ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ

0
108

ಭಾರತ ಹಾಗೂ ನ್ಯೂಜಿಲ್ಯಾಂಡ್ ಸರಣಿಯ ಪುಣೆಯಲ್ಲಿ ನಡೆದ ಎರಡನೇ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದುಕೊಂಡಿದೆ.ಇದು ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಒಟ್ಟು ನಡೆದ ಪಂದ್ಯಗಳಲ್ಲಿ ನೂರನೇ ಪಂದ್ಯ ಎನ್ನುವುದು ಇನ್ನೊಂದು ವಿಶೇಷ.

ಭಾರತದ ಪರ ಧವನ್ 68 ಹಾಗೂ ದಿನೇಶ್ ಕಾರ್ತಿಕ್ 64 ರನ್ನು ಗಳಿಸಿದರು. ಹಾರ್ದಿಕ್ ಪಾಂಡ್ಯ 30 ಹಾಗೂ ವಿರಾಟ್ ಕೊಹ್ಲಿ 29 ರನ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡವು ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಯಿಂದ ಆರಂಭಿಕ ಕುಸಿತಕ್ಕೆ ಒಳಗಾಗಿ ಕೇವಲ 230ರನ್ನು ಗಳಿಸಲಷ್ಟೇ ಸಾಧ್ಯವಾಯಿತು.

ನ್ಯೂಜಿಲ್ಯಾಂಡ್ ಪರ ಹೆನ್ರಿ ನಿಕೊಲಸ್ ಗರಿಷ್ಠ ಮೊತ್ತ  42 ರನ್ನು ಗಳಿಸಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭುವನೇಶ್ವರ್ ಕುಮಾರ್ ಭಾಜನರಾದರು. ಫೈನಲ್ ಎಂದೇ ಬಿಂಬಿತವಾಗಿರುವ ಎರಡು ತಂಡಗಳಿಗೆ ಮಾಡು ಇಲ್ಲ ಮಾಡಿ ಎನ್ನುವಂತಾಗಿರುವ 3 ನೇ ಪಂದ್ಯ ಈ ಭಾನುವಾರ ಕಾನ್ಪುರ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here