ಫಿರೋಜ್ ಷಾ ಕೊಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಆರಂಭಿಕ ಆಟಗಾರರ ಭರ್ಜರಿ ಬ್ಯಾಟಿಂಗ್ ನಿಂದಾಗಿ 3 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು.ನ್ಯೂಜಿಲೆಂಡ್ ಗೆ ಗೆಲ್ಲಲು 203 ರನ್‍ಗಳ ಗುರಿ ನೀಡಿತ್ತು.

ಭಾರತೀಯರ ಮಾರಕ ದಾಳಿಯಿಂದಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 53 ರನ್ ಅಂತರದಿಂದ ಭರ್ಜರಿ ಜಯಗಳಿಸಿದೆ.ಆಶಿಶ್ ನೆಹ್ರಾ ಪಂದ್ಯದೊಂದಿಗೆ ವಿದಾಯ ಹೇಳಿದ್ದು,ಅವರಿಗೆ ಟೀಂ ಇಂಡಿಯಾ ಗೆಲುವಿನ ಉಡುಗೊರೆ ನೀಡಿದೆ.

ಈ ಪಂದ್ಯದಲ್ಲಿನ ಇನ್ನೊಂದು ವಿಶೇಷತೆ ಏನು ಗೊತ್ತೇ?ಓದಿ…

ಭಾರತ ತಂಡ ಜಯಗಳಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಶೀಶ್ ನೆಹ್ರಾ ವಿದಾಯ ಹೇಳಿದರು. ಈ ವೇಳೆ ಮಾತನಾಡಿದ ಅವರು,ವಿದಾಯ ಹೇಳಲು ಇದಕ್ಕಿಂತ ದೊಡ್ಡ ವೇದಿಕೆ ಹಾಗೂ ಒಳ್ಳೆಯ ಸಮಯ ಮತ್ತೊಂದಿಲ್ಲ.

ಈಗ ನಾನು ಮತ್ತೊಂದಷ್ಟು ದಿನ ಅಥವಾ ವರ್ಷ ಕ್ರಿಕೆಟ್ ಆಡಬಹುದು ಎಂದುಕೊಂಡರೂ ಪ್ರಸ್ತುತ ನನಗೆ ದೊರೆತಿರುವ ಈ ಮಧುರ ಕ್ಷಣ ದೊರೆಯದೇ ಹೋಗಬಹುದು.ಹೀಗಾಗಿ ಇದು ವಿದಾಯ ಹೇಳಲು ಸೂಕ್ತ ಸಂದರ್ಭ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ನೆಹ್ರಾ ಅವರ ಫೀಲ್ಡಿಂಗ್ ಚಾಕಚಕ್ಯತೆಗೆ ಈ ವೀಡಿಯೋ ನೋಡಿ

ಬಹುಶಃ ಭಾರತ ತಂಡದಲ್ಲಿ ಅತೀ ಹೆಚ್ಚು ಕೊನೆಯ ಓವರ್ ಗಳನ್ನು ಎಸೆದ ಆಟಗಾರ ನಾನೊಬ್ಬನೇ ಇರಬೇಕು ಎಂದು ಹೇಳಿದರು.

ಈ ಪಂದ್ಯದಲ್ಲೂ ಕೂಡ ವಿರಾಟ್ ಕೊನೆ 3-4 ಓವರ್ ಗಳನ್ನು ನನಗಾಯೇ ಮೀಸಲಿಟ್ಟಿದ್ದರು.ಕೊನೆಯ ಓವರ್ ಅನ್ನು ನಾನೇ ಎಸೆಯುತ್ತೇನೆ ಎಂದು ಕೇಳಿದೆ.ಅದಕ್ಕೆ ಅನುವು ಮಾಡಿಕೊಟ್ಟರು ಎಂದು ಹೇಳಿದರು.

LEAVE A REPLY

Please enter your comment!
Please enter your name here