ನಿನ್ನೆ ದಿನ ಆ ಐದು ಕೋಟಿ ಬೆಲೆ ಬಾಳುವ ಕಾರಿನ ಮಾಲೀಕ ಖುಷಿ ಖುಷಿ ಇಂದ ಕೋರ್ಟ್ ಕಡೆ ಬಂದು ಕಾರನ್ನು ಕೋರ್ಟ್ ಹೊರಗಡೆ ಪಾರ್ಕ್ ಮಾಡಿ ಕೆಲಸಕ್ಕೆಂದು ಒಳಗೆ ಹೋಗಿದ್ದ. ವಾಪಸ್ ಬಂದು ನೋಡಿದರೆ ಅವನ ಫೆರಾರಿ ಕಾರು ತುಂಡು ತುಂಡಾಗಿ ಬಿದ್ದಿತ್ತು,ಹೇಗಾಗಿರಬೇಡ ಆ ಮಾಲಿಕನಿಗೆ.

ಎಲ್ಲಿ ಗೊತ್ತೇ ಘಟನೆ:

ಅಂದಹಾಗೆ ಈ ಘಟನೆ ನಡೆದಿರುವುದು ಇಂಗ್ಲೆಂಡಿನ ಡಾರ್ಟ್‌ಫೋರ್ಡ್‌ನಲ್ಲಿ. ಕಾರು ಮಾಲೀಕನಾದ ಬಿಲೇನಿಯರ್ ಝಹೀದ್ ಖಾನ್ ಎಂಬಾತ ಕೋರ್ಟ್‌ಗೆ ಸಂಬಂಧಿತ ಕೆಲಸಕ್ಕಾಗಿ ಬಂದಿದ್ದ. ಈ ವೇಳೆ ಕಾನೂನು ಬಾಹಿರವಾಗಿ ಕೋರ್ಟ್ ಆವರಣದಲ್ಲೇ ಪಾರ್ಕಿಂಗ್ ಮಾಡಿದ್ದನಂತೆ.

ಐದು ಕೋಟಿ ಕಾರು ತುಂಡು ತುಂಡು:

ಕಾರು ಪಾರ್ಕ್ ಮಾಡಿ ಹೋದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಪೊಲೀಸರು. ವೈಟ್ ಪರ್ಲ್ ಬಣ್ಣದ ಫೆರಾರಿ 458 ಸ್ಪೈಡರ್ ಕಾರನ್ನು ಎತ್ತಾಕೊಂಡು ಹೋಗಿದ್ದಲ್ಲೇ ಕಾರಿಗೆ ಸಂಬಂಧಿತ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಈ ವೇಳೆ ಕಾರಿಗೆ ಸಂಬಂಧಿತ ದಾಖಲೆಗಳು ಸರಿ ಇಲ್ಲದ ಹಿನ್ನೆಲೆ ಈ ಕಾರನ್ನು ಯಾರೋ ಕದ್ದು ಇಲ್ಲಿ ಬಿಟ್ಟು ಹೋಗಿರಬಹುದೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಿದ್ದಾರೆ. ಈ ವೇಳೆ ಫೆರಾರಿ ಕಾರು ಕೂಡಾ ಕೆಲ ಕಡೆ ಅಪಘಾತ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕೂಡಾ ಪತ್ತೆಯಾಗಿದೆ.

ಪೋಲೀಸರ ಅವಸರ:

ಹೀಗಿದ್ದಾಗ ಕಾರಿನ ವಿಮೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈ ಕಾರಿಗೆ ವಿಮೆಯೂ ಇಲ್ಲದಿರುವುದನ್ನು ಕಂಡು ಒಂದು ತೀರ್ಮಾನ ಬಂದೇ ಬಿಟ್ರು. ಸಿದಾ ಗುಜುರಿ ಸೇಂಟರ್‌ಗೆ ತೆಗೆದುಕೊಂಡು ಹೋಗಿ 4 ಕೋಟಿ ರೂಪಾಯಿ ಮೌಲ್ಯದ ಫೆರಾರಿ ಕಾರನ್ನು ಜೆಸಿಬಿ ಮೂಲಕ ಸ್ಕ್ರ್ಯಾಪ್ ಮಾಡಿದ್ದಾರೆ.

ಮಾಲೀಕ ಕಂಗಾಲು:

ಈ ವೇಳೆಗಾಗಲೇ ಕೋರ್ಟ್‌ನಿಂದ ಹೊರಬಂದ ಕಾರು ಮಾಲೀಕ ಝಹೀದ್ ಖಾನ್‌ಗೆ ಫುಲ್ ಶಾಕ್. ಯಾಕೆಂದ್ರೆ ಕೆಲ ಗಂಟೆಗಳ ಹಿಂದಯಷ್ಟೇ ಪಾರ್ಕ್ ಮಾಡಿ ಹೋಗಿದ್ದ ಝಹೀದ್ ಖಾನ್‌ ಕಾರು ಗುಜುರಿ ಸೇಂಟರ್ ಪೀಸ್ ಪೀಸ್ ಆಗಿರುವುದನ್ನು ಕಂಡು ಕಂಗಾಲಾಗಿದ್ದಾನೆ.

ಪೋಲೀಸರ ಖಡಕ್ ಉತ್ತರ:

ಯಾಕೆ ಸರ್, ನನ್ನ ಸೂಪರ್ ಕಾರ್ ಅನ್ನು ಹೀಗ್ಯಾಕೆ ಮಾಡಿದ್ದೀರಿ ಅಂತಾ ಕೇಳಿದಾಗ ಪೊಲೀಸರು ಖಡರ್ ಉತ್ತರವನ್ನೇ ನೀಡಿದ್ದಾರೆ. ನಿಮ್ಮ ಕಾರು ಅಪಘಾತ ಪ್ರಕರಣಗಳಲ್ಲಿ ಸಿಲುಕಿದೆ. ಜೊತೆಗೆ ನಿಮ್ಮ ಕಾರಿಗೆ ವಿಮೆ ಇಲ್ಲಾ. ಹೀಗಾಗಿ ನಿಮ್ಮ ಕಾರು ರಸ್ತೆ ಮೇಲೆ ಓಡಾಡಲು ಯೋಗ್ಯವಲ್ಲ. ಅದಕ್ಕೆ ಜೆಸಿಬಿ ಮೂಲಕ ಸ್ಕ್ರ್ಯಾಪ್ ಮಾಡಲಾಗಿದೆ ಎಂದಿದ್ದಾರೆ.

ಆದ್ರೆ ಝಹೀರ್ ಖಾನ್ ಇದನ್ನು ಒಪ್ಪುತ್ತಿಲ್ಲ. ನಾನು ಕಾರಿನ ವಿಮೆ ಹೊಂದಿದ್ದೆ. ಅಷ್ಟರಲ್ಲೇ ಪೊಲೀಸರು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದಕ್ಕೆ ಇಷ್ಟೇಲ್ಲಾ ಮಾಡಿದ್ದಾರೆ ಅಂತಾ ಅವಲತ್ತುಕೊಂಡಿದ್ದಾರೆ.

ಕಾರಿನ ವಿಶೇಷತೆ:

ಇನ್ನು 5 ಕೋಟಿಗೂ ಅಧಿಕ ಬೆಲೆ ಹೊಂದಿರುವ ಫೆರಾರಿ 458 ಸ್ಪೈಡರ್ ಕಾರುಗಳು ಸೂಪರ್ ಕಾರು ಮಾದರಿಯಲ್ಲೇ ಅತಿ ಜನಪ್ರಿಯತೆ ಹೊಂದಿದ್ದು, 4497ಸಿಸಿ ಸಾಮರ್ಥ್ಯ ವಿ8 ಎಂಜಿನ್‌ನ ಮೂಲಕ ಕೇವಲ 2.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ.

ಸುದ್ದಿ ಕೃಪೆ ಡ್ರೈವ್ ಸ್ಪಾರ್ಕ್ ಕನ್ನಡ

video:

LEAVE A REPLY

Please enter your comment!
Please enter your name here