ಹೆಚ್ಚಾಗಿ ಯುವಕರಿಗೆ ದುಬಾರಿ ಕಾರುಗಳಾದ ಲ್ಯಾಂಬೋರ್ಗಿನಿ ಫೆರಾರಿ ಪೋರ್ಶೆಗಳಂತ ಕಾರುಗಳು ಅಂದ್ರೆ ಹೆಚ್ಚು ಕ್ರೇಜ್. ಅದರಲ್ಲೂ ರಸ್ತೆಗಳಲ್ಲಿ ಕಂಡರೆ ಹಿಂಬಾಲಿಸುವುದು ಅಭ್ಯಾಸ, ಭಾರತದಲ್ಲಂತೂ ಇತ್ತೀಚಿಗೆ ಈ ದುಬಾರಿ ಕಾರುಗಳ ಬಗ್ಗೆ ಉತ್ಸಾಹ ತುಂಬಾ ಹೆಚ್ಚಾಗಿ ಹೋಗಿದೆ.

ವರ್ಷದಿಂದ ವರ್ಷಕ್ಕೆ ದುಬಾರಿ ಕಾರುಗಳು ಭಾರತದ ರಸ್ತೆಗಳಲ್ಲಿ ಸಾಮಾನ್ಯಾ ಆಗುತ್ತಿದ್ದು ಇದು ದೇಶದ ಬೆಳವಣಿಗೆಗೂ ತುಂಬಾ ಸಹಯಾಕಾರಿ ಆಗಲಿದೆ.

ಆದರೆ ಇದೀಗ ಬೆಂಗಳೂರಿನಲ್ಲಿ ಅದೇ ತರಹದ ಘಟನೆಯೊಂದು ನಡೆದಿದೆ, ಈ ಘಟನೆಯನ್ನು ಕೇಳಿದರೆ ನೀವು ಒಂದು ಕ್ಷಣ ದಂಗಾಗುದಂತೂ ಸತ್ಯ.

ಅಂದ ಹಾಗೆ ಈ ಘಟನೆಯ ಸಂಪೂರ್ಣ ವಿಡಿಯೋ ಯುವಕರ ಕ್ಯಾಮೆರಾ ಅಲ್ಲಿ ಸೆರೆಯಾಗಿದೆ ಅದರ ವಿಡಿಯೋ ಕೆಳಗಡೆ ಇದೆ ಮರೆಯದೆ ವಿಡಿಯೋ ನೋಡಿ ಕೆಳಗಡೆ.

ಏನದು ಘಟನೆ?:

ಕೆಲ ತಿಂಗಳುಗಳ ಹಿಂದೆ ನಮ್ಮ ಬೆಂಗಳೂರಿನ ಖ್ಯಾತ ಉದ್ಯಮಿಯೊಬ್ಬ ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ, ಅಂದ ಹಾಗೆ ಇದು ಭಾರತದಲ್ಲೇ ಮೊಟ್ಟ ಮೊದಲ ಕಾರ್.

ಈ ಕಾರು ಇಡೀ ನಮ್ಮ ಭಾರತ ದೇಶದಲ್ಲೇ ಬೆಂಗಳೂರಿನಲ್ಲಿ ಮಾತ್ರ ಇದೆ ಮತ್ತು ಇದು ಪ್ರಪಂಚದ ಅತ್ಯಂತ ವೇಗವಾದ ಕಾರುಗಳಲ್ಲಿ ಒಂದಾಗಿದೆ.

ಯಾವ ಕಾರ್ ಅದು?:

ಈ ಕಾರಿನ ಹೆಸರು ‘ಲ್ಯಾಂಬೋರ್ಗಿನಿ ಅವೆಂಟಡಾರ್ ಎಸ್ ವಿ ರೋಡ್ ಸ್ಟರ್’ ಎಂದು.
ಇದು ಪ್ರತಿಷ್ಠಿತ ಕಂಪನಿ ಲ್ಯಾಂಬೋರ್ಗಿನಿಯ ಹೊಸ ಮಾಡೆಲ್ ಆಗಿದ್ದು ಭಾರತದಲ್ಲೇ ಮೊದಲು ಖರೀದಿಸಿದ್ದು ಬೆಂಗಳೂರಿನ ಈ ಉದ್ಯಮಿ.

ಅಂದ ಹಾಗೆ ಈ ಕಾರು ಬಲಿಷ್ಠ ಎಂಜಿನ್ ಹೊಂದಿದ್ದು ಗಂಟೆಗೆ ಇನ್ನೂರಾ ಐವತ್ತು ಕಿಲೋಮೀಟರ್ ಗಿಂತಲೂ ವೇಗವಾಗಿ ಚಲಿಸುತ್ತದೆ.

ಯಾರು ಆ ಉದ್ಯಮಿ?:

ಕೆ.ವಿ ಪ್ರಸಾದ್ ಎಂಬ ಬೆಂಗಳೂರಿನ ಉದ್ಯಮಿಯೊಬ್ಬರು ಈ ದುಬಾರಿ ಬೆಲೆಯ ಕಾರನ್ನ ಖರೀದಿಸಿದ್ದಾರೆ. ಬೆಂಗಳೂರಿನ ಹೃದಯ ಭಾಗಲ್ಲಿ ನೆಲೆಸಿರು ಅವರು ಕಾರು ಪ್ರಿಯರಾಗಿದ್ದು ಅವರ ಬಳಿ ಇನ್ನು ಅನೇಕ ದುಬಾರಿ ಬೆಲೆಯ ಕಾರುಗಳೂ ಸಹ ಇವೆ.

ಕಾರಿನ ಬೆಲೆ ಎಷ್ಟು?:

ಈ ಕಾರಿನ ಮೂಲ ಬೆಲೆಯು ಬರೊಬ್ಬರಿ 5 ಕೋಟಿ ರೂಪಾಯಿಗಳು ಆದರೆ ಭಾರತದಲ್ಲಿ ಇದಕ್ಕೆ ಹೆಚ್ಚಿಗೆ ಹಣ ನೀಡಬೇಕಾಗುತ್ತದೆ ಯಾಕೆಂದರೆ ಭಾರತದಲ್ಲಿ ತೆರಿಗೆ ಹಣ ಜಾಸ್ತಿ ಕಟ್ಟಬೇಕಾಗಿರುವದರಿಂದ ಜನರ ಕೈಗೆ ಈ ಕಾರು ಸೇರಲು ಅಂದಾಜು ಎಂಟರಿಂದ ಹತ್ತು ಕೋಟಿ ಹಣ ಕೊಡಬೇಕಾಗುತ್ತದೆ.

ಹಿಂಬಾಲಿಸಿದ ಯುವಕರಿಗೆ ಮಾಲಿಕ ಏನ್ ಮಾಡಿದ್ರು?:

ಕೆಲ ತಿಂಗಳುಗಳ ಹಿಂದೆ ಹೊಸದಾಗಿ ಈ ಕಾರು ನಮ್ಮ ಬೆಂಗಳೂರಿಗೆ ಬಂದಾಗ ಈ ಉದ್ಯಮಿ ಕಾರನ್ನು ಕೆಲ ಕಾರು ಪ್ರಿಯರು ಬೈಕಿನಲ್ಲಿ ಚೇಸ್ ಮಾಡತೊಡಗಿದರು,ಇದನ್ನು ಗಮನಿಸಿದ ಆ ಕಾರಿನ ಮಾಲೀಕರು ಏನ್ ಮಾಡಿದ್ರು ಗೊತ್ತಾ ನೋಡಿ ಆಶ್ಚರ್ಯ ಪಡ್ತಿರಾ!

ಬೈಕಿನಲ್ಲಿ ಕೆಲ ಯುವಕರು ತಮ್ಮ ಕಾರಿನ ಹಿಂದೆ ಬರುವುದನ್ನು ಅರಿತ ಆ ಉದ್ಯಮಿ ವೇಗವಾಗಿ ತಮ್ಮ ಕಾರನ್ನು ಸೀದಾ ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ, ಇಲ್ಲಿಂದ ಮುಂದೆ ಆ ಕಾರಿನ ಮಾಲೀಕ ಏನು ಮಾಡಿದರು ಅನ್ನೋದೇ ಮುಖ್ಯ ಸುದ್ದಿ. ಮುಂದೆ ನೋಡಿ

ಮುಂದೆ?:

ಮನೆ ತನಕ ಹಿಂಬಾಲಿಸಿದ ಯುವಕರ ಗುಂಪನ್ನು ಮನೆಯ ಒಳಗಡೆ ಕರೆದ ಈ ಮಾಲಿಕ ತಮ್ಮ ದುಬಾರಿ ಬೆಲೆಯ ಕಾರನ್ನು ಆ ಯುವಕರಿಗೆ ತೋರಿಸಿ ಅದರ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.

ಆಶ್ಚರ್ಯ ಆಯಿತಾ? ಆಶ್ಚರ್ಯ ಅನಿಸಿದರೂ ಇದು ಸತ್ಯ ಮಾಲೀಕ ಯಾವುದೇ ತನ್ನ ಸಿರಿವಂತಿಕೆಯ ಬುದ್ದಿ ತೋರಿಸದೆ ಸಾಮಾನ್ಯನ ತರ ಆ ಯುವಕರನ್ನು ಒಳಗಡೆ ಕರೆದು ತಮ್ಮ ಕಾರುಗಳ್ಳನು ತೋರಿಸಿದ್ದಾರೆ. ಇದರ ವಿಡಿಯೋ ಕೂಡಾ ಕೆಳಗಡೆ ಇದೆ ನೋಡಿ.

ಈ ಘಟನೆಯನ್ನ ಯುವಕರು ಕ್ಯಾಮರಾ ಅಲ್ಲಿ ಚಿತ್ರಿಕರಿಸಿದ್ದು ಕೆಳಗಡೆ ಇದರ ವಿಡಿಯೋ ಇದೆ ನೋಡಿ:

ಆಶ್ಚರ್ಯ ಅನಿಸಿದರೂ ಇದು ಸತ್ಯ. ಕೋಟ್ಯಾಧಿಪತಿ ಆಗಿದ್ದರೂ ಆ ಯುವಕರನ್ನ ಕರೆದು ಕಾರು ತೋರಿಸಿದ ಈ ವ್ಯಕ್ತಿಯನ್ನ ಮೆಚ್ಚಲೇಬೇಕು. ನಮ್ಮ ಬೆಂಗಳೂರಿಗರೇ ಹಾಗೆ ಸ್ವಾಮಿ ತುಂಬಾ ಒಳ್ಳೆಯ ಸ್ವಭಾವದವರು.

ಬರಿ ಇಷ್ಟೇ ಅಲ್ಲ ಈ ಉದ್ಯಮಿ ಬಳಿ ಅವರ ಮನೆ ತುಂಬೆಲ್ಲ ದುಬಾರಿ ಕಾರುಗಳಿವೆ ,ಈ ಉದ್ಯಮಿ ಬಳಿ ಬರೀ ಇದೊಂದೇ ಅಲ್ಲ ಇನ್ನೂ ದುಬಾರಿ ಬೆಲೆಯ ಕಾರುಗಳಿದ್ದು ಅದರ ಮಾಹಿತಿ ಮತ್ತು ಚಿತ್ರಗಳು ಇಲ್ಲಿವೆ ನೋಡಿ:

1. ಲ್ಯಾಂಬೋರ್ಗಿನಿ ಹುರಾಕೇನ್:

ಇದೂ ಕೂಡಾ ಈ ಉದ್ಯಮಿಯ ಮತ್ತೊಂದು ದುಬಾರಿ ಬೆಲೆಯ ಕಾರು ಇದರ ಹೆಸರು ‘ಹುರಕಾನ್’, ಇದು ಅದೇ ಲಂಬೋರ್ಘಿನಿ ಕಂಪನಿಯ ಮತ್ತೊಂದು ಐಷಾರಾಮಿ ಕಾರು ಹಾಗು ಇದರ ಬೆಲೆ ಬರೋಬ್ಬರಿ ಮೂರುವರೆ ಕೋಟಿಗೂ ಹೆಚ್ಚು.

2. ಲ್ಯಾಂಬೋರ್ಗಿನಿ ಅವೆಂಟಡಾರ್ ಎಸ್:

ಇದು ಈ ಉದ್ಯಮಿಯ  ಅವರ ಮತ್ತೊಂದು ಕಾಸ್ಟ್ಲೀ ಕಾರ್ ಆಗಿದ್ದು ಇದರ ಬೆಲೆ 6 ಕೋಟಿ ರೂಪಾಯಿಗಳು ಮತ್ತು ಈ ಕಾರಿಗೆ ಎರಡೇ ಬಾಗಿಲು ಎರಡೇ ಸೀಟುಗಳು ಇವೆ, ಇದು ಕೂಡಾ ಅತ್ಯಂತ ವೇಗದ ಕಾರುಗಳಲ್ಲಿ ಒಂದು.

ಇನ್ನೊಂದು ಇದರ ವಿಶೇಷತೆ ಅಂದರೆ ಇದು ಕೂಡಾ ಇಡೀ ಭಾರತದ್ಲಲಿ ಒಂದೇ ಇದೆ ಅದು ಇವರ ಬಳಿಯೇ ಇರುವುದು ಇವರ ಹೆಮ್ಮೆಯ ವಿಷಯ.

ಪೋರ್ಶೇ:

ಪೋರ್ಷೆ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಜರ್ಮನ್ ದೇಶದ ಈ ಲಕ್ಸುರಿ ಸ್ಪೋರ್ಟ್ಸ್ ಕಾರು ತುಂಬಾ ವೇಗದ ಕಾರು ಹಾಗು ದುಬಾರಿ ಸಹ.

ಈ ಉದ್ಯಮಿ ಬಳಿ 5 ಕ್ಕೂ ಹೆಚ್ಚು ಪೋರ್ಶೇ ಕಾರುಗಳಿದ್ದು ಮೊದಲು ಬೆಂಗಳೂರಿಗೆ ಈ ಕಾರನ್ನು ತಂದಿರುವ ಹೆಗ್ಗಳಿಕೆ ಇವರಿಗಿದೆ.

ದುಬಾರಿ ಬೆಂಜ್ ಕಾರು:

ಅಬ್ಬಾ ಈ ವಿಷಯವನ್ನು ನಾವು ಮರೆಯದೆ ತಿಳಿಸಲೆಬೇಕು ಯಾಕಂದರೆ ಇವರ ಬಳಿ ಇನ್ನೊಂದು ಕಾರು ಇದೆ ಅದರ ಹೆಸರು amg gtr ಅಂತ ಇದು ಪ್ರತಿಷ್ಠಿತ ಬೆಂಜ್ ಕಂಪನಿಯ ಹೊಚ್ಚ ಹೊಸ ಕಾರು ಕಳೆದ ತಿಂಗಳಲ್ಲೇ ಬಿಡುಗಡೆ ಆಗಿದ್ದು ಈಗ ಇದು ಈ ಉದ್ಯಮಿಯ ಬಳಿ ಇದೆ.

ಇಡೀ ಭಾರತದಲ್ಲೇ ಈ ಕಾರುಗಳು ಎರಡೇ ಇದ್ದು ಈ ಎರಡು ಕಾರುಗಳು ಕೂಡಾ ನಮ್ಮ ಬೆಂಗಳೂರಿನ ಪಾಲಾಗಿವೆ, ಇದು ಎರಡು ಆಸನ ಹೊಂದಿದ್ದು ಬೆಂಜ್ ಕಂಪನಿಯ ವೇಗದ ಸ್ಪೋರ್ಟ್ಸ್ ಕಾರು ಎಂದು ಹೇಳಲಾಗಿದೆ.

ಹೆಚ್ಚಾಗಿ ಶ್ರೀಮಂತರು ಸಾಮಾನ್ಯ ಜನರೊಡನೆ ಬೆರೆಯುವುದೇ ಕಡಿಮೆ ಇರುವ ಈ ಕಾರನ್ನ ಈ ಕೋಟ್ಯಾಧಿಪತಿಯ ಸರಳತೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಶ್ರೀಮಂತರು ಜನಸಾಮಾನ್ಯನ ಜೊತೆ ಬೇರೆಯಾದ ಕಾಲವಿದು ಅಂತದ್ರಲ್ಲಿ ತಮ್ಮ ಮನೆಗೆ ಹೋಗಿ ಕಾರುಗಳ ಬಗ್ಗೆ ಮಾಹಿತಿ ಕೊಟ್ಟ ಈ ಉದ್ಯಮಿಯನ್ನ ನಾವು ಮೆಚ್ಚಲೇಬೇಕು.

ವಿಡಿಯೋ ನೋಡಿ:

ವಿಡಿಯೋ ಕೃಪೆ: ಸೂಪರ್ ಕಾರ್ಸ್ ಇನ್ ಬೆಂಗಳೂರು (ಯೌಟ್ಯೂಬ್)

videoby: supercars in bengaluru

LEAVE A REPLY

Please enter your comment!
Please enter your name here