ಈ ಆಟಗಾರ ಸೆಹೆವಾಗ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು ಹೇಗೆ ಗೊತ್ತೇ?

0
98

ಇಂದು ಟೀಂ ಇಂಡಿಯಾ ಕಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರಿಗೆ  ಹುಟ್ಟುಹಬ್ಬದ ಸಂಭ್ರಮ. ಯಾವಾಗಲೂ ಟ್ವಿಟ್ಟರ್ ನಲ್ಲಿ ಟ್ರೊಲ್ ಮಾಡುವ ಸಾಮಾಜಿಕ ಜಾಲ ತಾಣಗಳ ಟ್ರಾಲ್ ಕಿಂಗ್ ಎನಿಸಿಕೊಂಡಿರುವ ಸೆಹ್ವಾಗ್ ಅವರಿಗೆ ವಿಶಿಷ್ಟ ಶೈಲಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರು ಟ್ವೀಟ್ ಮಾಡಿದ್ದಾರೆ.

ಪ್ರತಿನಿತ್ಯ ವಿಕಟ ಕವಿಯಂತೆ ಎಲ್ಲರ ಕಾಲೆಳೆಯುವ ಸೆಹ್ವಾಗ್ ಸದ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಇಂದು ಎಲ್ಲರ ಮೆಚ್ಚಿನ ಸೆಲೆಬ್ರಿಟಿ. ಏಕೆಂದರೆ ಇಂದು ಅವರ ಹುಟ್ಟು ಹಬ್ಬ.ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಪಡೆದಿರುವ ಸೆಹ್ವಾಗ್ ತಮ್ಮ 14 ವರ್ಷಗಳ ವೃತ್ತಿ ಬದುಕಿನಲ್ಲಿ 104 ಪಂದ್ಯಗಳಲ್ಲಿ 8586 ಟೆಸ್ಟ್ ರನ್ ಗಳು ಹಾಗೂ 251 ಏಕದಿನ ಪಂದ್ಯಗಳಲ್ಲಿ 8273 ರನ್ ಗಳನ್ನು ಚೆಚ್ಚಿದ್ದಾರೆ.

ಅಲ್ಲದೆ ಎರಡು ತ್ರಿಶತಕ ಬಾರಿಸಿರುವ ಭಾರತದ ಏಕೈಕ ಕ್ರಿಕೆಟ್ ಆಟಗಾರರಾಗಿದ್ದಾರೆ.ಸೆಹೆವಾಗ್ ಗೆ ಅಜಿತ್ ಅಗರ್ಕರ್ ಸುರೇಶ್ ರೈನಾ, ಮೊಹಮ್ಮದ್ ಶಮಿ, ಪಾರ್ಥೀವ್ ಪಟೇಲ್, ಇಶಾಂತ್ ಶರ್ಮಾ ಹಾಗೂ ಕ್ರಿಸ್ ಗೇಲ್ ಸೇರಿದಂತೆ ಹಲವಾರು ಕ್ರಿಕೆಟ್ ಆಟಗಾರರು ಟ್ವೀಟ್ ಮೂಲಕ ಸೆಹ್ವಾಗ್ಗೆ ಶುಭ ಕೋರಿದ್ದಾರೆ. ಆದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಗೆ ಶುಭ ಕೋರಿದ್ದಾರೆ ಗೊತ್ತೇ?

ಓದಿ ಮುಂದೆ.. ನೋಡಿ ಈ ಟ್ವೀಟ್

ರೋಹಿತ್ ಶರ್ಮ ಅವರ ಟ್ವೀಟ್

ರಾಬಿನ್ ಉತ್ತಪ್ಪ ಅವರ ಟ್ವೀಟ್ ಹೀಗಿದೆ

LEAVE A REPLY

Please enter your comment!
Please enter your name here