ನೀವು ಪ್ರತಿ ನಿತ್ಯ ಹಣ ಕಳುಹಿಸೋಕೆ ಬ್ಯಾಂಕ್ ಗೆ ಹೋಗಿ ಸಾಲಲ್ಲಿ ನಿಲ್ಲುವ ಅಥವಾ ಮೊಬೈಲ್ ಬ್ಯಾಂಕಿಂಗ್ ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತೀರಾ.ಆದರೆ ನಿಮ್ಮ ಧ್ವನಿ ಆದೇಶದ ಮೂಲಕವೇ ಹಣ ಕಳಿಸುವ ವ್ಯವಸ್ಥೆಯೊಂದನ್ನು ಜಾರಿಗೆ ಬಂದರೆ ಹೇಗಿರುತ್ತೆ?

ಆಶ್ಚರ್ಯ ಆಗ್ತಾ ಇದೇನಾ?

ಹೌದು ವಿಶ್ವದಲ್ಲೇ ಮೊದಲ ಬಾರಿಗೆ ನಿಮ್ಮ ಧ್ವನಿ ಆದೇಶದ ಮೂಲಕವೇ ಹಣ ಕಳಿಸುವ ವ್ಯವಸ್ಥೆಯೊಂದನ್ನು ICICI ಬ್ಯಾಂಕ್ ಪರಿಚಯಿಸಿದೆ.

ಮೊದಲಿಗೆ ಇದು ಆಪಲ್ ನಲ್ಲಿ ಮಾತ್ರ ಲಭ್ಯವಿದ್ದು ಸಿರಿ ಪೇಮೆಂಟ್ ನಲ್ಲಿ ಧ್ವನಿ ಆಧಾರಿತ ಅಂತರರಾಷ್ಟ್ರೀಯ ಹಣ ರವಾನೆ ಸೇವೆಯನ್ನು ಆರಂಭಿಸಿದೆ.ಇದರಂತೆ ಆಪಲ್ ಐಫೋನ್/ ಐಪ್ಯಾಡ್ ನಲ್ಲಿ ಸರಳ ವಾಯ್ಸ್ ಆಜ್ಞೆಯ ಮೂಲಕ ಅನಿವಾಸಿ ಭಾರತೀಯರು ಭಾರತದ ಯಾವುದೇ ಬ್ಯಾಂಕ್ ಗಳಿಗೆ ಹಣ ಕಳುಹಿಸಬಹುದಾಗಿದೆ.

 

ಮನಿ ಟು ಇಂಡಿಯಾ ಆಪ್ ಡೌನ್ ಲೋಡ್ ಮಾಡಿಕೊಂಡು ವಾರದ ಎಲ್ಲಾ ದಿನವೂ ಹಣ ಕಳಿಸಬಹುದಾಗಿದೆ.

ಹೇಗೆ ಕಳುಹಿಸೋದು?

ಗ್ರಾಹಕನು Money2India ನೊಂದಿಗೆ 100 ಡಾಲರ್ ಅನ್ನು ಕಳುಹಿಸಿ ಎಂದು ಹೇಳುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.ಈ ಧ್ವನಿ ಸೂಚನೆಯ ಆಧಾರದ ಮೇಲೆ,ಸಿರಿ ಧ್ವನಿ ಆಜ್ಞೆಯನ್ನು ನೈಸರ್ಗಿಕ ಭಾಷಾ ಸಂಸ್ಕರಣ ಬಳಸಿಕೊಂಡು ಪಠ್ಯಕ್ಕೆ ಪರಿವರ್ತಿಸುತ್ತದೆ.

LEAVE A REPLY

Please enter your comment!
Please enter your name here