ಸಾಮಾನ್ಯವಾಗಿ ವಾಹನ ಚಾಲನೆ ವೇಳೆ ತಾಂತ್ರಿಕ ಅಂಶಗಳು ಕೆಲವೊಮ್ಮೆ ಕೈಕೊಟ್ಟಾಗ ಇಲ್ಲವೇ ಟಾಫ್ರಿಕ್ ನಿಯಮಗಳನ್ನು ಮಿರಿ ವಾಹನ ಚಾಲನೆ ಮಾಡುವಾಗ ಅಪಘಾತಗಳು ಸಂಭವಿಸುವುದು ಸಾಮಾನ್ಯ. ಆದ್ರೆ ಇಲ್ಲೊಂದು ಅಪಘಾತ ಪ್ರಕರಣವನ್ನು ನೋಡಿದ್ರೆ ನಿಮಗೆ ಶಾಕ್ ಆಗದೆ ಇರಲಾರದು.

ಕಾರು ಚಾಲನೆ ವೇಳೆ ಗಂಡ-ಹೆಂಡತಿ ಜಗಳದಿಂದಾಗಿ ನಾಲ್ವರು ದುರ್ಮರಣ:

ಹೌದು, ಕಾರು ಚಾಲನೆ ವೇಳೆ ಗಂಡ-ಹೆಂಡತಿ ಜಗಳವು ದುರಂತದಲ್ಲಿ ಅಂತ್ಯವಾಗಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲನೆ ವೇಳೆ ಬೇರೆಡೆ ಗಮನ ಹರಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಆಟೋ ರಿಕ್ಷಾ ಗುದ್ದಿದ ಪರಿಣಾಮ ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಮತ್ತು ಆಟೋದಲ್ಲಿದ್ದ ಇಬ್ಬರು ಮಹಿಳೆಯರು ಕೂಡಾ ಪ್ರಾಣಕಳೆದುಕೊಂಡಿದ್ದಾರೆ.

ಎಲ್ಲಿ ಗೊತ್ತೇ ಈ ಘಟನೆ:

ಅಂದಹಾಗೆ ಈ ಘಟನೆ ನಡೆದಿರುವುದು ರಾಜಸ್ತಾನದ ಬಿಕಾನೇರ್ ಜಿಲ್ಲೆಯಲ್ಲಿ. ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ ಹೋಗುತ್ತಿದ್ದ ದಂಪತಿಗಳಿಬ್ಬರು ವೈಯಕ್ತಿಕ ಕಾರಣಗಳಿಂದ ಜಗಳಕ್ಕಿಳಿದ್ದಾರೆ. ಈ ವೇಳೆ ಗಮನ ಬೇರೆಡೆ ಹೋದ ಪರಿಣಾಮ ವೇಗದಲ್ಲಿದ್ದ ಆಟೋ ರಿಕ್ಷಾಗೆ ಸ್ವಿಫ್ಟ್ ಕಾರು ಅಡ್ಡ ಬಂದಿದೆ.

ಆಟೋ ರಿಕ್ಷಾ ವೇಗದಲ್ಲಿದ್ದ ಕಾರಣ ಕಾರಿನಲ್ಲಿದ್ದ ದಂಪತಿಗಳಿಬ್ಬರು ಸೇರಿ ಆಟೋ ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮತ್ತು ಆಟೋ ರಿಕ್ಷಾ ಎರಡು ಸಹ ಸಂಪೂರ್ಣ ಜಖಂಗೊಂಡಿದೆ.

ಇನ್ನು ಘಟನೆಗೂ ಮುನ್ನ ದಂಪತಿಯ ಜಗಳ ನೋಡಿದ್ದ ಮತ್ತೊಬ್ಬ ಕಾರು ಮಾಲೀಕ ಮುಂದೆ ನೋಡಿಕೊಂಡು ಸರಿಯಾಗಿ ಕಾರು ಚಾಲನೆ ಮಾಡುವಂತೆ ಎಚ್ಚರಿಕೆ ನೀಡಿದ್ದನಂತೆ. ಆದಾಗಿ 5 ನಿಮಿಷದಲ್ಲೇ ಈ ದುರಂತ ನಡೆದಿದೆ ಎಂದು ರಾಜಸ್ತಾನ ಪ್ರತಿಕಾ ವರದಿ ಮಾಡಿದೆ.

ಹೇಗೆ ನಡೆದದ್ದು:

ವರದಿಗಳ ಪ್ರಕಾರ, ಆಟೋ ರಿಕ್ಷಾದಲ್ಲಿ ಚಾಲನಕನು ಸೇರಿ ಒಟ್ಟು 7 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ವೇಗದಲ್ಲಿದ್ದ ಆಟೋ ರಿಕ್ಷಾ ಗುದ್ದಿದ ಪರಿಣಾಮ ಆಟೋದಲ್ಲಿದ್ದ ಇಬ್ಬರು ವೃದ್ಧ ಮಹಿಳೆಯರು ಸೇರಿ ಕಾರಿನಲ್ಲಿದ್ದ ದಂಪತಿ ಸಹ ಮೃತಪಟ್ಟಿದ್ದಾರೆ.

ಜೊತೆಗೆ ಆಟೋ ಚಾಲಕ ಮತ್ತು ಒಬ್ಬ ಬಾಲಕನಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಮೃತ ದಂಪತಿಯನ್ನು ದೇವ್ ಪ್ರತಾಪ್(28) ಮತ್ತು ಪ್ರಿಯಾಂಕ್ ಪ್ರತಾಪ್(25) ಎಂದು ಗುರುತಿಸಲಾಗಿದೆ. ಈ ದಂಪತಿಗಳು ವರ್ಷದ ಹಿಂದಷ್ಟೇ ವಿವಾಹವಾಗಿದ್ದರಂತೆ.

ಇಂಡಿಯನ್ ನೆವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವ್ ಪ್ರತಾಪ್ ಕಳೆದ ವಾರವಷ್ಟೇ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ. ಈ ವೇಳೆ ಸಂಬಂಧಿಯೊಬ್ಬರ ವಿವಾಹಕ್ಕೆ ಹೊರಡುವಾಗ ಗಂಡ-ಹೆಂಡತಿ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಕಾರು ಚಾಲನೆ ಮಾಡುತ್ತಲೇ ಜಗಳವಾಡುತ್ತಿದ್ದ ದೇವ್ ಪ್ರತಾಪ್, ವೇಗದಲ್ಲಿದ್ದ ಆಟೋ ರಿಕ್ಷಾಗೆ ಕಾರು ಅಡ್ಡ ತಂದಿದ್ದಾನೆ. ಈ ವೇಳೆ ಕಾರು ಮುಂದೆಯೇ ಇದ್ದ ಪರಿಣಾಮ ನಿಯಂತ್ರಣ ಸಿಗದ ರಿಕ್ಷಾ ಕಾರಿನ ಮಧ್ಯೆ ಭಾಗಕ್ಕೆ ರಭಸಕ್ಕೆ ಗುದ್ದಿದೆ.

ಕೈ ಕೊಟ್ಟ ಏರ್ ಬ್ಯಾಗ್:

ಅಪಘಾತದ ವೇಳೆ ಕಾರಿನಲ್ಲಿದ್ದ ಸುರಕ್ಷಾ ಸಾಧನಗಳು (ಏರ್‌ಬ್ಯಾಗ್,ಎಬಿಎಸ್) ಸಹ ಯಾವುದೇ ಪ್ರಯೋಜನಕ್ಕೆ ಬಂದಿಲ್ಲಾ. ಜೊತೆಗೆ ಅತಿಯಾಗಿ ಜನರನ್ನು ತುಂಬಿಕೊಂಡ ಹೊರಟಿದ್ದ ಆಟೋ ರಿಕ್ಷಾ ಸಹ ತುರ್ತು ಸಂದರ್ಭದಲ್ಲಿ ನಿಯಂತ್ರಣಕ್ಕೆ ಬರದಿರುವುದು ಅಪಘಾತದ ಭೀಕರತೆಯನ್ನು ಹೆಚ್ಚಿಸಿದೆ ಎನ್ನಬಹುದು.

ಒಟ್ಟಿನಲ್ಲಿ ಗಂಡ ಹೆಂಡತಿಯ ಜಗಳ ಭೀಕರ ಅಪಘಾತದಲ್ಲಿ ಅಂತ್ಯವಾಗಿದ್ದು, ಯಾವುದೇ ಕಾರಣಕ್ಕೂ ಚಾಲನೆ ವೇಳೆ ಇಂತಹ ತಪ್ಪುಗಳನ್ನು ಮಾಡಬೇಡಿ. ಇದು ನಿಮಗೆ ಅಷ್ಟೇ ಅಲ್ಲದೇ ಇತರರ ಜೀವ ಕುತ್ತು ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನವುದಕ್ಕೆ ಈ ಘಟನೆಯೇ ಸಾಕ್ಷಿ.

ಸುದ್ದಿಕೃಪೆ ಡ್ರೈವ್ ಸ್ಪಾರ್ಕ್ ಕನ್ನಡ

LEAVE A REPLY

Please enter your comment!
Please enter your name here