ದಾಖಲೆ ಮುರಿಯಲೆಂದೇ ಹುಟ್ಟಿರುವ ವಿರಾಟ್ ಮಾಡಿರುವ ಹಾಗೂ ಮುಂದೆ ಮುರಿಯಲಿರುವ ದಾಖಲೆಗಳು ಯಾವುವು ಗೊತ್ತೇ?

0
1399

ಮಾಸ್ಟರ್ ಬ್ಲಾಸ್ಟರ್ ಮೊದಲು ದಾಖಲೆಗಳನ್ನು ಮಾಡೋವಾಗ ಈ ದಾಖಲೆಗಳನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನಲಾಗುತ್ತಿತ್ತು.ಆದರೆ 28 ವರ್ಷ ವಯಸ್ಸಿನ ಈ ಆಟಗಾರ ಮಾತ್ರ ಸಚಿನ್ ಅವರ ಎಲ್ಲಾ ದಾಖಲೆಗಳನ್ನು ಮುರಿಯಲೆಂದೇ ಕ್ರಿಕೆಟ್ ಗೆ ಬಂದಂತಿದೆ.ಯಾರು ಗೊತ್ತಾ  ಆ ಆಟಗಾರ…

ಓದಿ ಮುಂದೆ…

ಆ ಆಟಗಾರ ಬೇರ್ಯಾರು ಅಲ್ಲ ನಮ್ಮ ವಿರಾಟ್ ಕೊಹ್ಲಿ.ನಿನ್ನೆಯ ಪಂದ್ಯದಲ್ಲಿ ಭಾರತ ಸೋತರೂ ವಿರಾಟ್ ಕೊಹ್ಲಿ ಭರ್ಜರಿ ದಾಖಲೆಗಳನ್ನೂ ಮಾಡಿದ್ದಾರೆ

ಅವರ ದಾಖಲೆಗಳು ಹೀಗಿವೆ..

ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 31ನೇ ಶತಕ; ಅತೀ ಹೆಚ್ಚು ಶತಕ ಬಾರಿಸಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ.ಸಚಿನ್ 49 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ

ಏಕದಿನ ಕ್ರಿಕೆಟ್ ವೃತ್ತಿಜೀವನದ 200ನೇ ಪಂದ್ಯದಲ್ಲಿ ಶತಕ ಭಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ 2ನೇಯವರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡೀವಿಲಿಯರ್ಸ್ ಕೂಡ ತಮ್ಮ 200ನೇ ಪಂದ್ಯದಲ್ಲಿ ಶತಕ ಭಾರಿಸಿದ್ದರು. ಆದರೆ, 200ನೇ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿಯವರ ಹೆಸರಿಗೆ ದಾಖಲಾಗಿದೆ.

ಒಂದು ವರ್ಷದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕರ ಪಟ್ಟಿಯಲ್ಲಿ ಕೊಹ್ಲಿಗೆ ಅಗ್ರಸ್ಥಾನ. ಈ ವರ್ಷ ಕೊಹ್ಲಿ 24 ಇನಿಂಗ್ಸಲ್ಲಿ 1,318 ರನ್ ಗಳಿಸಿದ್ದಾರೆ. ಅಜರುದ್ದೀನ್ 1998ರಲ್ಲಿ 33 ಇನಿಂಗ್ಸ್’ಗಳಿಂದ 1,268 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ವಿಶ್ವಮಟ್ಟದಲ್ಲಿ ವರ್ಷವೊಂದರಲ್ಲಿ ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ ಕ್ಯಾಪ್ಟನ್’ಗಳೆಂದರೆ ರಿಕಿ ಪಾಂಟಿಂಗ್ ಮತ್ತು ಮಿಸ್ಬಾ ಉಲ್ ಹಕ್. ಇವರಿಬ್ಬರು 1,424 ಮತ್ತು 1,373 ರನ್ ಗಳಿಸಿದ್ದಾರೆ.

ಈ ನಾಲ್ಕು ದಾಖಲೆಗಳನ್ನು ಕೊಹ್ಲಿ ಮುಂದಿನ ದಿನಗಳಲ್ಲಿ ಮುರಿಯಬಹುದು ಅವು ಯಾವುವು ಗೊತ್ತೇ..

ಅತೀ ಹೆಚ್ಚು ಶತಕಗಳ ದಾಖಲೆ

ಈಗಾಗಲೇ ನಮಗೆಲ್ಲರಿಗೂ ತಿಳಿದಂತೆ ಸಚಿನ್ 39 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ,ಆದರೆ ಇನ್ನೊಂದು  15 20 ಪಂದ್ಯಗಳಲ್ಲಿ ವಿರಾಟ ಈ ದಾಖಲೆಯನ್ನು ಧೂಳಿಪಟ ಮಾಡಬಲ್ಲರು.

ಅತೀ ಹೆಚ್ಚು ಬ್ಯಾಟಿಂಗ್ ಸರಾಸರಿ

ಅತೀ ಹೆಚ್ಚಿನ ಬ್ಯಾಟಿಂಗ್ ಸರಾಸರಿ ಆಸ್ಟ್ರೇಲಿಯಾದ ಮೈಕಲ್ ಬೇವನ್ ಹೆಸರಲ್ಲಿದೆ.ಅವರ ಬ್ಯಾಟಿಂಗ್ ಸರಾಸರಿ 53.58 ಆಗಿದೆ.ಬೇವನ್ ಅವರ ನಂತರದ ಸ್ಥಾನದಲ್ಲಿ ನಮ್ಮ ಕ್ಯಾಪ್ಟನ್ ಕೂಲ್ ಧೋನಿ ಇದ್ದಾರೆ.ಅವರ ನಂತರದ ಸ್ಥಾನದಲ್ಲಿ 51 ರ ಸರಾಸರಿಯಲ್ಲಿ ಕೊಹ್ಲಿ ಇದ್ದಾರೆ.ಮುಂದಿನ ದಿನಗಳಲ್ಲಿ ಇದನ್ನು ಮುರಿದರೆ ಆಶ್ಚರ್ಯವಿಲ್ಲ.

ಅತೀ ವೇಗದ ಶತಕ

37 ಎಸೆತಗಳಳ್ಳಿ ಶತಕ ಬಾರಿಸಿದ ದಾಖಲೆ ಪಾಕಿಸ್ತಾನ ತಂಡದ ಶಾಹಿದ್ ಅಫ್ರಿದಿಯವರ ಹೆಸರಲ್ಲಿದೆ. ಈಗಾಗಲೇ ವಿರಾಟ್ 52 ಎಸೆತಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಮ್ಮೆ ಶತಕ ಸಿಡಿಸಿದ್ದಾರೆ.ಮುಂದೆ 36 ಎಸೆತಗಳಲ್ಲಿ ಶತಕ ಸಿಡಿಸಬಹುದು.

ಅತೀ ಹೆಚ್ಚು ಏಕದಿನ ವಯಕ್ತಿಕ ಮೊತ್ತ

ಅತೀ ಹೆಚ್ಚಿನ ವಯಕ್ತಿಕ ಮೊತ್ತ ಹೊಡೆದ ಪಟ್ಟಿಯಲ್ಲಿ ಸಚಿನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಹೊಡೆದ 200 ರನ್ನು ಮೊದಲಿನ ಕ್ಯಾಖಲೆಯಾಗಿತ್ತು ಅದನ್ನು ವೀರೇಂದ್ರ ಸೆಹೆವಾಗ್  219 ರನ್ನ ಹೊಡೆದು ಮುರಿದರು.ಮುಂದೆ ವಿರಾಟ್ ಕೊಹ್ಲಿ ಈ ದಾಖಲೆಯನ್ನೂ ಮುರಿಯಬಹುದು.

LEAVE A REPLY

Please enter your comment!
Please enter your name here