ಇಂದಿನಿಂದ ಜಿಯೋ ಹೊಸ ಆಫರ್ ಗಳು ಗ್ರಾಹಕರಿಗೆ ಶಾಕ್ ಕೊಟ್ಟ ಜಿಯೋ..!!ಏನದು ಓದಿ…

0
186

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮೂಡಿಸಿದ್ದ ರಿಲಯನ್ಸ್ ಜಿಯೋ ನೂತನ ಟ್ಯಾರಿಫ್ ಪ್ಲ್ಯಾನ್‌ಗಳನ್ನು ಘೋಷಿಸಿದ್ದು, ನೂತನ ಆಫರ್‌ಗಳ ರಿಲಯನ್ಸ್ ಜಿಯೋ 4ಜಿ ಡೇಟಾ ಸೇವೆಯಲ್ಲಿ ಶೇಕಡಾ 15ರಷ್ಟು ಬೆಲೆ ಏರಿಕೆ ಕಂಡುಬಂದಿದೆ.

ಜಿಯೋವಿನ ಅತ್ಯುತ್ತಮ ಪ್ಲಾನ್ ಎಂದು ಜನಪ್ರಿಯವಾಗಿರುವ 84 ದಿನಗಳು ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಸೇವೆಗಳ ಬೆಲೆ ಮೊದಲು 309ರೂ, ನಂತರ 399ರೂ ಹಾಗೂ ಪ್ರಸ್ತುತ 459ರೂಪಾಯಿಗಳಾಗಿವೆ.ಪ್ರತಿಭಾರಿಯೂ ಜಿಯೋ ತನ್ನ ಆಫರ್ ಬೆಲೆಯನ್ನು ಹೆಚ್ಚಿಸಿದೆ.

399 ರೂ ಪ್ಲಾನ್ ಬೆಲೆ ಹೆಚ್ಚಾಗಿದ್ದರೆ, 509 ರೂ. ವ್ಯಾಲಿಡಿಟಿ ಇಳಿಕೆಯಾಗಿದೆ. ಹಾಗೆಯೇ, 999 ರೂ. ಪ್ಲ್ಯಾನ್ ಅಡಿಯಲ್ಲಿ 60ಜಿಬಿ ವರೆಗೆ ಮಾತ್ರ ಹೈಸ್ಪೀಡ್ ಡೇಟಾ ವೇಗ ಸಿಗಲಿದ್ದು, ನಂತರ ಡೇಟಾ ವೇಗವು ಕಡಿಮೆಯಾಗಲಿದೆ.ಜಿಯೋವಿನ 509 ರೂ.ಗಳ ಪ್ಲ್ಯಾನ್‌ನಲ್ಲಿಯೂ ಸಹ ಕಡಿತವುಂಟಾಗಿದ್ದು, ಈ ಹಿಂದೆಯಿದ್ದ 56 ವ್ಯಾಲಿಡಿಟಿಯನ್ನು ಕೇವಲ 49 ದಿನಗಳಗೆ ಸೀಮಿತವಾಗಲಿದೆ. ಹಾಗೆಯೇ ಒಟ್ಟು ಡೇಟಾ 112ಜಿಬಿಯಿಂದ 98ಜಿಬಿಗೆ ಇಳಿಕೆಯಾಗಿದ್ದು, ಈ ಆಫರ್ ಬೆಲೆಯೂ 15% ಅಷ್ಟು ಕಡಿಮೆಯಾಗಿದೆ.

ಆದರೆ ಒಂದು ಆಫರ್ ಮಾತ್ರ ಭರ್ಜರಿಯಾಗಿದೆ ಯಾವುದು ಗೊತ್ತೇ?

ಎಲ್ಲಾ ಆಫರ್‌ಗಳಲ್ಲಿ ಜನರಿಗೆ ಶಾಕ್ ನೀಡಿರುವ ಜಿಯೋ 149 ರೂ.ಗಳ ಪ್ಲ್ಯಾನ್ ಅಡಿಯಲ್ಲಿ4ಜಿ ಡೇಟಾ ನೀಡಿ ಗಮನ ಸೆಳೆದಿದೆ. 28 ದಿನಗಳ ವರೆಗೆ ಹಿಂದೆಯಿದ್ದ 149 ರೂ.ಗಳ ಪ್ಲ್ಯಾನ್ ಅಡಿಯಲ್ಲಿ ಮೊದಲು ಕೇವಲ 2ಜಿಬಿ ಡೇಟಾ ಮಾತ್ರ ಸಿಗುತ್ತದೆ.

LEAVE A REPLY

Please enter your comment!
Please enter your name here