ಏಕದಿನ ಪಂದ್ಯ ದಲ್ಲಿ ಈ ಬ್ಯಾಟ್ಸ್ ಮನ್ ಹೊಡೆದ ರನ್ ಗಳು ಎಷ್ಟು ಗೊತ್ತೇ? ಓದಿ ಇದನ್ನು….

0
482

ನಿಮಗೆ ಈ ಸುದ್ದಿ ಓದಿದರೆ ಆಶ್ಚರ್ಯವಾಗುವುದು ಗ್ಯಾರಂಟಿ… ಏಕದಿನ ಪಂದ್ಯದಲ್ಲಿ ಅಮ್ಮಮ್ಮ ಅಂದ್ರೆ ಒಬ್ಬ ದಾಂಡಿಗ ಎಷ್ಟು ರನ್ಸ್ ಹೊಡೆಯಬಹುದು? 100 200..? ಆಲ್ವಾ, ಆದರೆ ದಕ್ಷಿಣ ಆಫ್ರಿಕದ 20ರ ಹರೆಯದ ದಾಂಡಿಗ ಶೇನ್ ಡಾಡ್ಸ್ಮನ್ ಶನಿವಾರ ಕ್ಲಬ್ ಕ್ರಿಕೆಟ್ ನಲ್ಲಿನ 50 ಓವರ್ ಗಳ ಪಂದ್ಯದಲ್ಲಿ ವೈಯಕ್ತಿಕ ಸ್ಕೋರ್ 490 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.

ಶನಿವಾರ 20ನೆ ವರ್ಷಕ್ಕೆ ಕಾಲಿಟ್ಟಿದ್ದ ಡಾಡ್ಸ್ವೆಲ್ ತನ್ನ ಕ್ರಿಕೆಟ್ ಕ್ಲಬ್ ಪರ ಪೊಚ್ ಡಾರ್ಪ್ ತಂಡದ ವಿರುದ್ಧ ಈ ಸಾಧನೆ ಮಾಡಿದರು.

ಡಾಡ್ಸ್ವೆಲ್ 151 ಎಸೆತಗಳನ್ನು ಎದುರಿಸಿದ್ದು 57 ಸಿಕ್ಸರ್ ಹಾಗೂ 27 ಬೌಂಡರಿಗಳ ನೆರವಿನಿಂದ 490 ರನ್ ಗಳಿಸಿ ವಿಶ್ವ ಕ್ರಿಕೆಟಿಗರ ಗಮನ ಸೆಳೆದರು.ಡಾಡ್ಸ್ವೆಲ್ ಸಹ ಆಟಗಾರ ರುಯಾನ್ ಹಾಸ್ಬ್ರೊಕ್ 54 ಎಸೆತಗಳಲ್ಲಿ ಔಟಾಗದೆ 104 ರನ್ ಗಳಿಸಿದರು.

ಡಾಡ್ಸ್ವೆಲ್ ಹಾಗೂ ಹಾಸ್ಬ್ರೊಕ್ ಸಾಹಸದ ನೆರವಿನಿಂದ NWU ಪ್ಯುಕೆ ತಂಡ 50 ಓವರ್ ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 677 ರನ್ ಗಳಿಸಿತು.

63 ಸಿಕ್ಸರ್ ಹಾಗೂ 48 ಬೌಂಡರಿಯ ಮೂಲಕವೇ 570 ರನ್ ಹರಿದುಬಂತು. ಪ್ಯುಕೆ ತಂಡದ ದಾಂಡಿಗರು ಮೊದಲ ಮೂರು ವಿಕೆಟ್ ಗೆ 194, 204 ಹಾಗೂ 220 ರನ್ ಜೊತೆಯಾಟ ನಡೆಸಿದರು.

ಡಾರ್ಪ್ ತಂಡದ ನಾಲ್ವರು ಬೌಲರ್ಗಳು 100ಕ್ಕೂ ಅಧಿಕ ರನ್ ಬಿಟ್ಟುಕೊಟ್ಟರು.ಇತರ ಇಬ್ಬರು 90ಕ್ಕೂ ಅಧಿಕ ರನ್ ನೀಡಿದರು.

LEAVE A REPLY

Please enter your comment!
Please enter your name here