ಶೂಟಿಂಗ್ ಮುಗಿಯುವ ಮೊದಲೇ ಕುರುಕ್ಷೇತ್ರ ಸಿನಿಮಾ ಮಾಡಿದ ದಾಖಲೆ ಏನು ಗೊತ್ತೇ?

0
412

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುದೊಡ್ಡ ತಾರಾಗಣವೇ ತುಂಬಿರುವ ಕುರುಕ್ಷೇತ್ರ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡಿದೆ.ಅದೇನು ಗೊತ್ತೇ…?

ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್ ಸೇರಿದಂತೆ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ,ಇಡೀ ದಕ್ಷಿಣ ಭಾರತದಲ್ಲಿಯೇ ಭರ್ಜರಿ ಸದ್ದು ಮಾಡುತ್ತಿದೆ.ಮುನಿರತ್ನ ನಿರ್ಮಾಣದಲ್ಲಿ,ನಾಗಣ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹೈ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ‘ಕುರುಕ್ಷೇತ್ರ’ ಚಿತ್ರದ ಚಿತ್ರೀಕರಣ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರದಿಂದ ಸಾಗಿದ್ದು, ಈ ಸಂದರ್ಭದಲ್ಲೇ ಚಿತ್ರದ ಡಬ್ಬಿಂಗ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

 

 

ತಮಿಳು, ತೆಲುಗು, ಮಲಯಾಳಂ ಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ.ಇದರೊಂದಿಗೆ ಹಿಂದಿ ಡಬ್ಬಿಂಗ್ ಹಕ್ಕುಗಳು 9 ಕೋಟಿ ರೂ.ಗೆ ಸೇಲಾಗಿದ್ದು, ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಕನ್ನಡ ಚಿತ್ರ ಕುರುಕ್ಷೇತ್ರ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here