‘ಈ ಸಲ ಕಪ್ ನಮ್ದೆ’ ಅಂತ ಎಲ್ಲರೂ ಹೇಳುತ್ತಿದ್ದಾರೆ.ಈ ವಾಕ್ಯ ದೊಡ್ಡ ಟ್ರೆಂಡ್ ಆಗಿದೆ.ಅದೇ ರೀತಿ ಆರ್ ಸಿ ಬಿ ತಂಡಕ್ಕೆ ಜೋಶ್ ಕೊಡುವುದಕ್ಕೆ ಈಗ ಒಂದು ಹಾಡು ಬಂದಿದೆ.ಐ ಪಿ ಎಲ್ ಸೀಸನ್ 11 ಇಂದಿನಿಂದ ಶುರು ಆಗುತ್ತಿದೆ.

ಮ್ಯಾಚ್ ಶುರು ಆಗುವುದಕ್ಕೆ ಮುಂದೆ ಈಗ ಕನ್ನಡದಲ್ಲಿ ಬಂದಿರುವ ಒಂದು ಹಾಡು ಸಖತ್ ಕಿಕ್ ನೀಡುತ್ತಿದೆ.ಆರ್ ಸಿ ಬಿ ಪಾರ್ಟಿ ಅಂಥಮ್ ಈಗ ಸಖತ್ ಸದ್ದು ಮಾಡುತ್ತಿದೆ.ಯೂ ಟ್ಯೂಬ್ ನಲ್ಲಿ ನಿನ್ನೆ ರಿಲೀಸ್ ಆಗಿರುವ ಈ ಹಾಡು 11 ನೇ ಟ್ರೆಂಡಿಂಗ್ ವಿಡಿಯೋ ಆಗಿದೆ.

ಜೊತೆಗೆ ಒಂದು ಲಕ್ಷಕ್ಕೂ ಅಧಿಕ ಜನರು ಹಾಡನ್ನು ವೀಕ್ಷಿಸಿದ್ದಾರೆ.”ಅಲ್ಲಿ ನೋಡು ಆರ್ ಸಿ ಬಿ, ಇಲ್ಲಿ ನೋಡು ಆರ್ ಸಿ ಬಿ, ಮನೆಯಾಗ್ ನೋಡು,ನಮ್ ಎದೆಯಾಗ್ ನೋಡು ಆರ್ ಸಿ ಬಿ..” ಎಂಬ ಹಾಡು ಕೇಳುಗರಿಗೆ ಇಷ್ಟ ಆಗಿದೆ.

ಕನ್ನಡದ ಪ್ರತಿಭಾವಂತ Rapping ಆಲ್ ಓಕೆ ಈ ಹಾಡನ್ನು ಮಾಡಿದ್ದಾರೆ.ಈ ಹಾಡಿನ ಸಾಹಿತ್ಯ,ನಿರ್ದೇಶನ ಮತ್ತು ಹಾಡಿನಲ್ಲಿ ಆಲ್ ಓಕೆ ಹೆಜ್ಜೆ ಹಾಕಿದ್ದಾರೆ.ಆರ್ ಸಿ ಬಿ ಅಭಿಮಾನಿಗಳಿಗಾಗಿ ಈ ಹಾಡನ್ನು ಡೆಡಿಕೇಟ್ ಮಾಡಲಾಗಿದೆ.

ಅದರ ವೀಡಿಯೋ ನೋಡಿ…

krupe : Filmibeat

LEAVE A REPLY

Please enter your comment!
Please enter your name here