ಇಷ್ಟು ದಿನ ಗಾಳಿ ಸುದ್ದಿಯಾಗಿ ಹರಿದಾಡುತ್ತಿದ್ದ ಜಿಯೋ 4G ಲ್ಯಾಪ್ ಟಾಪ್ ಕುರಿತ ಮಾಹಿತಿಗಳು ನಿಖರವಾಗಿದೆ. ಜಿಯೋ 4G ಲ್ಯಾಪ್‌ಟಾಪ್ ನಿರ್ಮಾಣದ ಸಲುವಾಗಿ ಚಿಪ್ ತಯಾರಕ ಕ್ವಾಲ್ಕಮ್ ನೊಂದಿಗೆ ಮಾತುಕತೆಯನ್ನು ನಡೆಸಿದ್ದು ಶೀಘ್ರವೇ ಜಿಯೋ 4G ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿವೆ ಎಂದು ವರದಿಯಾಗಿದೆ.!

ಕಡಿಮೆ ಬೆಲೆಯಲ್ಲಿ ಡೇಟಾ, 4ಜಿ ಫೀಚರ್ ಫೋನ್ ಬಿಡುಗಡೆ ಮಾಡಿದ್ದ ಜಿಯೋ ಈಗ ಕಡಿಮೆ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಸಿಮ್ ಹೊಂದಿರುವ ಲ್ಯಾಪ್ ಟಾಪ್ ಬಿಡುಗಡೆ ಮಾಡಲು ಮುಂದಾಗಿದೆ. ಚಿಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಟಿತ ಹಾರ್ಡ್‌ವೇರ್ ಕಂಪನಿ ಕ್ವಾಲ್ಕಾಮ್ ಜೊತೆಯಲ್ಲಿ ಜಿಯೋ ಮಾತುಕತೆ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

ವಿಂಡೋಸ್ 10 ಆಪರೇಟಿಂಗ್ ವ್ಯವಸ್ಥೆ ಇರುವ ಲ್ಯಾಪ್‌ಟಾಪ್‌ಗಳನ್ನು ಪರಿಚಯಸಲು ಜಿಯೋ ಮುಂದಾಗಿದ್ದು, ಈ ಲ್ಯಾಪ್‌ಟಾಪ್ ಸದಾ ಇಂಟರ್‍ನೆಟ್ ಸಂಪರ್ಕದಲ್ಲಿರಲು ಸಿಮ್ ಅಳವಡಿಸುವ ಆಯ್ಕೆಯನ್ನು ನೀಡುತ್ತಿದೆ ಎನ್ನಲಾಗಿದೆ. ಹಾಗಾದರೆ, ಜಿಯೋ ಲ್ಯಾಪ್‌ಟಾಪ್ ಬಗ್ಗೆ ಗ್ಯಾಜೆಟ್ ಪ್ರಪಂಚದಲ್ಲಿ ಹರಿದಾಡುತ್ತಿರುವ ಮಾಹಿತಿಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

50 ಲಕ್ಷ ಲ್ಯಾಪ್ ಟಾಪ್ ಮಾರಾಟ!

ಕೌಂಟರ್ ಪಾಯಿಂಟ್ ಸಂಸ್ಥೆಯ ನೀಡಿದ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 50 ಲಕ್ಷ ಲ್ಯಾಪ್ ಟಾಪ್ ಗಳು ಮಾರಾಟವಾಗುತ್ತಿವೆ. ಕಚೇರಿ, ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿರುವ ವೈಫೈ ಹಾಟ್‌ಸ್ಪಾಟ್ ಗಳು ಕನೆಕ್ಟ್ ಆಗುತ್ತದೆ. ಈಗೆಲ್ಲಾ ಸ್ಮಾರ್ಟ್‌ಫೋನ್ ಮೂಲಕವೇ ಲ್ಯಾಪ್‌ಟಾಪ್ ಡೇಟಾ ಸಂಪರ್ಕಕ್ಕೆ ಒಳಗಾಗುತ್ತಿವೆ.

ಲ್ಯಾಪ್‌ಟಾಪ್‌ಗೆ ಸಿಮ್ ಯಾಕೆ?

ಲ್ಯಾಪ್‌ಟಾಪ್‌ಗೆ ವೈಫೈ ಸಂಪರ್ಕ ಸಿಗದ ಕಡೆ ಇಂಟರ್ ನೆಟ್ ಪಡೆಯಬೇಕಾದರೆ ಮೊಬೈಲ್ ಮೂಲಕ ಹಾಟ್ ಸ್ಪಾಟ್ ಓಪನ್ ಮಾಡಿ ವೈಫೈ ಸಂಪರ್ಕ ಕಲ್ಪಿಸಬೇಕಾಗುತ್ತದೆ. ಹಾಗಾಗಿ, ಈ ಸಮಸ್ಯೆಗೆ ಪರಿಹಾರ ಎಂಬಂತೆ ಲ್ಯಾಪ್ ಟಾಪ್ ನಲ್ಲೇ ಸಿಮ್ ಅಳವಡಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಜಿಯೋ ಕೂಡ ಮನಸ್ಸು ಮಾಡಿದೆ.

ವಿಂಡೋಸ್ 10 ಕಾರ್ಯಚರಣೆ!

ಜಿಯೋ ತನ್ನ ನೂತನ 4G ಲ್ಯಾಪ್‌ಟಾಪ್‌ ಅನ್ನು ಮಾರುಕಟ್ಟೆಗೆ ತರುತ್ತಿದ್ದು, ಈ ಲ್ಯಾಪ್‌ಟಾಪ್ ವಿಂಡೋಸ್ 10 ಮೂಲಕ ಕಾರ್ಯನಿರ್ವಹಣೆ ನೀಡಲಿದೆ ಎನ್ನಲಾಗಿದೆ. ಜಿಯೋ ತನ್ನ 4G ಲ್ಯಾಪ್‌ಟಾಪ್‌ನಲ್ಲಿ 4G ಕನೆಕ್ಟಿವಿಯನ್ನು ಪಡೆಯುವ ಸಲುವಾಗಿ ಕ್ವಾಲ್ಕಮ್ ಕಂಪೆನಿಯ ಜೊತೆಗೆ ಪ್ರೊಸೆಸರ್‌ಗಾಗಿ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.

1TB ಹಾರ್ಡ್‌ ಡಿಸ್ಕ್!

ಈಗಿನ ಲ್ಯಾಪ್‌ಟಾಪ್ ಮಾರುಕಟ್ಟೆಯ ಟ್ರೆಂಡ್‌ನಂತೆ ಜಿಯೋ ಲ್ಯಾಪ್‌ಟಾಪ್‌ನಲ್ಲಿ 1TD ಹಾರ್ಡ್‌ ಡಿಸ್ಕ್ ಇದರಲ್ಲಿದೆಯಂತೆ. ಪ್ರಮುಖ ಇಂಗ್ಲೀಷ್ ಗ್ಯಾಜೆಟ್ ವೆಬ್‌ಸೈಟ್‌ಗಳಲ್ಲಿ ವರದಿ ಮಾಡಿರುವಂತೆ, ಜಿಯೋ 4G ಲ್ಯಾಪ್‌ಟಾಪ್‌ನಲ್ಲಿ 1 TB ಹಾರ್ಡ್‌ಡಿಸ್ಕ್ ಮತ್ತು 46 GB RAM ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿವೆ.

4G ಸಿಮ್ ಸ್ಲಾಟ್!!

ಈಗಾಗಲೇ ದೊರೆತಿರುವ ಮಾಹಿತಿಯಂತೆ ಜಿಯೋ ಬಿಡುಗಡೆ ಮಾಡಲಿರುವ 4G ಲ್ಯಾಪ್‌ಟಾಪ್‌ನಲ್ಲಿ 4G ಸಿಮ್ ಹಾಕುವ ಸ್ಲಾಟ್ ಒಂದನ್ನು ನೀಡಿದೆ. ಈ ಸ್ಲಾಟ್‌ನಲ್ಲಿ ಜಿಯೋ ಹೊರತಾದ ಸಿಮ್ ಹಾಕಬಹುದಾದ ಆಯ್ಕೆ ಇರುತ್ತದೆಯೋ ಅಥವಾ ಕೇವಲ ಜಿಯೋ ಸಿಮ್ ಮಾತ್ರ ಹಾಕಬಹುದೋ ಎಂಬ ಮಾಹಿತಿ ಈವರೆಗೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಬೆಲೆ ಕೂಡ ಕಡಿಮೆ!

ಜಿಯೋ 4G ಫೀಚರ್ ಫೋನ್ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ತರುವ ಸಲುವಾಗಿ ಜಿಯೋ 4G ಲ್ಯಾಪ್‌ಟಾಪ್ ಬೆಲೆಯೂ ತೀರಾ ಕಡಿಮೆ ಇರಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಮೂಲಗಳ ಪ್ರಕಾರ ಮಧ್ಯಮ ಬಜೆಟ್ ಲ್ಯಾಪ್‌ಟಾಪ್ ಬೆಲೆಯಲ್ಲಿ, ಅಂದರೆ ರೂ.10000 ರಿಂದ 12000ಕ್ಕೆ ಜಿಯೋ ಲ್ಯಾಪ್‌ಟಾಪ್ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಕೃಪೆ GIZBOT.COM

LEAVE A REPLY

Please enter your comment!
Please enter your name here