ನಮ್ಮೂರಿನ ಚರಂಡೀಲಿ ಕೊಳೆ ಹರಿದು ಹೋದರೆ ಸ್ವಿಟ್ಜರ್ಲ್ಯಾಂಡ್ ಚರಂಡಿಗಳಲ್ಲಿ ಏನು ಹರಿದು ಹೋಗುತ್ತದೆ ಗೊತ್ತೇ…?

0
1140

ಈ ಲೇಖನ ನಿಮಗೆ ಏನನ್ನು ನೆನಪಿಸಬಹುದು ಗೊತ್ತೇ? ವಿಜಯನಗರ ಸಂಸ್ಥಾನದ ಶ್ರೀಕೃಷ್ಣದೇವರಾಯನ  ಕಾಲದಲ್ಲಿನ ವಿಷಯ.ಯಾವುದೆಂದರೆ,ಬೀದಿ ಬದಿಗಳಲ್ಲಿ ಚಿನ್ನ ಬೆಳ್ಳಿ ಮುತ್ತು ರತ್ನಗಳನ್ನು ಮಾರುತ್ತಿದ್ದುದ್ದು.ಆದರೆ ಇಲ್ಲೊಂದು ಸುದ್ದಿ ಇದೆ ನೋಡಿ, ಓದಿದರೆ ಹಾ? ಹೌದ ಅಂತೀರಾ..ಓದಿ ಮುಂದೆ

ಸ್ವಿಝರ್ ಲ್ಯಾಂಡ್ ನ ಚರಂಡಿಗಳಲ್ಲಿ ಪ್ರತಿ ವರ್ಷ 11,72,88,180 ರೂ. ಮೌಲ್ಯದ 43 ಕೆ.ಜಿ. ಚಿನ್ನ ಹರಿದು ಹೋಗುತ್ತದಂತೆ..!. ಈ ವಿಚಾರವನ್ನು ಸ್ವಿಝರ್ ಲ್ಯಾಂಡ್ ನ ವಿಜ್ಞಾನಿಗಳು ತಿಳಿಸಿದ್ದಾರೆ .ದೇಶದ ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ ಹೊರಬರುವ ಕೆಸರಿನಿಂದಾಗಿ ಭಾರೀ ಪ್ರಮಾಣದ ಚಿನ್ನ ವ್ಯರ್ಥವಾಗುತ್ತಿದೆ ಎಂದು ಅಕ್ವಾಟಿಕ್ ಸೈನ್ಸ್ ಆಯಂಡ್ ಟೆಕ್ನಾಲಜಿಯ ಸ್ವಿಸ್ ಫೆಡರಲ್ ಇನ್ ಸ್ಟಿಟ್ಯೂಟ್ ನ ವಿಜ್ಞಾನಿಗಳು ತಿಳಿಸಿದ್ದಾರೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

ಕೆಳಗಿರುವ ಟ್ವಿಟ್ ನೋಡಿ…

ತ್ಯಾಜ್ಯ ನೀರಿನಲ್ಲಿ ಕಂಡುಬರುವ ಈ ಅಂಶಗಳು ವಾತಾವರಣಕ್ಕೆ ತೊಂದರೆಯನ್ನುಂಟು ಮಾಡುವುದಿಲ್ಲ. ಇದರ ಯಾವುದೇ ಉಪಯೋಗವಾಗುವುದಿಲ್ಲ. ಆದರೆ ಈ ಚಿನ್ನವನ್ನು ಮರಳಿ ಪಡೆಯಬಹುದಾದ ಸ್ಥಳಗಳನ್ನೂ ವಿಜ್ಞಾನಿಗಳು ಗುರುತಿಸಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಚರಂಡಿ ನೀರಿನಲ್ಲಿ ಸುಮಾರು 3000 ಕೆ.ಜಿ. ಬೆಳ್ಳಿ ಕೂಡ ಹರಿದುಹೋಗುತ್ತಿದೆ ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here