ಇತ್ತೀಚೆಗೆ ಪ್ರತಿಯೊಬ್ಬರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ಲೈವ್ ಬಳಕೆ ಮಾಡುತ್ತಿರುವುದು ಸಾಮಾನ್ಯವಾಗುತ್ತಿದೆ. ಆದ್ರೆ ಕಾರು ಚಾಲನೆ ಮಾಡುತ್ತಿದ್ದಾಗ ಇನ್‌ಸ್ಟಾಗ್ರಾಮ್‌ ಲೈವ್ ಮಾಡುತ್ತಿದ್ದ ಯುವಕನೊಬ್ಬ ದುರಂತವಾಗಿ ಸಾನ್ನಪ್ಪಿರುವ ಘಟನೆ ಪುಣೆಯ ಚಿಂಚವಾಡ ಬಳಿ ನಡೆದಿದೆ

ಕಾರು ಚಾಲನೆ ವೇಳೆ ಇನ್‌ಸ್ಟಾಗ್ರಾಮ್‌ ಲೈವ್‌ ಮಾಡುತ್ತಿದ್ದ ಯುವಕ ಅಪಘಾತದಲ್ಲಿ ದುರ್ಮರಣ

ಲಾಂಗ್ ರೈಡ್‌ಗೆ ಅಂತಾ ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ಹೊರಟಿದ್ದ ಪುಣೆ ಮೂಲದ ಶುಭಂ ಜಾಧವ್(20) ಎಂಬಾತ ಇನ್‌ಸ್ಟಾಗ್ರಾಮ್‌‌ನಲ್ಲಿ ಲೈವ್‌ ಸ್ಟ್ರಿಮಿಂಗ್ ಮಾಡುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿದ್ದು, ಪರಿಣಾಮ ಡಿವೈಡರ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿ ಇನ್‌ಸ್ಟಾಗ್ರಾಮ್‌ ಲೈವ್‌ ಮಾಡುತ್ತಿದ್ದ ಶುಭಂ ಜಾಧವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಲೈವ್ ಅಲ್ಲೇ ಸಾವು:

ಶುಭಂ ಜೊತೆ ಪ್ರಯಾಣಿಸುತ್ತಿದ್ದ ಕೃಷ್ಣ ಪವಾರ್‌ಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಇನ್‌ಸ್ಟಾಗ್ರಾಮ್‌ ಲೈವ್‌‌ನಲ್ಲಿ ಇದ್ದಾಗಲೇ ಈ ದುರಂತ ಸಂಭವಿಸಿರುವುದರಿಂದ ಲೈವ್ ವಿಡಿಯೋ ವೀಕ್ಷಣೆ ಮಾಡುತ್ತಿದ್ದ ಶುಭಂ ಸ್ನೇಹಿತರಿಗೆ ಈ ಘಟನೆಯು ಆಘಾತ ತಂದಿದೆ.

ಅತೀ ವೇಗ:

ವಿಡಿಯೋದಲ್ಲಿ ದಾಖಲಾಗಿರುವ ಪ್ರಕಾರ ಐಷಾರಾಮಿ ಸೆಡಾನ್ ಕಾರು ಚಾಲನೆ ಮಾಡುತ್ತಿದ್ದ ಶುಭಂ ತನ್ನ ಸ್ನೇಹಿತರಿಗೆ ತನ್ನ ಚಾಲನಾ ಕೌಶಲ್ಯವನ್ನು ತೊರಿಸುವ ಉದ್ದೇಶದಿಂದ ಲೈವ್‌ನಲ್ಲಿ ಮಾತನಾಡುತ್ತಲೇ ಗಂಟೆಗೆ 120 ಕಿ.ಮಿ ವೇಗದಲ್ಲಿ ಕಾರು ಚಾಲನೆ ಮಾಡುತ್ತಿದ್ದನಂತೆ.

ಡಿವೈಡರ್ ಗೆ ಡಿಕ್ಕಿ:

ಈ ವೇಳೆ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ರಭಸವಾಗಿ ಗುದ್ದಿದ್ದು, ಇದ್ದಕ್ಕಿದ್ದಂತೆ ಜೋರಾಗಿ ಲೈವ್‌ನಲ್ಲಿ ಜೋರಾಗಿ ಶಬ್ದ ಕೇಳಿಬಂದಿದೆ. ನಂತರ ಎಲ್ಲವೂ ಬ್ಲಾಂಕ್ ಆಗಿದೆ.

ಅದಾಗಲೇ ಕಾರು ಚಾಲನೆ ಮಾಡುತ್ತಿದ್ದ ಶುಭಂ ಜಾಧವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅದೃಷ್ಟವಾಶತ್ ಶುಭಂ ಜೊತೆಗಿದ್ದ ಕೃಷ್ಣನ ಕಾಲಿಗೆ ಗಂಭೀರವಾಗಿದ್ದರೂ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಮತ್ತೊಂದು ವಿಚಾರ ಅಂದ್ರೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿ ಯಾರು ಇರಲಿಲ್ಲ ಎನ್ನಲಾಗಿದ್ದು, ಗುದ್ದಿದ ರಭಸಕ್ಕೆ ಕಾರಿನ ಬ್ಯಾನೆಟ್ ಸಂಪೂರ್ಣ ಕಿತ್ತು ಹೊಗಿದ್ದಲ್ಲದೇ ಚಾಲಕನ ಬದಿಯ ಸೈಡ್ ಪ್ರೊಫೈಲ್ ಕೂಡಾ ಜಖಂಗೊಂಡಿದೆ.

ಈ ವೇಳೆ ಕಾರಿನಲ್ಲಿದ್ದ ಸುರಕ್ಷಾ ಕ್ರಮಗಳು ಕಾರ್ಯನಿರ್ವಹಿಸಿದ್ದರೂ ಅಪಘಾತದ ತೀವ್ರತೆಯಿಂದಾಗಿ ಶುಭಂ ಪ್ರಾಣಕಳೆದುಕೊಂಡಿದ್ದು, ವಾಹನ ಚಾಲನೆ ವೇಳೆ ಸಾಮಾಜಿಕ ಜಾಲತಾಣಗಳ ಬಳಕೆ ಪ್ರಾಣಕ್ಕೆ ಸಂಚಕಾರ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸದ್ಯ ಆಸ್ಪತ್ರೆಯಲ್ಲಿರುವ ಗಾಯಾಳು ಕೃಷ್ಣನ ಹೇಳಿಕೆ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಒಟ್ಟಿನಲ್ಲಿ ವಾಹನ ವೇಳೆ ಸಾಮಾಜಿಕ ಜಾಲತಾಣ ಬಳಕೆ ಜೀವಕ್ಕೆ ಆಪತ್ತು ಎಂಬುವುದು ಈ ಪ್ರಕರಣದಲ್ಲಿ ಮೊತ್ತೊಮ್ಮೆ ಸಾಬೀತಾಗಿದೆ.

ಚಲಿಸುತ್ತಿದ್ದ ಕಾರಿನಲ್ಲೇ ಗಂಡ ಹೆಂಡಿರ ಜಗಳ! ಮುಂದೇನಾಯಿತು?

ಸಾಮಾನ್ಯವಾಗಿ ವಾಹನ ಚಾಲನೆ ವೇಳೆ ತಾಂತ್ರಿಕ ಅಂಶಗಳು ಕೆಲವೊಮ್ಮೆ ಕೈಕೊಟ್ಟಾಗ ಇಲ್ಲವೇ ಟಾಫ್ರಿಕ್ ನಿಯಮಗಳನ್ನು ಮಿರಿ ವಾಹನ ಚಾಲನೆ ಮಾಡುವಾಗ ಅಪಘಾತಗಳು ಸಂಭವಿಸುವುದು ಸಾಮಾನ್ಯ. ಆದ್ರೆ ಇಲ್ಲೊಂದು ಅಪಘಾತ ಪ್ರಕರಣವನ್ನು ನೋಡಿದ್ರೆ ನಿಮಗೆ ಶಾಕ್ ಆಗದೆ ಇರಲಾರದು.

ಕಾರು ಚಾಲನೆ ವೇಳೆ ಗಂಡ-ಹೆಂಡತಿ ಜಗಳದಿಂದಾಗಿ ನಾಲ್ವರು ದುರ್ಮರಣ:

ಹೌದು, ಕಾರು ಚಾಲನೆ ವೇಳೆ ಗಂಡ-ಹೆಂಡತಿ ಜಗಳವು ದುರಂತದಲ್ಲಿ ಅಂತ್ಯವಾಗಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲನೆ ವೇಳೆ ಬೇರೆಡೆ ಗಮನ ಹರಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಆಟೋ ರಿಕ್ಷಾ ಗುದ್ದಿದ ಪರಿಣಾಮ ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಮತ್ತು ಆಟೋದಲ್ಲಿದ್ದ ಇಬ್ಬರು ಮಹಿಳೆಯರು ಕೂಡಾ ಪ್ರಾಣಕಳೆದುಕೊಂಡಿದ್ದಾರೆ.

ಎಲ್ಲಿ ಗೊತ್ತೇ ಈ ಘಟನೆ:

ಅಂದಹಾಗೆ ಈ ಘಟನೆ ನಡೆದಿರುವುದು ರಾಜಸ್ತಾನದ ಬಿಕಾನೇರ್ ಜಿಲ್ಲೆಯಲ್ಲಿ. ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ ಹೋಗುತ್ತಿದ್ದ ದಂಪತಿಗಳಿಬ್ಬರು ವೈಯಕ್ತಿಕ ಕಾರಣಗಳಿಂದ ಜಗಳಕ್ಕಿಳಿದ್ದಾರೆ. ಈ ವೇಳೆ ಗಮನ ಬೇರೆಡೆ ಹೋದ ಪರಿಣಾಮ ವೇಗದಲ್ಲಿದ್ದ ಆಟೋ ರಿಕ್ಷಾಗೆ ಸ್ವಿಫ್ಟ್ ಕಾರು ಅಡ್ಡ ಬಂದಿದೆ.

ಆಟೋ ರಿಕ್ಷಾ ವೇಗದಲ್ಲಿದ್ದ ಕಾರಣ ಕಾರಿನಲ್ಲಿದ್ದ ದಂಪತಿಗಳಿಬ್ಬರು ಸೇರಿ ಆಟೋ ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮತ್ತು ಆಟೋ ರಿಕ್ಷಾ ಎರಡು ಸಹ ಸಂಪೂರ್ಣ ಜಖಂಗೊಂಡಿದೆ.

ಇನ್ನು ಘಟನೆಗೂ ಮುನ್ನ ದಂಪತಿಯ ಜಗಳ ನೋಡಿದ್ದ ಮತ್ತೊಬ್ಬ ಕಾರು ಮಾಲೀಕ ಮುಂದೆ ನೋಡಿಕೊಂಡು ಸರಿಯಾಗಿ ಕಾರು ಚಾಲನೆ ಮಾಡುವಂತೆ ಎಚ್ಚರಿಕೆ ನೀಡಿದ್ದನಂತೆ. ಆದಾಗಿ 5 ನಿಮಿಷದಲ್ಲೇ ಈ ದುರಂತ ನಡೆದಿದೆ ಎಂದು ರಾಜಸ್ತಾನ ಪ್ರತಿಕಾ ವರದಿ ಮಾಡಿದೆ.

ಹೇಗೆ ನಡೆದದ್ದು:

ವರದಿಗಳ ಪ್ರಕಾರ, ಆಟೋ ರಿಕ್ಷಾದಲ್ಲಿ ಚಾಲನಕನು ಸೇರಿ ಒಟ್ಟು 7 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ವೇಗದಲ್ಲಿದ್ದ ಆಟೋ ರಿಕ್ಷಾ ಗುದ್ದಿದ ಪರಿಣಾಮ ಆಟೋದಲ್ಲಿದ್ದ ಇಬ್ಬರು ವೃದ್ಧ ಮಹಿಳೆಯರು ಸೇರಿ ಕಾರಿನಲ್ಲಿದ್ದ ದಂಪತಿ ಸಹ ಮೃತಪಟ್ಟಿದ್ದಾರೆ.

ಜೊತೆಗೆ ಆಟೋ ಚಾಲಕ ಮತ್ತು ಒಬ್ಬ ಬಾಲಕನಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಮೃತ ದಂಪತಿಯನ್ನು ದೇವ್ ಪ್ರತಾಪ್(28) ಮತ್ತು ಪ್ರಿಯಾಂಕ್ ಪ್ರತಾಪ್(25) ಎಂದು ಗುರುತಿಸಲಾಗಿದೆ. ಈ ದಂಪತಿಗಳು ವರ್ಷದ ಹಿಂದಷ್ಟೇ ವಿವಾಹವಾಗಿದ್ದರಂತೆ.

ಇಂಡಿಯನ್ ನೆವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವ್ ಪ್ರತಾಪ್ ಕಳೆದ ವಾರವಷ್ಟೇ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ. ಈ ವೇಳೆ ಸಂಬಂಧಿಯೊಬ್ಬರ ವಿವಾಹಕ್ಕೆ ಹೊರಡುವಾಗ ಗಂಡ-ಹೆಂಡತಿ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಕಾರು ಚಾಲನೆ ಮಾಡುತ್ತಲೇ ಜಗಳವಾಡುತ್ತಿದ್ದ ದೇವ್ ಪ್ರತಾಪ್, ವೇಗದಲ್ಲಿದ್ದ ಆಟೋ ರಿಕ್ಷಾಗೆ ಕಾರು ಅಡ್ಡ ತಂದಿದ್ದಾನೆ. ಈ ವೇಳೆ ಕಾರು ಮುಂದೆಯೇ ಇದ್ದ ಪರಿಣಾಮ ನಿಯಂತ್ರಣ ಸಿಗದ ರಿಕ್ಷಾ ಕಾರಿನ ಮಧ್ಯೆ ಭಾಗಕ್ಕೆ ರಭಸಕ್ಕೆ ಗುದ್ದಿದೆ.

ಕೈ ಕೊಟ್ಟ ಏರ್ ಬ್ಯಾಗ್:

ಅಪಘಾತದ ವೇಳೆ ಕಾರಿನಲ್ಲಿದ್ದ ಸುರಕ್ಷಾ ಸಾಧನಗಳು (ಏರ್‌ಬ್ಯಾಗ್,ಎಬಿಎಸ್) ಸಹ ಯಾವುದೇ ಪ್ರಯೋಜನಕ್ಕೆ ಬಂದಿಲ್ಲಾ. ಜೊತೆಗೆ ಅತಿಯಾಗಿ ಜನರನ್ನು ತುಂಬಿಕೊಂಡ ಹೊರಟಿದ್ದ ಆಟೋ ರಿಕ್ಷಾ ಸಹ ತುರ್ತು ಸಂದರ್ಭದಲ್ಲಿ ನಿಯಂತ್ರಣಕ್ಕೆ ಬರದಿರುವುದು ಅಪಘಾತದ ಭೀಕರತೆಯನ್ನು ಹೆಚ್ಚಿಸಿದೆ ಎನ್ನಬಹುದು.

ಒಟ್ಟಿನಲ್ಲಿ ಗಂಡ ಹೆಂಡತಿಯ ಜಗಳ ಭೀಕರ ಅಪಘಾತದಲ್ಲಿ ಅಂತ್ಯವಾಗಿದ್ದು, ಯಾವುದೇ ಕಾರಣಕ್ಕೂ ಚಾಲನೆ ವೇಳೆ ಇಂತಹ ತಪ್ಪುಗಳನ್ನು ಮಾಡಬೇಡಿ. ಇದು ನಿಮಗೆ ಅಷ್ಟೇ ಅಲ್ಲದೇ ಇತರರ ಜೀವ ಕುತ್ತು ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನವುದಕ್ಕೆ ಈ ಘಟನೆಯೇ ಸಾಕ್ಷಿ.

ಸುದ್ದಿಕೃಪೆ ಡ್ರೈವ್ ಸ್ಪಾರ್ಕ್ ಕನ್ನಡ

LEAVE A REPLY

Please enter your comment!
Please enter your name here