ಕೆಲಸ ಬಿಟ್ಟಿದ್ದೀರಾ ?? ಪಿ ಎಫ್ ಪಡೆದುಕೊಳ್ಳುವುದು ಹೇಗೆ ಎಂದು ತಿಳಿಯುತ್ತಿಲ್ಲವೇ, ಹಾಗಾದರೆ ಈ ವಿಧಾನಗಳನ್ನು ಅನುಸರಿಸಿ ಸುಲಭವಾಗಿ ನಿಮಗೆ ನಿಮ್ಮ ಹಣ ದೊರೆಯುತ್ತದೆ

೧) ಮೊದಲು UAN ನಂಬರ್ ಅನ್ನು ಪಡೆದುಕೊಳ್ಳಿ

ಪಿ ಎಫ್ ಪಡೆದುಕೊಳ್ಳಲು ನೀವು ಮಾಡಬೇಕಾದ ಮೊದಲನೇ ಕೆಲಸವೆಂದರೆ ಅದು UAN ನಂಬರ್ ಅನ್ನು ನೀವು ಕೆಲಸ ಮಾಡುತ್ತಿದ್ದ ಕಂಪನಿಯವರ ಕಡೆಯಿಂದ ತೆಗೆದುಕೊಳ್ಳಿ., ನಂತರ UAN ವೆಬ್ಸೈಟ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನೊಂದಿಗೆ ಮೊದಲು ರಿಜಿಸ್ಟರ್ ಮಾಡಿಕೊಳ್ಳಿ

೨) ನಿಮ್ಮ ಮಾಹಿತಿ ಸರಿಯಿದೆಯೇ ಎಂಬುದನ್ನು ಒಮ್ಮೆ ಖಚಿತಪಡಿಸಿಕೊಳ್ಳಿ

ರಿಜಿಸ್ಟರ್ ಮಾಡಿಕೊಂಡ ನಂತರ ಅದರಲ್ಲಿ ಲಾಗಿನ್ ಅದರಲ್ಲಿ ನಿಮ್ಮ ಮಾಹಿತಿಗಳೆಲ್ಲವೂ ಸರಿಯಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ,

ಅಂದರೆ ನೀವು ಕೆಲಸ ಮಾಡುತ್ತಿದ್ದ ಕಂಪನಿಯವರ ಬಳಿ ಕೊಟ್ಟಿದ್ದ ಮಾಹಿತಿಗೂ ಹಾಗು ನಿಮ್ಮ ಬಳಿ ಈಗ ಲಭ್ಯವಿರುವ ಮಾಹಿತಿಗೂ ( ಪಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ನಂಬರ್, ತಂದೆ / ಗಂಡನ ಹೆಸರು, ಮೊಬೈಲ್ ನಂಬರ್) ಸರಿಯಾಗಿ ಹೊಂದಾಣಿಕೆಯಾಗುತ್ತಿದೆಯಾ ಎಂಬುದನ್ನು ನೋಡಿಕೊಳ್ಳಿ

೩) ನಿಮ್ಮ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿಮಾಡಿಸಿಕೊಳ್ಳಿ

ನಿಮ್ಮ ಬಳಿಯಿರುವ ಮಾಹಿತಿಗೂ ಮತ್ತು ಪಿ ಎಎಫ್ ನಲ್ಲಿ ನಮೂದಿಸಿರುವ ಮಾಹಿತಿಗೂ ಯಾನಾದರೂ ವ್ಯತ್ಯಾಸವಿದ್ದರೆ ಅದನ್ನು ಮೊದಲು ಸರಿ ಮಾಡಿಸಿಕೊಳ್ಳಿ,ನಿಮಗೆ ಆನ್ಲೈನ್ ನಲ್ಲಿ ಜಾಯಿಂಟ್ ಡಿಕ್ಲೆರೇಷನ್ ಫಾರಂ ಸಿಗುತ್ತದೆ,

ಅದನ್ನು ತೆಗೆದುಕೊಂಡು ನಿಮ್ಮ ಯಾವ ಮಾಹಿತಿ ತಪ್ಪಿದೆಯೆಂದು ನಮೂದಿಸಿ ಅದಕ್ಕೆ ಸರಿಯಾದ ದಾಖಲೆಗನ್ನು ಹೊಂದಿಸಿ ನಿಮ್ಮ ಪಿ ಎಫ್ ಆಫೀಸಿನಲ್ಲಿ ಕೊಟ್ಟು ಬನ್ನಿ,ನಂತರದ ಇಪ್ಪತ್ತು ದಿನಗಳಲ್ಲಿ ಮತ್ತೆ UAN ವೆಬ್ಸೈಟ್ ನಲ್ಲಿ ಲಾಗಿನ್ ಆಗಿ ನಿಮ್ಮ ಮಾಹಿತಿ ಬದಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ,

೪) ಪಿ ಎಫ್ ಫಾರಂ ಅನ್ನು ಫಿಲ್ ಮಾಡಿ

ನಿಮಗೆ ಆನ್ಲೈನ್ ನಲ್ಲಿ ಅಥವಾ ಪಿ ಎಫ್ ಆಫೀಸಿನಲ್ಲಿ ಫಾರಂ 19 ಹಾಗು ಫಾರಂ 10C ಎಂಬುದು ಸಿಗುತ್ತದೆ,ಅದನ್ನು ತೆಗೆದುಕೊಂಡು ಭರ್ತಿಮಾಡಿದ ನಂತರ ಅದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳನ್ನು ಸೇರಿಸಿ

ನೀವು ಕೆಲಸ ಮಾಡುತ್ತಿದ್ದ ಆಫೀಸಿಗೆ ಹೋಗಿ ಅವರ ಬಳಿ ಸೀಲ್ ಹಾಗು ಸಹಿಯನ್ನು ಹಾಕಿಸಿಕೊಂಡು ನಿಮಗೆ ಬರುವ ಪಿ ಎಫ್ ಆಫೀಸಿಗೆ ಹೋಗಿ ನಿಮ್ಮ ಅರ್ಜಿಯನ್ನು ಸಲ್ಲಿಸಿ ಬನ್ನಿ, ನಿಮ್ಮ ಎಲ್ಲ ಮಾಹಿತಿಗಳು ಸರಿಯಿದ್ದರೆ 10 ರಿಂದ 15 ದಿನಗಳ ಒಳಗೆ ನಿಮಗೆ ನಿಮ್ಮ ಹಣ ಬ್ಯಾಂಕ್ ನಲ್ಲಿ ಜಮೆಯಾಗಿರುತ್ತದೆ

LEAVE A REPLY

Please enter your comment!
Please enter your name here