ರಾಕಿಂಗ್ ಸ್ಟಾರ್ ಯಶ್ ಸಡನ್ನಾಗಿ ತನ್ನ ಹಳೆಯ ಹುಡುಗಿಯನ್ನು ನೆನಪು ಮಾಡಿಕೊಂಡಿದ್ದಾರೆ.ಆ ಹುಡುಗಿಗಾಗಿ ಬಿಸಿಲನಾಡಿನಲ್ಲಿ ಸುತ್ತಿದ್ದ ಬೀದಿಗಳನ್ನು ಕಣ್ಣ ಮುಂದೆ ತಂದುಕೊಂಡಿದ್ದಾರೆ.

ಯಶ್ ಅವರು ರಾಧಿಕಾ ಪಂಡಿತ್ ಅವರನ್ನು ಪ್ರೀತಿಸಿದ್ದರು.ನಂತರ ಅವರನ್ನೇ ಮದುವೆ ಆಗಿ ಸುಂದರ ಜೀವನ ಸಾಗಿಸುತ್ತಿದ್ದಾರೆ.ಆದರೆ ಈಗ ಯಾರಿಗೂ ಗೊತ್ತಿಲ್ಲದ ಕ್ಯೂಟ್ ಲವ್ ಸ್ಟೋರಿಯನ್ನು ಯಶ್ ಬಹಿರಂಗಪಡಿಸಿದ್ದಾರೆ.

ತನ್ನ ಲವ್ ಸ್ಟೋರಿ ಡಿಫರೆಂಟ್ ಎನ್ನುವುದನ್ನು ಸ್ವತಃ ಯಶ್ ಅವರೇ ಹೇಳಿಕೊಂಡಿದ್ದಾರೆ.ಆ ಹುಡುಗಿನಾ ನೋಡಲೇಬೇಕು ಎಂದು ಮೈಂಡ್‍ನಲ್ಲಿ ಫಿಕ್ಸ್ ಆಗಿ ರಾತ್ರೋರಾತ್ರಿ ವಿಜಯಪುರಕ್ಕೆ ತೆರಳಿದ್ದರಂತೆ.

ಅಭಿಮಾನಿಗಳು ಗುರುತಿಸಬಾರದು ಎಂದು ಹೆಲ್ಮೆಟ್ ಧರಿಸಿ ಇಡೀ ಊರು ಸುತ್ತಾಡಿದ್ದಾರೆ. ಆ ಹುಡುಗಿ ಬೇರಾರು ಅಲ್ಲ ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್.

ಈ ಘಟನೆ ನಾಲ್ಕೈದು ವರ್ಷಗಳ ಹಿಂದೆ ನಡೆದಿದ್ದು,ಆ ಟೈಮ್‍ನಲ್ಲಿ ಬಹದ್ದೂರ್ ಶೂಟಿಂಗ್ ನಡೆಯುತ್ತಿತ್ತು.ಆಗಿನ್ನೂ ಯಶ್ ಅವರಿಗೆ ಮದುವೆ ಆಗಿರಲಿಲ್ಲ.

ರಾಧಿಕಾರನ್ನ ಬಿಟ್ಟಿರೋಕೆ ರಾಜಾಹುಲಿಗೆ ಆಗುತ್ತಿರಲಿಲ್ಲ.ಹೀಗಾಗಿ ಒಂದು ದಿನ ಕಾರು ಹತ್ತಿಕೊಂಡು ವಿಜಯಪುರಕ್ಕೆ ಹೋಗಿ ರಾಧಿಕಾಗೆ ಸರ್ಪ್ರೈಸ್ ಕೊಟ್ಟಿದ್ದೆ ಅಂತ ಯಶ್ ತಿಳಿಸಿದ್ದಾರೆ.

ರಾಧಿಕಾರನ್ನು ಕರೆದುಕೊಂಡು ಹೋಗಿ ಗೋಲ್‍ಗುಂಬಜ್ ತೋರಿಸಿ ನಂತರ ಶಿವನ ದೇವಸ್ಥಾನದಲ್ಲಿ ಪೂಜೆ ಮಾಡಿಸಿರುವುದಾಗಿ ಚುನಾವಣಾ ಪ್ರಚಾರಕ್ಕೆಂದು ಇತ್ತೀಚೆಗೆ ವಿಜಯಪುರಕ್ಕೆ ತೆರಳಿದ್ದ ಸಂದರ್ಭದಲ್ಲಿ ಯಶ್ ಬಾಯ್ಬಿಟ್ಟಿದ್ದಾರೆ.

ಕೃಪೆ ಪಬ್ಲಿಕ್ ಟಿವಿ

LEAVE A REPLY

Please enter your comment!
Please enter your name here