ಭಾರತದ ಮೊಬೈಲ್ ಕಂಪನಿ ಕಾರ್ಬನ್ ಜೊತೆ ಒಪ್ಪಂದ ಮಾಡಿಕೊಂಡಿರುವ ಭಾರತದ ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್ ಟೆಲ್ ಎರಡು ಹೊಸ 4ಜಿ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.

ಇದರ ಹೆಸರು ಎ 1 ಇಂಡಿಯನ್ ಮೊಬೈಲ್ ಇದರ ಎಂ ಆರ್ ಪಿ ಬೆಲೆ 4390 ರೂಪಾಯಿಯಾಗಿದ್ದು,ಮಾರುವ ಬೆಲೆ 1,799 ರೂಪಾಯಿಯಾಗಿದೆ.ಎ41 ಪವರ್ ಮೊಬೈಲ್ ಎಂ ಆರ್ ಪಿ ಬೆಲೆ 4290 ರೂಪಾಯಿಯಾಗಿದ್ದು, 1849 ರೂಪಾಯಿಗೆ ದೊರೆಯುತ್ತದೆ.ಎರಡೂ ಸ್ಮಾರ್ಟ್ಫೋನ್ ಗೆ 4 ಇಂಚಿನ ಸ್ಕ್ರೀನ್ ನೀಡಲಾಗಿದೆ.

ಎರಡು ಸಿಮ್ ನ ಈ ಎರಡೂ ಮೊಬೈಲ್ 1 ಜಿಬಿ RAM ಹೊಂದಿದೆ. ಈ ಎರಡರಲ್ಲಿ ಯಾವ ಮೊಬೈಲ್ ಖರೀದಿ ಮಾಡಿದ್ರೂ ಗ್ರಾಹಕರು 169 ರೂಪಾಯಿ ರಿಚಾರ್ಜ್ ಮಾಡಬೇಕಾಗುತ್ತದೆ.

ಇದನ್ನೂ ಓದಿರಿ…

ಮೊಬೈಲ್ ಕಳೆದು ಹೋಯಿತೇ? ಮೊಬೈಲ್ ಡೇಟಾ ಡಿಲೀಟ್ ಮಾಡೋದು ಹೇಗೆ? ಓದಿ ಇದನ್ನು

ಇದ್ರಲ್ಲಿ ಅನಿಯಮಿತ ಕರೆ ಹಾಗೂ 5GB ಡೇಟಾ ಲಭ್ಯವಾಗಲಿದೆ. 28 ದಿನಗಳವರೆಗೆ ಇರಲಿದೆ.ಈ ಎರಡೂ ಸ್ಮಾರ್ಟ್ಫೊನ್ ಅಮೆಜಾನ್ ನಲ್ಲಿ ಲಭ್ಯವಿದೆ.ಮುಂದಿನ ವಾರದಿಂದ ಮೊಬೈಲ್ ಗ್ರಾಹಕರ ಕೈಗೆ ಸಿಗಲಿದೆ.

LEAVE A REPLY

Please enter your comment!
Please enter your name here