ಅಂಬಾನಿ ಸಮೂಹದ ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಪ್ರವೇಶ ಮಾಡಿದ್ದೆ ತಡ  ಟೆಲಿಕಾಂ ಕಂಪನಿಗಳ ಸ್ಪರ್ಧೆ ವೇಗ ಪಡೆದಿದೆ.ಟೆಲಿಕಾಂ ಕಂಪನಿಗಳ ಡೇಟಾ ಯುದ್ಧದಲ್ಲಿ ಗ್ರಾಹಕರು ಲಾಭ ಪಡೆಯುತ್ತಿದ್ದಾರೆ.ಗ್ರಾಹಕರನ್ನು ತನ್ನತ್ತ ಸೆಳೆಯಲು ಈ ಕಂಪನಿ ಹೊಸ ಯೋಜನೆಯೊಂದನ್ನು ಶುರು ಮಾಡಿದೆ. ಯಾವುದು ಆ ಕಂಪನಿ ಏನದು ಪ್ಲಾನ್ ಓದಿ ಮುಂದೆ…

ಏರ್ ಸೆಲ್ ಕಂಪನಿ ತನ್ನ ಗ್ರಾಹಕರಿಗಾಗಿ ಏರ್ಸೆಲ್ ಈ ಯೋಜನೆ ಶುರು ಮಾಡಿದೆ.ಒಂದು ವರ್ಷ ವ್ಯಾಲಿಡಿಟಿಯ ಯೋಜನೆ ಇದಾಗಿದೆ.ಈ ಪ್ಯಾಕ್ ಬೆಲೆ 104 ರೂಪಾಯಿ.

ಈ ಯೋಜನೆಯಡಿ ಏರ್ಸೆಲ್ ಗ್ರಾಹಕರಿಗೆ ಪ್ರತಿ ನಿಮಿಷಕ್ಕೆ 20 ಪೈಸೆಯಂತೆ ಲೋಕಲ್ ಹಾಗೂ ಎಸ್ ಟಿ ಡಿ ಕರೆ ನೀಡ್ತಿದೆ.ಹಾಗೆ ಕಂಪನಿ ಪ್ರೀಪೇಯ್ಡ್ ಬಳಕೆದಾರರಿಗೆ ಇನ್ನೂ ಎರಡು ಹೊಸ ಯೋಜನೆಯನ್ನು ಪರಿಚಯಿಸಿದೆ.

ಒಂದು ಪ್ಲಾನ್ 88 ರೂಪಾಯಿಯದ್ದಾಗಿದೆ.ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 1ಜಿಬಿ ಡೇಟಾ,ಅನಿಯಮಿತ ಕರೆ ಸಿಗಲಿದೆ.ಇದರ ವ್ಯಾಲಿಡಿಟಿ 7 ದಿನ.ಎರಡನೇ ಪ್ಲಾನ್ ಬೆಲೆ 199 ರೂಪಾಯಿಯಾಗಿದೆ.ಅನಿಯಮಿತ ಕಾಲ್ ಜೊತೆ 1 ಜಿಬಿ ಡೇಟಾ ಸಿಗಲಿದ್ದು,ಇದರ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ.

LEAVE A REPLY

Please enter your comment!
Please enter your name here