇಗಿರುತ್ತಾರೆ ಯಾವ ರೀತಿ ಮಾತನಾಡಿಸುತ್ತಾರೆ ಎಂಬ ಕಲ್ಪನೆ ತುಂಬಾ ಚನ್ನಾಗೇ ಇರುತ್ತಿತ್ತು, ಅದೊಂದು ಥ್ರಿಲ್ ನ ಹಾಗೆ ಎಂದು  ಅಪ್ಪು ಹೇಳಿದ್ದಾರೆ.

ಇನ್ನು ಹೊಸ ಶೋ ಬಗ್ಗೆ..

ಇದೊಂದು ರೀತಿಯ ಹಳೆ ಅನುಭವಗಳನ್ನು ಹೊರಹಾಕುವಂತಹ ಶೋ ಆಗಿದ್ದು ಮನೆಯವರೊಂದಿಗೆ ಕೂತು ನೋಡಬಹುದು ಎಂದು ಹೇಳಿದ್ದಾರೆ.ನಮ್ಮ ಬಾಲ್ಯವನ್ನು ಈ ಶೋ ನೆನಪಿಸುತ್ತೆ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮ ಕಲರ್ಸ್ ಸೂಪರ್ ನಲ್ಲಿ ಈ ಶೋ ಬರಲಿದೆ..ಸಮಯ ಹಾಗೂ ದಿನ ಇನ್ನೂ ನಿಗದಿಯಾಗಿಲ್ಲ..

ಹೊಸ ಶೋ ನ ಪ್ರೊಮೊ ನೋಡಿ..

https://www.youtube.com/watch?v=diVPcZvi3no

 

LEAVE A REPLY

Please enter your comment!
Please enter your name here