ಇನ್ನು ಮುಂದೆ ಟ್ರಾಫಿಕ್ ಪೊಲೀಸ್ ಅಥವಾ ಆರ್‍ಟಿಓ ಅಧಿಕಾರಿಗಳು ನಿಮ್ಮ ಗಾಡಿ ಹಿಡಿದರೆ ನಿಮ್ಮ ಮೊಬೈಲ್ ನಲ್ಲಿಯೇ ದಾಖಲಾತಿಗಳನ್ನು ತೋರಿಸಬಹುದಾಗಿದೆ.ಹೌದು, ಕರ್ನಾಟಕದಲ್ಲಿ ಇದು ಯಶಸ್ವಿಯಾದರೆ ದೇಶದೆಲ್ಲೆಡೆ ಜಾರಿಗೆ ತರಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ ಎನ್ನಲಾಗಿದೆ.

ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ, ವಿತರಿಸುವ ಮತ್ತು ದೃಢೀಕರಿಸುವ ದೇಶದ ಮೊದಲ ಸುರಕ್ಷಿತ`ಡಿಜಿ ಲಾಕರ್’ ವ್ಯವಸ್ಥೆಯನ್ನು ಅಳವಡಿಸಲು ಸಾರಿಗೆ ಇಲಾಖೆ ಈ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರ (ಆರ್‍ಸಿ), ವಿಮೆ ಇತರ ಎಲ್ಲಾ ದಾಖಲಾತಿಗಳನ್ನು,ಡಿಜಿ ಲಾಕರ್‍ನಲ್ಲಿ ಸ್ಕ್ಯಾನ್ ಮೂಲಕ ಸೇವ್ ಮಾಡಿಕೊಳ್ಳಬೇಕು.ಬಳಿಕ ದಾಖಲಾತಿಗಳನ್ನು ತೋರಿಸಿದರೆ ಸಾಕು ನಿಮ್ಮ ಗಾಡಿಗಳ ದಾಖಲಾತಿಗಳು ಪರಿಶೀಲನೆ ಆದಂತೆಯೇ ಲೆಕ್ಕ.

ಈಗಾಗಲೇ ಇದರ ಬಗ್ಗೆ ಸಾಧ್ಯಸಾಧ್ಯತೆಗಳ ಪರೀಶೀಲನೆ ಕೆಲಸ ಮುಗಿಸಿರುವ ಆರ್‍ಟಿಓ ಇನ್ನು ಕೆಲವೇ ದಿನಗಳಲ್ಲಿ ಹೊಸ ವಿಧಾನವನ್ನು ಜಾರಿ ಮಾಡಲಿದೆ.

ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಡಿಜಿ ಲಾಕರ್ ಅನ್ನು ಜಂಟಿಯಾಗಿ ಉದ್ಘಾಟಿಸಿದ್ದರು.ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರದಿಂದ ಜನರು ತಪ್ಪಿಸಿಕೊಳ್ಳಲು ನೆರವಾಗಲು ಕೇಂದ್ರ ಸರ್ಕಾರ ಈ ಸೇವೆಯನ್ನು ಆರಂಭಿಸಿದೆ.

ಕೃಪೆ : Dailyhunt

LEAVE A REPLY

Please enter your comment!
Please enter your name here