1. ತುಳಸಿ ಎಲೆಗಳು

ತುಳಸಿ ಎಲೆಗಳ ಹಿತವಾದ ಮತ್ತು ನೋವುನಿವಾರಕ ಗುಣಲಕ್ಷಣಗಳು ಅಸಿಡಿಟಿಯ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.

ಇದು ಹುಣ್ಣು-ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಹೊಟ್ಟೆಯ ಮೇಲಾಗುವ ಗ್ಯಾಸ್ಟ್ರಿಕ್ ಆಮ್ಲಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

5 6 ತುಳಸಿ ಎಲೆಗಳನ್ನು ಅಗಿಯುವುದರಿಂದ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.ತುಳಸಿ ಎಲೆಗಳನ್ನು ಹಾಕಿ ಕುದಿಸಿ, ಜೊತೆಯಲ್ಲಿ ಸ್ವಲ್ಪ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದಲೂ ಸಹ ಅಸಿಡಿಟಿಯ ನೋವು ಶಮನವಾಗುತ್ತದೆ.

2. ಬಾಳೆಹಣ್ಣು:

ಇದು ಪೊಟ್ಯಾಸಿಯಂ ನಲ್ಲಿ ಹೆಚ್ಚಾಗಿದ್ದು, ಹೊಟ್ಟೆಯಲ್ಲಿನ ಆಮ್ಲದ ಮಟ್ಟವನ್ನು ಸಮತೋಲನದಲ್ಲಿಡುತ್ತದೆ.

ಬಾಳೆಹಣ್ಣಿನಲ್ಲಿ ಪ್ರಾಕೃತಿಕ ಅಂಟಾಸಿಡ್ಗಳಿದ್ದು ಇದು ಹೊಟ್ಟೆಯಲ್ಲಿನ ಆಮ್ಲಗಳ ವಿರುದ್ಧ ಬಫರ್ ನಂತೆ ಕೆಲಸ ಮಾಡುತ್ತದೆ.ಇದು ಅತಿಯಾದ ಆಮ್ಲ ಉತ್ಪಾದನೆಯ ಹಾನಿಕಾರಕ ಪರಿಣಾಮಗಳಿಂದ ಹೊಟ್ಟೆಯನ್ನು ರಕ್ಷಿಸಲು ಲೋಳೆಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

3. ಜೀರಿಗೆ:

ಇದು ಉತ್ತಮ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುವ ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುವ ಗುಣಗಳನ್ನು ಹೊಂದಿದೆ ಮತ್ತು ಇದು ಆಮ್ಲವನ್ನು ತಟಸ್ಥಗೊಳಿಸುವ ನ್ಯೂಟ್ರಾಲೈಸರ್ ಆಗಿ ಕಾರ್ಯನಿರ್ವಹಿಸುತ್ತದೆ.

ಅಸಿಡಿಟಿಯನ್ನು ಕಡಿಮೆ ಮಾಡಲು ನೀವು ಸ್ವಲ್ಪ ಜೀರಿಗೆಯನ್ನು ಅಗಿಯಬಹುದು ಅಥವಾ ಸ್ವಲ್ಪ ನೀರಿನಲ್ಲಿ ಜೀರಿಗೆಯನ್ನು ಕುದಿಸಿ ತಣ್ಣಗಾದ ಮೇಲೆ ಕುಡಿಯಬಹುದು.

4. ಶುಂಠಿ:

ಶುಂಠಿಯ ಬೇರು ಉತ್ತಮ ಹೀರುವಿಕೆಗೆ ಸಹಾಯ ಮಾಡುತ್ತದೆ ಮತ್ತು ಲೋಳೆ ಬಿಡುಗಡೆಗೊಳ್ಳಲು ಸಹ ಉತ್ತೇಜಿಸಿ, ಹೊಟ್ಟೆಯನ್ನು ಹುಣ್ಣುಗಳಿಂದ ರಕ್ಷಿಸುತ್ತದೆ ಮತ್ತು ಹೊಟ್ಟೆಯಲ್ಲಿ ಆಮ್ಲದ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ನೀವು ಶುಂಠಿಯ ಒಂದು ಚಿಕ್ಕ ತುಂಡನ್ನು ಅಗೆಯಬಹುದು ಇಲ್ಲವೆಂದರೆ ಅದನ್ನು ಸ್ವಲ್ಪ ನೀರಿನಲ್ಲಿ ಕುದಿಸಿ ಅದಕ್ಕೆ ಜೇನುತುಪ್ಪ ಅಥವಾ ಬೆಲ್ಲವನ್ನು ಹಾಕಿ ಮಾಡಿದ ಕಷಾಯವನ್ನು ಕುಡಿಯಿರಿ.

5. ಲವಂಗ:

ಇದು ಹೊಟ್ಟೆಯಲ್ಲಿ ಗ್ಯಾಸ್ ಆಗುವುದನ್ನು ಕಡಿಮೆ ಮಾಡಿ ಅಸಿಡಿಟಿ ಆಗುವುದನ್ನು ತಪ್ಪಿಸುತ್ತದೆ.

ಪುಡಿಮಾಡಿದ ಲವಂಗ ಮತ್ತು ಏಲಕ್ಕಿಯನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ತಿನ್ನುವುದರಿಂದ ಸಹ ಅಸಿಡಿಟಿ ಕಡಿಮೆಯಾಗುತ್ತದೆ.

6. ಬೆಲ್ಲ:

ಇದರಲ್ಲಿ ಹೆಚ್ಚಿನ ಮೆಗ್ನೀಷಿಯಂ ಇದ್ದು, ಆಂತರಿಕ ಶಕ್ತಿಯನ್ನು ಮತ್ತು ಜೀರ್ಣ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.

ಹೊಟ್ಟೆಯ ಕ್ಷಾರೀಯ ಪ್ರಕೃತಿಯನ್ನು ಕಾಪಾಡಿ,ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.

7. ಆಪಲ್ ಸೈಡರ್ ವಿನೆಗರ್:

ಇದು ಆಮ್ಲೀಯವಾಗಿದ್ದರೂ, ಕ್ಷಾರೀಯ ಪರಿಣಾಮವನ್ನು ಉಂಟುಮಾಡುತ್ತದೆ ಹೀಗಾಗಿ ಹೊಟ್ಟೆಯ ಆಮ್ಲತೆಯನ್ನು ಸಹ ನಿರ್ವಹಿಸುತ್ತದೆ.

ಒಂದು ಕಪ್ ನೀರಿನಲ್ಲಿ ಒಂದು ಅಥವಾ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಹಾಕಿ ಊಟದ ಮುಂಚೆ ಕುಡಿಯಬೇಕು.

8. ಮಜ್ಜಿಗೆ:

ಇದರಲ್ಲಿ ಲ್ಯಾಕ್ಟಿಕ್ ಆಮ್ಲವು ಹೆಚ್ಚಾಗಿದ್ದು,ಇದು ಹೊಟ್ಟೆಯಲ್ಲಿನ ಅತಿಯಾದ ಆಮ್ಲತೆಯನ್ನು ಸರಿಪಡಿಸುತ್ತದೆ.

ಮಜ್ಜಿಗೆಯಲ್ಲಿ ಕಾಳು ಮೆಣಸು ಅಥವಾ ಕೊತ್ತಮಿರಿ ಸೊಪ್ಪನ್ನು ಹಾಕಿಯೂ ಸಹ ಕುಡಿಯಬಹುದು.

9. ಅಡುಗೆ ಸೋಡಾ:

ಅಸಿಡಿಟಿಯಿಂದ ಬೇಗ ಗುಣವಾಗಲು ಒಂದು ಗ್ಲಾಸ್ ನೀರಿನಲ್ಲಿ ಚಿಟಿಕೆ ಅಡುಗೆ ಸೋಡಾ ಹಾಕಿಯೂ ಸಹ ಕುಡಿಯಬಹುದು.

10. ತಣ್ಣಗಿನ ಹಾಲು:

ಹಾಲಿನಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಇದ್ದು,ಇದು ದೇಹದ ಹೆಚ್ಚಿನ ಆಮ್ಲವನ್ನು ಹೀರಿಕೊಂಡು ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.

LEAVE A REPLY

Please enter your comment!
Please enter your name here