ಬೆಂಗಳೂರಿನಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿದೆ ಅಷ್ಟೆ.ತುಮಕೂರಿನ ಬಗ್ಗೆ ನಿಮಗೆಷ್ಟು ಗೊತ್ತು? ಬನ್ನಿ ತಿಳಿಯೋಣ…

“ತುಮಕೂರು” ಈ ಹೆಸರು ಹೇಗೆ ಬಂತು ಎಂದು ಯಾರಿಗಾದರೂ ಗೊತ್ತೇ ?

ಹಿಂದಿನ ಕಾಲದಲ್ಲಿ ‘ತುಂಬೆ ಊರು’ ಎಂದು ಕರೆಯುತ್ತಿದ್ದರು.ಆ ಊರಿನ ತುಂಬೆಲ್ಲಾ ತುಂಬೆ ಹೂವಿನ ಗಿಡಗಳು ಇದ್ದವು ಮತ್ತು ತಮಟೆವಾದ್ಯದ ಘೋಷ್ಠಿ ಎಲ್ಲರಿಗೂ ಚಿರಪರಿಚಿತವಾಗಿತ್ತು ಆದ್ದರಿಂದ ತುಮಕೂರು ಎಂದು ಹೆಸರುಬಂತು.

ತುಮಕೂರನ್ನು “ ಕಲ್ಪತರು ನಾಡು”ಎಂದು ಕರೆಯುತ್ತಾರೆ ಏಕೆಂದರೆ ಈ ಜಿಲ್ಲೆಯಲ್ಲಿ ತೆಂಗಿನ ಮರಗಳು ಜಾಸ್ತಿ ಇವೆ ಮತ್ತು ರೈತರೂ ಕೂಡ ಅಧಿಕವಾಗಿ ತೆಂಗಿನ ಮರವನ್ನೇ ಕೃಷಿಗಾಗಿ ಬೆಳೆಯುತ್ತಾರೆ.

ತುಮಕೂರನ್ನು “ಶೈಕ್ಷಣಿಕ ನಾಡು”ಎಂದು ಕೂಡ ಕರೆಯುತ್ತಾರೆ ಏಕೆಂದರೆ ಇಲ್ಲಿನ ಶಿಕ್ಷಣದ ವ್ಯವಸ್ಥೆ ಚೆನ್ನಾಗಿದೆ.ಅಧಿಕ ಶಿಕ್ಷಣ ಸಂಸ್ಥೆಗಳು ಇಲ್ಲಿವೆ.

ಅವು ವಿದ್ಯಾ ವಾಹಿನಿ ಸಂಸ್ಥೆ, ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ, ಸಿದ್ದಾರ್ಥ ಇಂಜಿನೀರಿಂಗ್ ಕಾಲೇಜು.ಸಿದ್ದಗಂಗಾ ಶಿಕ್ಷಣ ಸಂಸ್ಥೆ.ಸಿದ್ದಗಂಗಾ ಇಂಜಿನೀರಿಂಗ್ ಕಾಲೇಜು.ಶ್ರೀದೇವಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ.ಶ್ರೀದೇವಿ ಇಂಜಿನೀರಿಂಗ್ ಕಾಲೇಜು.ಈ ಮೂರು ಸಂಸ್ಥೆಗಳಲ್ಲಿ ಚಿಕ್ಕ ಮಕ್ಕಳು ಶಾಲೆಯಿಂದ ಹಿಡಿದು ಅವರ ವೃತ್ತಿ ಶಿಕ್ಷಣದವರೆಗೂ ಇಲ್ಲಿಯೇ ಓದಬಹುದು,ಎಲ್ಲಾ ಡಿಗ್ರಿ ಕೋರ್ಸ್ ಗಳನ್ನೂ ಒಳಗೊಂಡಿವೆ.

ಎಚ್. ಎಂ. ಸ್. ಐ. ಟಿ.ಇಂಜಿನೀರಿಂಗ್ ವಿದ್ಯಾ ಸಂಸ್ಥೆ ಜಿಲ್ಲೆಯ ನಗರದ ಹೊರಗೆ ಸ್ಥಾಪನೆ ಗೊಂಡಿದೆ.

“ಕೈಗಾರಿಕ ನಗರ” ವೆಂದು ಕೂಡ ಪ್ರಸಿದ್ಧಿಯನ್ನು ಹೊಂದಿದೆ.ಇಲ್ಲಿ 24 ದೊಡ್ಡ ಕಾರ್ಖಾನೆಗಳನ್ನು ಹೊಂದಿದೆ.

ತುಮಕೂರಿನಲ್ಲಿ ಅತೀ ದೊಡ್ಡ (Mega FOOD Park)  ಆಹಾರ ಪಾರ್ಕ್ ಇದು ತುಮಕೂರಿನ ಹೊರ ಹೊಲಯದಲ್ಲಿ ವಸಂತನರಸಾಪುರ ಕೈಗಾರಿಕ ಪ್ರದೇಶದಲ್ಲಿ ಸ್ಥಾಪಿತವಾಗಿದೆ.ಇದನ್ನು ಪ್ರಧಾನಿ ಮೋದಿಯವರು ಬಂದು ಉದ್ಘಾಟನೆ ಮಾಡಿದ್ದರು.ತುಮಕೂರಿನಿಂದ 5 ಕಿಲೋಮೀಟರ್ ದೂರವಿರುವ ಕ್ಯಾತಸಂದ್ರ ದಲ್ಲಿ ಸಿದ್ದಗಂಗಾ ಮಠವಿದೆ ಇಲ್ಲಿ ‘ನಡೆದಾಡುವ ದೇವರು’ಎಂದೇ ಪ್ರಸಿದ್ದರಾಗಿರುವ ಶ್ರೀಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ನೆಲೆ ಇರುವ ಸ್ಥಳ‌.ಇಲ್ಲಿ ಬಡ ಮಕ್ಕಳಿಗೆ ಉಚಿತ ವಸತಿ,ಊಟ, ಶಿಕ್ಷಣವನ್ನು ನೀಡುತ್ತಾರೆ.ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ,ಇದರಲ್ಲಿ ದನಗಳ ಜಾತ್ರೆಯೂ ವಿಶೇಷವಾಗಿದೆ.

ಇಲ್ಲಿ ಮೊದಲಿಗೆ 1025 ರಲ್ಲಿ ‘ ಗಂಗರು’ವಾಸವಾಗಿದ್ದರು ಆಗ ತುಮಕೂರು ಅವರ ಆಳ್ವಿಕೆಯಲ್ಲಿತ್ತು.ಅವರ ನಂತರ ರಾಷ್ಟ್ರಕೂಟರು,ಚಾಲುಕ್ಯರು, ಮತ್ತು ನೊಳಂಬರು ಬಹಳ ವರ್ಷಗಳ ವರೆಗೂ ಆಳ್ವಿಕೆಯನ್ನು ನಡೆಸಿದ್ದರು.17 ನೇ ಶತಮಾನದ ನಂತರ 18 ಮತ್ತು 19 ನೇ ಶತಮಾನದಲ್ಲಿ ಮೈಸೂರಿನ ಒಡೆಯರು ಆಳಿದ್ದರು.ತುಮಕೂರಿನ ಗುಬ್ಬಿ ತಾಲ್ಲೂಕಿನಲ್ಲಿ 610 ಎಕರೆ ಪ್ರದೇಶದಲ್ಲಿ  ಎಚ್.ಎ. ಎಲ್.ಇದೆ ಇಲ್ಲಿ ಹೆಲಿಕಾಪ್ಟರ್ ತರಬೇತಿಯೂ ಇದೆ.

ತುಮಕೂರಿನ ಪಾವಗಡ ದಲ್ಲಿ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ, 790 ಕೋಟಿಯನ್ನು ಖರ್ಚು ಮಾಡಿ 11,000 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ಅತೀ ಹೆಚ್ಚು ತೆಂಗು ಬೆಳೆಯುವ ನಾಡುತುಮಕೂರು.ಅತೀ ಹೆಚ್ಚು ಅಡಿಕೆ ಬೆಳೆಯುವ ನಾಡು.ಅತೀ ಹೆಚ್ಚು ಭತ್ತ ಬೆಳೆಯುವ ನಾಡು.

ತುಮಕೂರಿನ ಪಾವಗಡ ದಲ್ಲಿ ಪ್ರಸಿದ್ದಿ ಪಡೆದಿರುವ 600 ವರ್ಷಗಳ ಇತಿಹಾಸವಿರುವ ಶನಿ ದೇವರ ದೇವಸ್ಥಾನವಿದೆ.ತುಮಕೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ 86 ಅಡಿಗಳಷ್ಟು ದೊಡ್ಡದಾದ ಆಂಜನೇಯಸ್ವಾಮಿಯ ಮೂರ್ತಿ ಬಹು ಆಕರ್ಷಣೆಯನ್ನು ಹೊಂದಿದೆ.

ತುಮಕೂರಿನ ತಿಪಟೂರು ತಾಲ್ಲೂಕಿನಲ್ಲಿ ತಾಯಿ ಚೌಡೇಶ್ವರಿ ದೇವಿಯ ಪುರಾತನ ದೇವಸ್ಥಾನವಿದೆ.ತುಮಕೂರಿನ ಕೊರಟಗೆರೆ ತಾಲೂಕಿನಲ್ಲಿ ಸುಪ್ರಸಿದ್ಧಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನವಿದೆ.ತುಮಕೂರಿನ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಯ ಜಾತ್ರೆ ಬಹಳ ದೊಡ್ಡ ಜಾತ್ರೆಯಾಗಿದ್ದು ವಿಜೃಂಭಣೆಯಿಂದ ನಡೆಯುತ್ತದೆ.

ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು

ಸಿದ್ದಗಂಗೆ.ಶಿವಗಂಗೆ.ನಾಮದ ಚಿಲುಮೆ.ದೇವರಾಯನ ದುರ್ಗ.ಗೂಳೂರು ಗಣಪತಿ ದೇವಾಲಯ ಕೈದಾಳ ದೇವಾಲಯ.ಗುಬ್ಬಿ ವೀರಣ್ಣ ನವರು ನಮ್ಮ ಕನ್ನಡ ಚಿತ್ರರಂಗದ ಕಲೆಯನ್ನು ಬೆಳಕಿಗೆ ತಂದವರು ಮತ್ತು ನಾಟಕದ ನಿರ್ದೇಶಕರಾಗಿದ್ದವರು ಹುಟ್ಟಿದ ನಾಡಿದು.

ರಂಗಾಯಣ ರಘು ಇತ್ತೀಚಿನ ಸಿನೆಮಾ ಗಳಲ್ಲಿ ಹಾಸ್ಯ ಪಾತ್ರವನ್ನು ಮಾಡುವ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡು ಇಡೀ ಕರ್ನಾಟಕ ದಲ್ಲೇ ಹೆಸರುವಾಸಿ ಯಾಗಿದ್ದರೆ ಅವರು ಕೂಡ ಇಲ್ಲಿಯವರೇ.ರಾಜರಾಮಣ್ಣ ನವರಂತಹ ಭೌಗೋಳಿಕ ತಜ್ಞರು ಹುಟ್ಟಿದ ಜಿಲ್ಲೆಯಿದು.

ಅಮರಶಿಲ್ಪಿ ಜಕಣಾಚಾರಿ ಕಲ್ಲುಗಳ ಕೆತ್ತನೆಯ ಮೂಲಕ ಜಗತ್ ಪ್ರಸಿದ್ಧ ಶಿಲ್ಪಿಯಾದವರು ಇದೇ ಜಿಲ್ಲೆಯವರು.ಆಯುರ್ವೇದ ವನಸಿರಿಯನ್ನು ಹೊಂದಿ ಸುಮಾರು ಒಂದು ಸಾವಿರ ಔಷಧಿ ಗಿಡಗಳನ್ನು ಹೊಂದಿರುವ ಆಯುರ್ವೇದ ಸಸ್ಯವನ ಇದೇ ತುಮಕೂರಿನ ನಾಮದ ಚಿಲುಮೆಯ ಪಕ್ಕದಲ್ಲಿದೆ.

LEAVE A REPLY

Please enter your comment!
Please enter your name here