ಕ್ರಿಕೆಟರ್ ಎಸ್ ಶ್ರೀಶಾಂತ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ಭಾರತ ಕ್ರಿಕೆಟ್ ತಂಡ ಕಂಡ ಅತ್ಯಂತ ಶ್ರೇಷ್ಠ ಕ್ರಿಕೆಟ್ ಆಟಗಾರ ಮತ್ತು ಭಾರತದ ವೇಗದ ಬೌಲರ್ ಇವ್ರು,ಆದರೆ ಆ ಒಂದು ಕರಾಳ ದಿನ ಅವರನ್ನು ಕ್ರಿಕೆಟ್ ಜಗತ್ತಿನಿಂದ ದೂರ ಉಳಿಯುವಂತೆ ಮಾಡಿದೆ.

ಎಸ್ ಶ್ರೀಶಾಂತ್ ಅವರು ಯಾಕೆ ಕ್ರಿಕೆಟ್ ಇಂದ ದೂರ ಉಳಿದ್ರು ಅಂತ ಗೊತ್ತಾ, 2013 ರ ಐಪಿಎಲ್ ಅಲ್ಲಿ ಅವರು ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಸಿಕ್ಕಿಬಿದ್ದು ಇಡೀ ಕ್ರಿಕೆಟ್ ಜೀವನನದಿಂದಲೇ ಬಹಿಸ್ಕಾರ ಗೊಂಡು ಮನೆ ಸೇರಿದರು.

ಅಂದಿನ ಒಂದೇ ಒಂದು ಪಂದ್ಯ ಅವರ ಬದುಕನ್ನೇ ಹಾಳು ಮಾಡಿತು, ಅವರು ಆ ದಿನ ಮ್ಯಾಚ್ ಫಿಕ್ಸಿಂಗ್ ಅಲ್ಲಿ ಭಾಗಿ ಆಗಿದ್ದರೋ ಇಲ್ಲವೋ ಖಚಿತ ಮಾಹಿತೆ ಮತ್ತು ಆಧಾರಗಳು ಸಿಗದೇ ದೂರ ಆದರು.

ಶ್ರೀಶಾಂತ್ ಏನ್ ಹೇಳಿದ್ರು ಗೊತ್ತಾ:

ನಿಮಗೆ ಸೌತ್ ಆಫ್ರಿಕಾದ ಬೌಲರ್ ಅಲನ್ ಡೋನಲ್ಡ್ ಗೊತ್ತಲ್ವಾ, ಶ್ರೀಶಾಂತ್ ಅವರ ಕಟ್ಟಾ ಅಭಿಮಾನಿ ಮತ್ತು ಶ್ರೀಶಾಂತ್ ಅವರನ್ನು ನೋಡಿಯೇ ಬೌಲಿಂಗ್ ಅನ್ನು ಚೆನ್ನಾಗಿ ಕಲಿತಿದ್ದು. ಶ್ರೀಶಾಂತ್ ಗೆ ಅವರ ಹಾಗೆಯೇ ಸೊಂಟಕ್ಕೆ ಟವೆಲ್ ಕಟ್ಟಿಕೊಂಡು ಆಡುವ ಆಸೆ.
ಫಿಕ್ಸಿಂಗ್ ಅಲ್ಲಿ ಸಿಕ್ಕಿಕೊಳ್ಳುವ ಮುಂಚೆಯೂ ಸಹ ಎಸ್ ಶ್ರೀಶಾಂತ್ ಅವರು ಎಷ್ಟೋ ಸಲ ಸೊಂಟಕ್ಕೆ ಟವೆಲ್ ಮತ್ತು ಮುಖಕ್ಕೆ ಬಿಳಿ ಬಣ್ಣ ಹಚ್ಚಿಕೊಂಡು ಆಟವಾಡಿದ್ದಾರೆ.

ಅಂದು ಐಪಿಎಲ್ ಸಮಯದಲ್ಲಿ ಕೈಗೆ ಬ್ಯಾಂಡ್ ಮತ್ತು ಸೊಂಟಕ್ಕೆ ಟವೆಲ್ ಕಟ್ಟಿಕೊಂಡು ಆಡಿದ್ದರಿಂದ ಅನುಮಾನಕ್ಕೊಳಗಾಗಿ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಬಂದಿಯಾಗಿದ್ದರು.

ಆ ಸಮಯದಲ್ಲಿ ಬಿಸಿಸಿಐ ಅವರ ಮೇಲೆ ಜೀವನ ಪರ್ಯಂತದ ನಿರ್ಬಂಧ ಹೇರಿತ್ತು, ಇದರಿಂದ ಈ ಅನುಭವಿ ಆಟಗಾರ ಕ್ರಿಕೆಟ್ ಜೀವನದಿಂದಲೇ ದೂರವಾಗಿಬಿಟ್ಟರು ಮತ್ತು ಈಗ ವಾಪಸ್ ಕ್ರಿಕೆಟ್ ಗೆ ಮರಳಲು ಕಾಯುತ್ತಿದ್ದಾರೆ.

ಇತ್ತೀಚಿಗೆ ಕೇರಳ ಹೈ ಕೋರ್ಟ್ ಅವರ ಮೇಲಿನ ಬ್ಯಾನ್ ಅನ್ನು ತೆಗೆಯುವಂತೆ ಬಿಸಿಸಿಐ ಗೆ ಹೇಳಿದ್ದು ಈಗ ಎಲ್ಲವು ಬಿಸಿಸಿಐ ಮೇಲೆ ನಿಂತಿದೆ, ಇದೆ ಸಂದರ್ಭದಲ್ಲಿ ಮಾತಾಡಿದ ಶ್ರೀ ಅವರು ಸತ್ಯ ಒಂದನ್ನು ಹೇಳಿದ್ದಾರೆ.

ಟವೆಲ್ ಯಾಕೆ ಕಟ್ಟಿದ್ದರು ಗೊತ್ತಾ:

ನಾನು ಸೌತ್ ಆಫ್ರಿಕಾ ಕ್ರಿಕೆಟರ್ ಅಲನ್ ಅವರ ಅಭಿಮಾನಿ ಹೀಗಾಗಿ ಅವರಂತೆಯೇ ನಡೆಯಲು ಇಷ್ಟ ಪಡುತ್ತೇನೆ ಮತ್ತು ಅವರಂತೆಯೇ ಅನುಸರಿಸುತ್ತ ಬಂದಿದ್ದೇನೆ, ನಾನು ಟವೆಲ್ ಕಟ್ಟಿಕೊಳ್ಳುವುದು ಅವರ ಮೇಲಿನ ಅಭಿಮಾನದಿಂದ ಅಂದಿದ್ದಾರೆ.

ಐಪಿಎಲ್ ಗಿಂತಾ ಮುಂಚೆಯೂ ಕೂಡಾ ನಾನು ಎಷ್ಟೋ ಮ್ಯಾಚ್ ಗಳಲ್ಲಿ ಸೊಂಟಕ್ಕೆ ಟವೆಲ್ ಮತ್ತು ಕೈಗೆ ಬ್ಯಾಂಡ್ ಕಟ್ಟಿಕೊಂಡು ಆಟ ಆಡಿದ್ದೇನೆ,ಹಾಗಾದರೆ ಅವೆಲ್ಲಾ ಮ್ಯಾಚ್ ಫಿಕ್ಸಿಂಗ್ ಆ,ಯಾಕೆ ನೀವು ಆ ಸಮಯದಲ್ಲಿ ನನ್ನನ್ನು ಹಿಡಿಯಲಿಲ್ಲ ಎಂದು ಹೇಳಿದ್ದಾರೆ ಮತ್ತು ನಾನು ಆರೋಪಿ ಅಲ್ಲ ಎಂದು ಹೇಳಿದ್ದಾರೆ.

ಏನ್ ಆರೋಪ ಇದೆ ಗೊತ್ತಾ ಅವರ ಮೇಲೆ:

ಶ್ರೀಶಾಂತ್ ಅವರ ಮೇಲೆ ಹತ್ತು ಲಕ್ಷ ಹಣಕ್ಕೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ ಎಂಬ ಆರೋಪ ಇದೆ. ಈ ವಿಷಯವನ್ನು ಪ್ರಸ್ತಾಪಿಸಿದ ಅವರು ನಾನೊಬ್ಬ ಕ್ರಿಕೆಟ್ ಪ್ಲೇಯರ್, ನನಗೆ ಹತ್ತು ಲಕ್ಷ ಗಳಿಸುವುದು ದೊಡ್ಡ ಮಾತಲ್ಲ.

ಹೀಗಿರುವಾಗ ನಾನೇಕೆ ಬರಿ ಹತ್ತು ಲಕ್ಷಕ್ಕೆ ನನ್ನ ಜೀವನವನ್ನು ಹಾಲು ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ, ಏನೇ ಆಗಲಿ ಬೇಗ ಶ್ರೀಶಾಂತ್ ಅವರು ಪ್ರಕರಣದಿಂದ ಮುಕ್ತಿ ಹೊಂದಿ ಭಾರತ ತಂಡಕ್ಕೆ ಮರಳಲಿ ಎಂಬುದು ಕೋಟ್ಯಾನುಕೋಟಿ ಭಾರತೀಯರ ಆಸೆ.

LEAVE A REPLY

Please enter your comment!
Please enter your name here