ಜಿಯೋ ಇಂದ ದೀಪಾವಳಿ ಬಂಪರ್ ಕೊಡುಗೆ ಏನು ಗೊತ್ತೇ?

1
118

ಜಿಯೋ ಬಂದಾಗಿಂದ ತನ್ನ ಗ್ರಾಹಕರಿಗೆ ಅತ್ಯುತ್ತಮ ಆಫರ್ ಗಳನ್ನೂ ನೀಡುತ್ತಲೇ ಬರುತ್ತಿದೆ ಆದರೆ ಈ ಆಫರ್ ಮಾತ್ರ ದೀಪಾವಳಿಗೆ ಬಂಪರ್ ಎಂದು ಹೇಳಲಾಗುತ್ತಿದೆ. ನೋಡಿ ರಿಲಯನ್ಸ್ ಜಿಯೋ ಗ್ರಾಹಕರಿಗೆ ನೀಡುತ್ತಿರುವ ದೀಪಾವಳಿ ಕೊಡುಗೆ ಏನಿದೆ ಅಂತ…

ಜಿಯೋ ಧನ್ ಧನಾ ಧನ್ ಪ್ಲ್ಯಾನ್ ಅಡಿಯಲ್ಲಿ ರೂ. 399 ನೀವು ರಿಚಾರ್ಚ್ ಮಾಡಿಸಿಕೊಂಡರೆ ಶೇ.100ರಷ್ಟು ಕ್ಯಾಶ್ ಬ್ಯಾಕ್ ಪಡೆಯಲಿದ್ದೀರಿ.

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ತನ್ನ 10 ಲಕ್ಷ ಗ್ರಾಹಕರಿಗೆ ಈ ಕೊಡುಗೆ ನೀಡುತ್ತಿದ್ದು ಯೋಜನೆ ಅ.12 ರಿಂದ 18ರ ವರೆಗೆ ಲಭ್ಯವಿದೆ. ಈ ಯೋಜನೆ ಸೇರ ಬಯಸುವವರು ಆನ್ ಲೈನ್ ಇಲ್ಲವೇ ಆಫ್ ಲೈನ್ ಮೂಲಕ ರಿಚಾರ್ಜ್ ಮಾಡಿಸಿಕೊಳ್ಳಬಹುದು.

ಜಿಯೋ ಸಿಮ್ ಉಪಯೋಗಿಸುವವರು 399 ರೂ. ರಿಚಾರ್ಜ್ ಮಾಡಿಸಿದಾಗ ಅವರಿಗೆ 50 ರೂ. ಬೆಲೆಯ  8 ಓಚರ್ ಗಳನ್ನು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ  91, 309 ರೂ. ಅಥವಾ ಹೆಚ್ಚಿನ ರಿಚಾರ್ಜ್ ಮಾಡಿಸಿದಿರೆ, ಈ ಗಿಫ್ಟ್ ಓಚರ್ ಗಳನ್ನು  ಬಳಸಿಕೊಳ್ಳಬಹುದು.

1 COMMENT

LEAVE A REPLY

Please enter your comment!
Please enter your name here