ಈ ಕ್ರಿಕೆಟರ್ ಓದಿರೋದು ಬರಿ ಫಸ್ಟ್ ಪಿಯುಸಿ…!!! ಯಾರು ಆ ಕ್ರಿಕೆಟರ್..?

0
1450

ಸದ್ಯ ವಿಶ್ವ ಕ್ರಿಕೆಟ್​​​​​ನ ನಂಬರ್​​ 1 ಬ್ಯಾಟ್ಸ್​​​ಮನ್​ ಆಗಿರುವ ಭಾರತದ ಈ ಆಟಗಾರ ವಿಶ್ವದ ಘಟಾನುಘಟಿ ಬೌಲರ್​​ಗಳನ್ನೂ ಇನ್ನಿಲ್ಲದಂತೆ ದಂಡಿಸಿದ್ದಾರೆ.ಪಂದ್ಯದ ನಂತರ ಕನಸಿನಲ್ಲೂ ಹೋಗಿ ಕಾಡಿದ್ದಾರೆ.ಭಾರತದ ಈ ಆಟಗಾರ  ಕ್ರೀಸ್ ಗೆ  ಬಂದ್ರೆ ಎದುರಾಳಿ ಬೌಲರ್​​​ ಎಷ್ಟೇ ಪ್ರಭಾವಿಯಾಗಿದ್ರೂ ಒಮ್ಮೆ ಬೆಚ್ಚಿ ಬೀಳ್ತಾನೆ..

ಈ ಆಟಗಾರ ಎಷ್ಟೋ ಘಟಾನುಘಟಿ ಬೌಲರ್​​ಗಳನ್ನ ಮನಬಂದಂತೆ ದಂಡಿಸಿದ್ರೂ ಪಾಕ್’​ನ ಒಬ್ಬ ಬೌಲರ್​​​’ನನ್ನ ಕಂಡ್ರೆ ಭಯವಂತೆ. ಅವನ ಬೌಲಿಂಗ್​​​’ನಲ್ಲಿ ಬ್ಯಾಟ್​​​ ಮಾಡೋದು ಅಂದ್ರೆ ಕಷ್ಟಸಾಧ್ಯವಂತೆ. ಯಾವ ಬೌಲರ್​​​​​ ಅವರನ್ನ ಇನ್ನಿಲ್ಲದಂತೆ ಕಾಡಿದ್ದಾರೆ ಅನ್ನೋದನ್ನ ಸ್ವತಃ ಈ ಬ್ಯಾಟ್ಸಮನ್ ಹೇಳಿಕೊಂಡಿದ್ದಾರೆ.

ಆ ಬ್ಯಾಟ್ಸಮನ್ ಯಾರು ? ಆ ಬೌಲರ್ ಯಾರು..?

ಓದಿ ಮುಂದೆ..

ನಮ್ಮ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈ ಆ ಬ್ಯಾಟ್ಸಮನ್.ಇದೂವರೆಗೂ ಎದುರಿಸಿದ ಬೌಲರ್​​ಗಳಲ್ಲಿ ಅತೀ ಕಷ್ಟದ ಬೌಲರ್​​ ಅಂದ್ರೆ ಅದು ಮೊಹಮ್ಮದ್​​​ ಆಮೀರ್​​​​ ಅಂತೆ.ಖಾಸಗಿ ಚಾನಲ್​​ನ ಸಂದರ್ಶನದಲ್ಲಿ ಅಮೀರ್​​​ ಖಾನ್​ ಮತ್ತು ಕೊಹ್ಲಿ ಒಟ್ಟಿಗೆ ಭಾಗವಹಿಸಿದ್ದರು.ಈ ವೇಳೆ ಟೀಂ ಇಂಡಿಯಾ ನಾಯಕ ತಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿನ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ..

ನವಂಬರ್ ಒಂದರಂದು ಭಾರತ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬೌಲರ್ ನಿವೃತ್ತಿ…!!!?

ಕೊಹ್ಲಿ ಏನು ಓದಿದ್ದಾರೆ ಗೊತ್ತೇ?

ಸದ್ಯ ತನ್ನ ಬ್ಯಾಟ್​​​​​​’ನಿಂದ ಇಡೀ ದೇಶವನ್ನೇ ಆಳುತ್ತಿರುವ ಕೊಹ್ಲಿ ಎಲ್ಲಿವರೆಗೆ ಓದಿದ್ದಾರೆ ಎಂಬ ಪ್ರಶ್ನೆ ಈವರೆಗೂ ನಿಗೂಢವಾಗಿತ್ತು.ಆದರೀಗ ಪ್ರಶ್ನೆಗೆ ಖುದ್ದು ಕೊಹ್ಲಿಯೇ ಉತ್ತರಿಸಿದ್ದಾರೆ. ಹೌದು ಸಂದರ್ಶನದಲ್ಲಿ ತನ್ನ ವಿಧ್ಯಾಭ್ಯಾಸದ  ಬಗ್ಗೆ ಮಾತನಾಡಿರುವ ಕೊಹ್ಲಿ ತಾನು ಪ್ರಥಮ ಪಿಯುಸಿಯವರೆಗಷ್ಟೇ ಓದಿರುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here