ಈ ತಿಂಗಳ 12 ರ ಮಧ್ಯರಾತ್ರಿ ಇಂದ ಪೆಟ್ರೋಲ್ ಡೀಸಲ್ ಸಿಗಲ್ಲ…!!! ಏಕೆ ಗೊತ್ತೇ?

0
154

ಅಕ್ಟೋಬರ್ 13 ರಂದು ಪೆಟ್ರೋಲ್ ಬಂಕ್ ಬಂದ್ ಮಾಡಲು ಬಂಕ್ ಮಾಲೀಕರು ಮುಂದಾಗಿದ್ದಾರೆ. ಕಾರಣ ಮಾಲೀಕರ ಬೇಡಿಕೆಗಳನ್ನು ಈಡೇರಿಸದೇ ಇರುವುದು.

ದೈನಂದಿನ ಬೆಲೆ ಪರಿಷ್ಕರಣೆ ನಿಯಮ ವಿರೋಧಿಸಿ ಹಾಗೂ ತೈಲೋತ್ಪನ್ನಗಳನ್ನು GST ವ್ಯಾಪ್ತಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರ ಕೈಗೊಳ್ಳಲು ಪೆಟ್ರೋಲ್ ಬಂಕ್ ಮಾಲೀಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು,

ಅಕ್ಟೋಬರ್ 12 ರಂದು ಮಧ್ಯರಾತ್ರಿಯಿಂದ ಅಕ್ಟೋಬರ್ 14 ರಂದು ಮಧ್ಯರಾತ್ರಿವರೆಗೂ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ನಿಲ್ಲಿಸಲಾಗುವುದು.

 

ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ, ತಿಂಗಳಾಂತ್ಯಕ್ಕೆ ಪೆಟ್ರೋಲ್ ಖರೀದಿ ಮತ್ತು ಮಾರಾಟವನ್ನು ಸ್ಥಗಿತಗೊಳಿಸಲು ಬಂಕ್ ಮಾಲೀಕರು ನಿರ್ಧರಿಸಿದ್ದಾರೆ. ಅಕ್ಟೋಬರ್ 13 ರಂದು ಬಂಕ್ ಬಂದ್ ಮಾಡಲಿದ್ದು, ಅಂದು ವಾಹನ ಸವಾರರಿಗೆ ಪೆಟ್ರೋಲ್, ಡೀಸೆಲ್ ಕೊರತೆಯಾಗಲಿದೆ.

LEAVE A REPLY

Please enter your comment!
Please enter your name here