ನಮ್ಮ ಹಿಂದೂ ಪುರಾಣಗಳಲ್ಲಿ ಪ್ರಾಣಿಗಳಿಗೆ ಮೊದಲಿಂದಲೂ ವಿಶೇಷವಾದ ಸ್ಥಾನಮಾನಗಳನ್ನು ನೀಡಿದ್ದಾರೆ.ಇಲಿ ಆಗಲಿ ಗರುಡ ಹುಲಿ ಸಿಂಹ ಮುಂತಾದವುಗಳು ದೇವರುಗಳ ವಾಹನಗಳಾಗಿವೆ ಎಂಬುದು ನಮಗೆ ಗೊತ್ತು…ದೇವರುಗಳಿಗೆ ದೇವಾಲಯಗಳು ಇರುವುದು ಸರ್ವೆ ಸಾಮಾನ್ಯ.ಆದರೆ ಕಪ್ಪೆಗೆ ದೇವಾಲಯವೇ? ಆಶ್ಚರ್ಯವಾಯಿತೇ..

ಓದಿ ಮುಂದೆ…

ಹೌದು ಉತ್ತರ ಪ್ರದೇಶದಲ್ಲಿ 200 ವರ್ಷದಷ್ಟು ಹಳೆಯದಾದ ಒಂದು ದೇವಾಲಯವಿದೆ.ಈ ದೇವಾಲಯದ ವಿಶೇಷತೆ ಏನೆಂದರೆ ಇಲ್ಲಿ ಕಪ್ಪೆಯನ್ನು ಪೂಜೆ ಮಾಡಲಾಗುತ್ತದೆ.ಸಂತಾನ ಶಕ್ತಿಗೆ ಹೆಸರಾದ ಒಂದು ಪ್ರಾಣಿಯೆಂದರೆ ಅದು ಕಪ್ಪೆ.ಅದಕ್ಕಾಗಿಯೇ ಇಲ್ಲಿ ಕಪ್ಪೆಯನ್ನು ಪೂಜೆಸುತ್ತಾರೆ.ಈ ದೇವಾಲಯ ಉತ್ತರ ಪ್ರದೇಶ ರಾಜ್ಯದಲ್ಲಿರುವ ಲಕೀಮ್‌ಪುರ್‌ ಖೇರಿಯಿಂದ ಸೀತಾಪುರಕ್ಕೆ ಹೋಗುವ ದಾರಿಯಲ್ಲಿದೆ.

ಶಿವರಾತ್ರಿ ಹಾಗೂ ಶ್ರಾವಣ ಸೋಮವಾರಗಳಂದು ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.ಈ ದೇವಾಲಯದ ಇನ್ನೊಂದು ಪ್ರಮುಖ ಅಂಶ ಎಂದರೆ ಇಲ್ಲಿ ಮಕ್ಕಳಿಲ್ಲದ ದಂಪತಿಗಳು ಹಾಗೂ ದಾರಿದ್ರ್ಯದಿಂದ ಮುಕ್ತಿ ಪಡೆಯ ಬಯಸುವವರು ಜನರು ಇಲ್ಲಿ ಬಂದು ಪೂಜೆ ಮಾಡಿದರೆ ಅವರಿಗೆ ಮಂಡೂಕ ದೇವರ ಆಶೀರ್ವಾದ ದೊರೆತು ಅವರ ಬೇಡಿಕೆ ಈಡೇರುತ್ತದೆ.

LEAVE A REPLY

Please enter your comment!
Please enter your name here