ಓಂ ಪ್ರಕಾಶ್ ರಾವ್,ರಾಘವ್ ಲೋಕಿ,ಎಸ್.ಮಹೇಂದರ್,ಕಿರಣ್ ಗೋವಿ ಸೇರಿದಂತೆ ಸಾಕಷ್ಟು ಜನರ ಜೊತೆ ಕೆಲಸ ಮಾಡಿ ಅನುಭವ ಹೊಂದಿರುವ ಯುವ ನಿರ್ದೇಶಕ ಕಂ ನಟ ಯೋಗಿ. ಯೋಗಿ ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ.ಜೊತೆಗೆ ನಿರ್ದೇಶನವನ್ನೂ ಅವರೇ ಮಾಡುತ್ತಿದ್ದಾರೆ.ಆ ಸಿನಿಮಾದ ಹೆಸರು ‘ಯೋಗಿ ಲವ್ಸ್ ಸುಪ್ರಿಯಾ’!

ಕಳೆದೊಂದು ವಾರದಿಂದ ಜಗತ್ತಿನ ಎಲ್ಲ ಕಡೆಯೂ ಕಣ್ಸನ್ನೆಯ ಹುಡುಗಿ ಪ್ರಿಯಾ ವಾರಿಯರ್ಳದ್ದೇ ಮಾತು. ಆಕೆ ತುಂಬಾ ಬ್ಯುಸಿ ಅಂತೆ.ಸೌತ್ ಇಂಡಿಯಾದ ಅನೇಕ ನಿರ್ದೇಶಕರು ಆಕೆಯ ಬೆನ್ನತ್ತಿದ್ದಾರಂತೆ.

ಆಕೆ ಯಾರಿಗೂ ಸಿಗುತ್ತಿಲ್ಲವಂತೆ.ಇಂಥವೇ ಸುದ್ದಿ ಹರಿದಾಡುತ್ತಿದೆ. ಈಕೆಯ ಬಗ್ಗೆ ಇಷ್ಟೊಂದು ಹೈಪ್ ಕ್ರಿಯೇಟ್ ಆಗಿರುವ ಸಂದರ್ಭದಲ್ಲೇ ಯೋಗಿ ಸೀದಾ ಹೋಗಿ ಆಕೆಯನ್ನೇ ಭೇಟಿ ಮಾಡಿ ಬಂದಿರುವುದು ಎಲ್ಲರನ್ನೂ ಅಚ್ಚರಿಗೀಡುಮಾಡಿದೆ.

ಆಕೆಯನ್ನು ಭೇಟಿ ಮಾಡೋದೇ ಕಷ್ಟಸಾಧ್ಯ ಎನ್ನುವಷ್ಟರ ಮಟ್ಟಿಗೆ ಮಾತುಗಳು ಕೇಳಿಬರುತ್ತಿದ್ದರೂ ಯೋಗಿ ಆಕೆಯನ್ನು ಮೀಟ್ ಮಾಡಿದ್ದು ಮಾತ್ರವಲ್ಲದೆ,ತಮ್ಮ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ವಿಚಾರದಲ್ಲಿ ಒಂದು ರೌಂಡು ಮಾತುಕತೆಯನ್ನೂ ಮುಗಿಸಿದ್ದಾರೆ.

ಕೆಲ ಸಂಘಟನೆಗಳು ಬೆದರಿಕೆ ಹಾಕಿದ್ದರಿಂದಾಗಿ ಪ್ರಿಯಾಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕಡೆಗೂ ಪ್ರಯತ್ನ ಪಟ್ಟು ಒರು ಅಡಾರ್ ಲವ್ ಚಿತ್ರದ ನಿರ್ದೇಶಕನ ಮೂಲಕ ತಿಶೂರ್ಗೆ ತೆರಳಿದ ಯೋಗಿ ಚಿತ್ರದ ಕಥೆಯನ್ನು ಪ್ರಿಯಾಗೆ ವಿವರಿಸಿದ್ದು, ಇನ್ನೊಂದು ವಾರದಲ್ಲಿ ಆಕೆ ಕನ್ನಡದಲ್ಲಿ ನಟಿಸುತ್ತಾಳಾ ಇಲ್ಲವಾ ಅನ್ನೋದರ ಸ್ಪಷ್ಟ ಚಿತ್ರಣ ದೊರಕಲಿದೆ.

ಸಿನಿಮಾ ನಿರ್ದೇಶನ ವಿಭಾಗದಲ್ಲಿ ಸಾಕಷ್ಟು ಅನುಭವ ಹೊಂದಿರುವ ಯುವ ಪ್ರತಿಭೆ ಅನೇಕ ಸಿನಿಮಾಗಳಲ್ಲಿ ಪಾತ್ರಗಳನ್ನೂ ನಿಭಾಯಿಸಿದ್ದಾರೆ.ಆದರೆ ಯಾವುದೂ ಖುಷಿ ನೀಡುವ ಪಾತ್ರಗಳು ಸಿಗುತ್ತಿಲ್ಲ

ಎಂಬ ಕೊರಗಲ್ಲಿ ತಾವೇ ಶುರು ಮಾಡಿರುವ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸುತ್ತಿದ್ದಾರೆ.ಒಂದು ವೇಳೆ ಯೋಗಿಯ ಪ್ಲಾನ್ ಪ್ರಕಾರ ಪ್ರಿಯಾ ವಾರಿಯರ್ ಒಪ್ಪಿಕೊಂಡರೆ ‘ಯೋಗಿ ಲವ್ಸ್ ಸುಪ್ರಿಯಾ’ಗೆ ದೊಡ್ಡ ಮಟ್ಟದ ಪ್ರಚಾರವೂ ಲಭಿಸಲಿದೆ.

ಕೃಪೆ: PUBLIC TV

LEAVE A REPLY

Please enter your comment!
Please enter your name here