ದಾಖಲೆಗಳ ಸರದಾರ ಈ ಆಟಗಾರ..ಇಂದು ಮಾಡಿದ ದಾಖಲೆಗಳೇನು? ಓದಿ..

0
404

ಫೈನಲ್  ಪಂದ್ಯವೆಂದೇ ಬಿಂಬಿತವಾಗಿರುವ ಕಾನ್ಪುರದಲ್ಲಿ ನಡೆದ ಭಾರತ ನ್ಯೂಜಿಲ್ಯಾಂಡ್ ಏಕದಿನ ದಿನ ಪಂದ್ಯದಲ್ಲಿ ಮೊದಲಿಗೆ ರೋಹಿತ್ ಶರ್ಮ 171ನೆ ಪಂದ್ಯದಲ್ಲಿ 106 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 15ನೆ ಏಕದಿನ ಶತಕ ದಾಖಲಿಸಿದರು.

ಅತೀ ಬೇಗನೆ ಧವನ್ ವಿಕೆಟ್ ಕಳೆದುಕೊಂಡ ಭಾರತಕ್ಕೆ ರೋಹಿತ್ ಜೊತೆಗೂಡಿದ ವಿರಾಟ್ ಕೊಹ್ಲಿ ಅವರು ಇಂದು ಮಾಡಿದ ದಾಖಲೆಗಳೇನು ಗೊತ್ತೇ?

ಓದಿ ಮುಂದೆ..

ಈ ಪಂದ್ಯದ್ಲಲೂ ಶತಕ ಬಾರಿಸುವ ಕಲೆಯನ್ನು ಮುಂದುವರಿಸಿದ ಕೊಹ್ಲಿ ಪಂದ್ಯದುದ್ದಕ್ಕೂ ಕಿವೀಸ್ ಗಳ ಕಿವಿ ಹಿಂಡಿದರು.ವಿರಾಟ್ ಕೊಹ್ಲಿ 202ನೆ ಏಕದಿನ ಪಂದ್ಯದಲ್ಲಿ 9000 ರನ್ ಪೂರೈಸಿ ಎಬಿ ಡಿವಿಲಿಯರ್ಸ್ ಅವರ ಹೆಸರಲ್ಲಿದ್ದ 9000 ರನ್ (214 ಪಂದ್ಯ) ನ ಧಾಖಲೆಯನ್ನು ಪುಡಿ ಪುಡಿ ಮಾಡಿದರು.

ಇಂದಿನ ಪಂದ್ಯದಲ್ಲಿ 32ನೆ ಏಕದಿನ ಶತಕವನ್ನೂ ಪೂರೈಸಿದರು.ಕೊಹ್ಲಿ 96 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಶತಕ ಗಳಿಸಿದರು.ಕೊಹ್ಲಿ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ 2ನೆ ಶತಕ ದಾಖಲಿಸಿದ್ದಾರೆ.ಮೂರು ಮಾದರಿಯ ಕ್ರಿಕೆಟ್ ನಲ್ಲಿ ಒಟ್ಟು 49 ಶತಕ ಪೂರ್ಣಗೊಳಿಸುವ ಮೂಲಕ 48 ಶತಕ ಸಿಡಿರುವ ರಾಹುಲ್ ದ್ರಾವಿಡ್ ರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

LEAVE A REPLY

Please enter your comment!
Please enter your name here