ಈ ನೋಟು ಇನ್ನು ಮುಂದೆ ATMನಲ್ಲೂ ಲಭ್ಯ.ಯಾವುದು ಆ ನೋಟು?

0
850

ಕಳೆದ ವರ್ಷ ನವೆಂಬರ್ ನಲ್ಲಿ 500,1000 ನೋಟ್ ಬ್ಯಾನ್ ಮಾಡಿದ ಬಳಿಕ, ಹೊಸ 500 ರೂ., 2000 ರೂ. ನೋಟ್ ಚಲಾವಣೆಗೆ ತರಲಾಗಿದೆ. 2000 ರೂ. ನೋಟ್ ಗೆ ಚಿಲ್ಲರೆ ಸಮಸ್ಯೆ ಎದುರಾದ ಕಾರಣ, ಇದೀಗ 200 ರೂ. ನೋಟ್ ಪರಿಚಯಿಸಲಾಗಿದೆ.

ಆದರೆ 200 ರೂ. ನೋಟ್ ಪೂರ್ಣ ಪ್ರಮಾಣದಲ್ಲಿ ಇನ್ನೂ ಚಲಾವಣೆಗೆ ಬಂದಿಲ್ಲ.ಕೆಲವು ಕಡೆ ಮಾತ್ರ ಈ ನೋಟ್ ಚಲಾವಣೆಯಲ್ಲಿದೆ.ಎ.ಟಿ.ಎಂ.ಗಳಲ್ಲಿ 200 ರೂ. ನೋಟ್ ಬರುತ್ತಿಲ್ಲ.200 ರೂ. ನೋಟ್ ತುಂಬಲು ಎ.ಟಿ.ಎಂ.ಗಳನ್ನು ಮತ್ತೆ ಸಿದ್ಧಪಡಿಸಬೇಕಿದೆ.

ಎ.ಟಿ.ಎಂ. ಕ್ಯಾಸೆಟ್ ಗಳನ್ನು(ಹಣವನ್ನು ಹಿಡಿದಿಟ್ಟುಕೊಳ್ಳುವ ಸಣ್ಣ ಪೆಟ್ಟಿಗೆ) 200 ರೂ. ಕರೆನ್ಸಿ ನೋಟ್ ಗಳ ಆಕಾರಕ್ಕೆ ಅನುಗುಣವಾಗಿ ಜೋಡಿಸಬೇಕಿದೆ.ಇದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳಬೇಕಿರುವುದರಿಂದ ಬ್ಯಾಂಕ್ ಗಳು ಎ.ಟಿ.ಎಂ.ಗಳನ್ನು ಸಿದ್ಧಗೊಳಿಸಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.

ಎ.ಟಿ.ಎಂ.ಗಳನ್ನು 200 ರೂ. ನೋಟ್ ತುಂಬಲು ಅನುಗುಣವಾಗಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು,ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ವರ್ಷಾಂತ್ಯಕ್ಕೆ ಎ.ಟಿ.ಎಂ.ಗಳಲ್ಲಿ 200 ರೂ. ನೋಟ್ ಸಿಗಲಿದೆ.

LEAVE A REPLY

Please enter your comment!
Please enter your name here