ಇಂದು ಈ ಆಟಗಾರನಿಗೆ 200 ನೇ ಪಂದ್ಯ.. ಶತಕ ಗಳಿಸುವನೇ ಈ ಆಟಗಾರ?ಯಾರವನು…

0
104
India's Amit Mishra, third right, celebrates with teammates after taking the wicket of New Zealand's James Neesham, left, during their fifth and last one day international cricket match in Visakhapatnam, India, Saturday, Oct. 29, 2016. India won the series 3-2. (AP Photo/Aijaz Rahi)

ಭಾರತಕ್ಕೆ ಆಗಮಿಸಿರುವ ನ್ಯೂಜಿಲ್ಯಾಂಡ್  ತಂಡ ಹಾಗೂ ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಇಂದಿನಿಂದ ಆರಂಭವಾಗಲಿದೆ.ಮುಂಬೈನ ವಾಂಖೆಡೆ ಮೈದಾನದಲ್ಲಿ ಮೊದಲ ಪಂದ್ಯ ಇಂದು ಮದ್ಯಾಹ್ನ ನಡೆಯಲಿದೆ.

ಈ ಮೊದಲು ಭಾರತ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಸರಣಿಯನ್ನು ಗೆದ್ದು  ಹುಮ್ಮಸಿನಿಂದ ಬೀಗುತ್ತಿರುವ ನಾಯಕ ವಿರಾಟ್ ಕೊಹ್ಲಿ ಪಡೆ ಈ ಸರಣಿಯನ್ನೂ ಗೆಲ್ಲುವ ಫೇವರಿಟ್ ತಂಡವೆನಿಸಿದೆ,

ಇದನ್ನೂ ಓದಿರಿ..

ಭಾರತ ನ್ಯೂಝಿಲ್ಯಾಂಡ್ ಸರಣಿಯಲ್ಲಿ ಯಾವ ಯಾವ ದಾಖಲೆಗಳಾಗಲಿವೆ ಗೊತ್ತೇ?

ಭಾರತ ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಬಾಗದಲ್ಲಿ ಬಲಿಷ್ಠವಾಗಿದ್ದು ನ್ಯೂಝಿಲ್ಯಾಂಡ್ ತಂಡವನ್ನು ಮಣಿಸುವ ಬಲ ಹೊಂದಿದೆ.ಹಾಗೆಯೇ ನ್ಯೂಜಿಲ್ಯಾಂಡ್ ತಂಡವು ಬಲಿಷ್ಠವಾಗಿದೆ.ನಾಯಕ ವಿರಾಟ್ ಕೊಹ್ಲಿಗೆ ನ್ಯೂಝಿಲ್ಯಾಂಡ್ ಸರಣಿಯಲ್ಲಿನ ಮೊದಲನೇ ಪಂದ್ಯ 200 ನೇ  ಪಂದ್ಯವಾಗಲಿದೆ.

ಈಗಾಗಲೇ ವಿರಾಟ್ ಕೊಹ್ಲಿ  30 ಶತಕಗಳನ್ನು ಹೊಡೆದು ಮೂರನೇ ಸ್ಥಾನದಲ್ಲಿದ್ದಾರೆ. ಇನ್ನೊಂದು ಶತಕ ಬಾರಿಸಿದರೆ ಅವರು ಎರಡನೇ ಸ್ಥಾನಕ್ಕೆ ಅಧಿಪತಿ ಆಗಲಿದ್ದಾರೆ. ಇದು ವಿಶ್ವ ದಾಖಲೆ ಎನ್ನುವುದು ಇನ್ನೊಂದು ವಿಶೇಷ ಅಂಶವಾಗಿದೆ.ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎನ್ನುವ ಕಾತುರ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆ ಮಾಡಿದೆ.

LEAVE A REPLY

Please enter your comment!
Please enter your name here