ಏರ್ ಟೆಲ್ ನಿಂದ ಗ್ರಾಹಕರಿಗೆ ಜಿಯೋ ರೀತಿಯದ್ದೇ ಆಫರ್ ಏನದು? ಓದಿ…

0
1229

ಏರ್ ಟೆಲ್ ಗ್ರಾಹಕರಿಗೆ ಸಿಹಿಸುದ್ದಿ ಇಲ್ಲಿದೆ.ಈ ಮೊದಲು ಜಿಯೋ ದೀಪಾವಳಿ ಆಫರ್ ಜಿಯೊ ಸೀಮಿತ ಅವಧಿಗೆ 399 ರೂ . ರೀಚಾರ್ಜ್ ಗೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ನೀಡಿತ್ತು.

ಆದರೆ ಈಗ ಏರ್ ಟೆಲ್ ಅವರು ನೀಡಿರುವ ಆಫರ್ ಬಗ್ಗೆ ಕೇಳಿದರೆ ಆಶ್ಚರ್ಯ ಪಡುವುದು ಗ್ಯಾರಂಟಿ… ಏನದು ಆಫರ್? ಮುಂದಿನ ಸಾಲುಗಳಲ್ಲಿ ಆ ಆಫರ್ ಬಗ್ಗೆ ತಿಳಿಯಿರಿ.

ಈ ಮೊದಲು ಜಿಯೊ ಕೊಟ್ಟ ಆಫರ್ ಗೆ ವಿರುದ್ಧವಾಗಿ ಸೆಡ್ಡು ಹೊಡೆದಿರುವ ಏರ್ ಟೆಲ್ ಯಾವ ಆಫರ್ ನೀಡಿದೆ ಗೊತ್ತೇ?

ಏರ್ ಟೆಲ್ 349 ರೂ. ರೀ ಚಾರ್ಜ್ ಗೆ ಕ್ಯಾಶ್ ಬ್ಯಾಕ್ ಆಫರ್ ಪರಿಚಯಿಸಿದೆ.ಇದರಲ್ಲಿ ಗ್ರಾಹಕರು ಏರ್ ಟೆಲ್ ವಿಧಿಸಿರುವ ಷರತ್ತುಗಳನ್ನು ಅನುಸರಿಸಿದಲ್ಲಿ ಕಂತುಗಳಲ್ಲಿ ಹಣ ಸಂದಾಯವಾಗಲಿದೆ.

ಏರ್ ಟೆಲ್ ಬಳಕೆದಾರರು ಈ ಯೋಜನೆಯಲ್ಲಿ ಮೊದಲ ತಿಂಗಳು ಯಾವುದೇ ಕ್ಯಾಶ್ ಬ್ಯಾಕ್ ದೊರಕುವುದಿಲ್ಲ.ಪ್ಯಾಕ್ ಹಾಕಿಸಿಕೊಂಡ ಎರಡನೇ ತಿಂಗಳಿಂದ ಕ್ಯಾಶ್ ಬ್ಯಾಕ್ ಆರಂಭವಾಗಲಿದೆ.ಬಳಕೆದಾರರು ತಮ್ಮ ಫೋನ್ ಪುನಃ ರೀಚಾರ್ಜ್ ಮಾಡುವಾಗ ಪ್ರತಿ ಬಾರಿ 50 ರೂ.ಗಳಂತೆ 7 ತಿಂಗಳ ಅವಧಿಯಲ್ಲಿ 349 ರೂಗಳನ್ನು ಹಿಂದಿರುಗಿಸಲಾಗುವುದು. ಈ ಕೊಡುಗೆ 349 ರೂ. ರೀಚಾರ್ಜ್ ಗೆ ಮಾತ್ರ ಅನ್ವಯವಾಗಲಿದೆ.

ಮೈ ಏರ್ ಟೆಲ್ ಅಪ್ಲಿಕೇಷನ್ ಗೆ ಹೋಗಿ ನಿಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಿಕೊಳ್ಳಬಹುದು.349 ರೂ. ಪ್ಲಾನ್ ನಲ್ಲಿ 28 ದಿನಗಳವರೆಗೆ 28 GB ಡೇಟಾ, ಅನಿಯಮಿತ ಕರೆ ಸೌಲಭ್ಯ ನೀಡಲಾಗುವುದು.

LEAVE A REPLY

Please enter your comment!
Please enter your name here