ಇನ್ನು ಮುಂದೆ ಡೀಸಲ್ ನಿಮಗೆ ಹೇಗೆ ದೊರೆಯುತ್ತದೆ ಗೊತ್ತೇ?

0
1188

ಭಾರತದಲ್ಲಿ ಈಗ ಎಲ್ಲವು ಆನ್ ಲೈನ್ ನಲ್ಲೆ ದೊರೆಯುತ್ತಿದೆ.ಅದೇ ರೀತಿ ಪೆಟ್ರೋಲ್ ಹಾಗೂ ಡೀಸಲ್ ಕೂಡ ಆನ್ ಲೈನ್ ನಲ್ಲೀ ದೊರೆತರೆ ಹೇಗೆ? ಆಶ್ಚರ್ಯವಾಯಿತೇ? ಹೌದು ನಾವು ಹೇಳುತ್ತಿರುವುದು ಸತ್ಯ..ಓದಿ ಮುಂದೆ..

ಆನ್ ಲೈನ್ ಮತ್ತು ಇ-ಕಾಮರ್ಸ್ ಉದ್ಯಮಗಳ ಯಶಸ್ಸಿನಿಂದ ಉತ್ತೇಜನ ಪಡೆದಿರೋ ತೈಲ ಕಂಪನಿಗಳು, ಆನ್ ಲೈನ್ ನಲ್ಲೂ ಡೀಸೆಲ್ ಮಾರಾಟಕ್ಕೆ ತಯಾರಿ ನಡೆಸಿವೆ.ಈ ಮೂಲಕ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದು ಇಂಡಿಯನ್ ಆಯಿಲ್, HPCL ಮತ್ತು BPCL ಕಂಪನಿಗಳ ಲೆಕ್ಕಾಚಾರ.

ಈಗಾಗಲೇ ತಯಾರಿ ನಡೆಸಿರುವ HPCL ಮತ್ತು BPCL ಕಂಪನಿಗಳು ಆನ್ ಲೈನ್ ನಲ್ಲಿ ಡೀಸೆಲ್ ಮಾರಾಟ ಆರಂಭಿಸಲು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯಿಂದ ಅನುಮತಿಗಾಗಿ ಕಾಯುತ್ತಿವೆ. ಆದರೆ ಸುರಕ್ಷಿತ ಎನಿಸಿದ ಪ್ರದೇಶಗಳಿಗೆ ಮಾತ್ರ ಡೀಸೆಲ್ ಡೆಲಿವರಿ ಮಾಡಲಾಗುತ್ತದೆ.

ಕಿಕ್ಕಿರಿದ ಜನಸಂದಣಿ ಹಾಗೂ ಚಿಕ್ಕ ಚಿಕ್ಕ ಪ್ರದೇಶಗಳಲ್ಲಿ ಡೀಸೆಲ್ ಹೋಮ್ ಡೆಲಿವರಿ ಮಾಡಲಾಗುವುದಿಲ್ಲ.ಮುಂದಿನ ತಿಂಗಳು PESOನಿಂದ ತೈಲ ಕಂಪನಿಗಳಿಗೆ ಅನುಮತಿ ದೊರೆಯುವ ನಿರೀಕ್ಷೆ ಇದೆ. ಹಾಗಾಗಿ ಡಿಸೆಂಬರ್ ಅಂತ್ಯದ ವೇಳೆಗೆ ಡೀಸೆಲ್ ಹೋಮ್ ಡೆಲಿವರಿ ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here